ಈ ನೆಲದ ಗಾಳಿ ನೀರು ಬೆಳಕು
ತೊಗೋಳ್ಳಾಕ ನಮಗ ಹಕ್ಕೈತಿ
ಹರಿತ ಮಾತುಗಳೆಂಬಲಗಿನ್ಯಾಗ
ಹೃದಯವನ್ಯಾಕ ತಿವಿತೀರಿ
ನಾವೇನಾದ್ರು ಅಂದ್ರ ತಡ್ಕೊಳ್ಳಕಾಗದೆ
ಕಾಲಾಗ ಹೊಸಕಿ ನಮ್ಮ
ಸೊಲ್ಲ ಇಲ್ದಾಂಗ ಮಾಡ್ತಿರಿ
ಇದರಾಗ ಸ್ವರ್‍ಗ ಕಾಣ್ತೀರಿ
ತನ್ನ ಮೂಲವನ್ನರಿಯಲಾರದೇ
ಅಧಿಕಾರದ ಅಮಲಿನ್ಯಾಗ
ನಮ್ಮ ಹುಟ್ಟು ಸಾವು ತಮ್ಮ
ಕೈಯಾಗೈತೆಂದು ಢುರ್‍ಕಿ ಹಾಕ್ತಿರಿ
ರಂಡಿ ಮುಂಡೇರ ಮಕ್ಕಳು
ಮೂಗ್ದಾಣಿಲ್ಲದ ಗೂಳಿ ಹಾಂಗ
ದುರಹಂಕಾರಿಯಾಗಿ ಓಲಾಡ್ತೀರಿ
ಜಾತಿ ಬುದ್ದಿ ತೋರಿಸ್ತೀರಿ
ಕಾಗೀಗೆ ಅಧಿಕಾರ ಕೊಟ್ರ
ಕಛೇರಿ ತುಂಬಾ…..ಹಾಂಗ
ಕಡೀಗೆ ಹಳೇ ಗಂಡನ
ಪಾದವೇ ಗತಿಯಾದೀತೆಂದು
ಹ್ಯಾಂಗ ತಿಳಿದೀತು
ನಮೋ ನಮೋ ದೇವಾ
ಇವರ ನಡುವೆ ಹ್ಯಾಂಗ ಬದುಕಬೇಕು?
*****