ಕಾಡ ಬೇಡ ಗೆಳತಿ ಹೊನ್ನಾಡ ಬೇಡ ಬೆಡಗಿ ಒಲವಿನಾಸೆರೆ ಬಯಸಿ ಬರಸೆಳೆದು ಬಿಗಿದಪ್ಪಿ ಮುದಗೊಳಿಸಿ ನಿನ್ನ ಕರೆದಿದೆ ಕಾಡ ಬೇಡ ಗೆಳತಿ ನಿನ್ನತನ ನೆನೆದಾಗ ಉಸಿರುಸಿರು ನನ್ನ ಮನದಾಗ ಹೊನ್ನಾಡ ಬೇಡ ಹುಡುಗಿ ಅಕ್ಕ ತಂಗೀರು ನನ್ನ ಬೆನ್ನ ಮ್ಯಾಲೆ ನೀರು ಹೊಯ್...

ಎತ್ತೆತ್ತ ನೋಡಲಿ ದೇವಾ ನಾನು ನೀವೇ ನನ್ನ ಕಣ್ಣ ತುಂಬ ತುಂಬಿದ್ದಿರಾ ಕಣ್ಣು ಮಚ್ಚಿದರಾಯ್ತು ನಾನು ನೀವೆ ಎನ್ನ ಸಪ್ನದಲ್ಲಿ ಬಂದಿದ್ದೀರಾ ಯಾರು ಹೇಳದರೋ ನಮಗಂದು ಮನಸ್ಸು ತುಂಬ ಮರ್ಕಟವೆಂದು ಆದರೆ ಮನಸ್ಸನ್ನು ಕರೆದು ತೋರಿದವರು ಇದೆಲ್ಲ ಸುಖವೆಂದು ...

ಭೋಜನವಾದ ಮೇಲೆ ಅಪರಾಜಿತನು ವೇದವ್ಯಾಸನನ್ನು ಕಟ್ಟಿ ಕೊಂಡು ಬೀದಿ ಬೀದಿಯಲ್ಲಿ ಕಾಣಸಿಕ್ಕಿದವರ ಕೂಡೆ–“ಇಗೋ ಚಂಚಲ ನೇತ್ರರ ಛಟ ಹಾರಿಸಿ ಬಿಡುತ್ತೇನೆ. ಬ್ರಹ್ಮಸಭೆ ಕೂಡಿಸಿ ಉಪನಯನವಾಗ ದಂತೆ ಕಟ್ಟು ಮಾಡಿಸಿಬಿಡುತ್ತೇನೆ. ಫಸಾದ ಮಾಡಲಿಕ್ಕೆ ನೋಡ...

ಸುಸಮರ್‍ಥನಾದ ವಿದ್ಯುತ್‌ ಪುತ್ರನೊಬ್ಬ ತಾನೀ ಭೂಮಿಗಿಳಿದು ಬಂದ ಅಪ್ರತಿಮ ತ್ವರಿತಗತಿ ಅಗ್ನಿ-ಪಾದಗಳಿಂದ. ಮಾನವನ ಮೈ ಕಟ್ಟು ಘನಗರ್‍ಜನೆಯ ತೊಟ್ಟು, ನರಗರ್‍ಭದಲ್ಲಿ ಹುಟ್ಟಿತ್ತು ಬೆಳಕು. ಸ್ವರ್‍ಗದತಿ ಶಾಂತಗತಿ, ಮಹಿಮೆಯಾ ಮಾಧುರ್‍ಯ, ಪರಿಶುದ್ಧರಾ...

ಸಾರಂಗ ಅಗಲಿಕೆಯೆ, ನಿನ್ನಗಲನಳೆಯುವವರಾರು ? ಬಗೆಯೊಲವೆ ನಿನ್ನ ನೆಲೆ ತಿಳಿಯುವವರಾರು ? ಹಿಂದೆ ಗೋವಳತಿಯರು ನಂದಕಂದನನಗಲಿ ದಂದುಗದಿ ಮೈಮನದ ಹೊಂದಿಕೆಯ ಮರೆಯುತಲಿ ನೊಂದು ನಿಡುಸರದಿ ಮನಬಂದಂತೆ ಕೂಗುತಲಿ ಬೆಂದು ಬಾಯ್‌ಬಿಡುತ ಅಲೆದಾಡಿದರು ಅಡವಿಯಲಿ ...

