“ಆಹಾ! ಇಂತಾ ಅನ್ಯಾಯ ಈ ಊರಲ್ಲಿ ನಡೆಯುವದಾದರೆ ನಾನು ಮತ್ಯಾವ ಊರಿಗೆ