ಆಡಿ ಬಾರೋ ರಂಗ ಅಂಗಾಲ ತೊಳೆದು ನಿನ್ನಾ ಅಪ್ಪಿ ಮುದ್ದಾಡುವೆ ಅನುಗಾಲ| ಅಕ್ಕರೆಯಿಂದಲಿ ಚೊಕ್ಕಮಾಡುತ ನಿನ್ನ ಸೇವೆಯಮಾಡುವೆ ನೂರು ಕಾಲ|| ಬೆಳ್ಳಿಬಟ್ಟಲ ಹಾಲು ಹಣ್ಣು ಫಲಹಾರವ ಅಣಿ ಮಾಡಿರುವೆ ನಿನಗಾಗಿ| ಅದನ್ನೆಲ್ಲಾ ನೀ ಸೇವಿಸೆ ಅಮ್ಮಾ ಸಾಕು ಎಂದೊಮ...

ಹೂತು ಹೋಗಿದೆ ಒಲವಿನ ಮಾತು ಉಸಿರು ನರಳಿದೆ ಸೆಣಸುತ ಸೋತು ಸಾಯುವ ಮುಂಚೆ ನೀರು ಕೊಡಿ ಬಾಯಾರಿದೆ ಹೃದಯ. ಹೊಟ್ಟೆಯ ಒಳಗಿನ ಸುಟ್ಟ ವಾಸನೆ ಬೀದಿಗೆ ಹರಿದು ಬಡತನ ಬಯಲು ಮೂಗು ಮುಚ್ಚಿದೆ ಮನೆ ಮನೆ ಸಾಲು ಬೀದಿ ಬೀದಿಯಲಿ ಹುಡುಕಿ ನೋಡಿದರು ಹೃದಯದ ವಿಳಾಸ...

ಒತ್ತಾಸೆ : ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಬಳ್ಳಾರಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಇದೇ ವರ್ಷ ಆಗಸ್ಟ್ ತಿಂಗಳಿನಲ್ಲಿ ಹೂವಿನ ಹಡಗಲಿಯಲ್ಲಿ ವ್ಯವಸ್ಥೆ ಮಾಡಿದ್ದ ‘ಜನತೆಯತ್ತ ಕನ್ನಡ’ ಕಾರ್ಯಕ್ರಮದ ಭಾಗವಾಗಿ ಇದ್ದ ವಿಚಾರಗೋಷ್ಠಿಯೊಂದರಲ...

ಬಿರಿಬಿರಿದ ಬಕುಲ ಪರಿಮಳ ಸೂಸಿಚೆಲ್ಲಿ ಹರವಿರುವ ಹಾಲ್ಬೆಳ್ಳಿ ಬೆಳದಿಂಗಳಲ್ಲಿ ತರುಲತೆಯ ಕಿರುಶಬ್ದ ಸುಳಿಗಾಳಿಯಲ್ಲಿ ಮರಿಕೋಗಿಲೆಯ ಕೂಗು ಮಧುರಧ್ವನಿಯಲ್ಲಿ ಝರಿಯೊಂದು ಚಿಮ್ಮುತಿದೆ ಗಿರಿಶಿಖರದಲ್ಲಿ ದರಿಯಲ್ಲಿ ಹರಿಯುತಿದೆ ಬಹುದೂರದಲ್ಲಿ ಹರವಿಕೊಂಡಿ...

ಕೇಳುತ್ತಿರುವುದೊಂದು ದನಿಯು ಏಕನಾದದಿಂದ ನುಡಿಯು ನೇತಿ ನೇತಿ ಎಂಬ ನಿಗಮ ನೀತಿ ಕೇಳುತಿರುವದಮ್ಮ ಮಿಡಿವುದೇಕೊ ಏಕನಾದ ನುಡಿವುದೇನೊ ಹಲವು ವಾದ. ಒಂದು ತಂತಿಯಿಂದ ಹಲವು ನಾದವೊಡೆದು ರಾಗರಸವು ಹಳೆಯದನ್ನು ಹೊಸದು ಮಾಡಿ ಹೂಸದ ಹಳಯದಾಗಿ ಮಾಡಿ ಧರ್‍ಮವು...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...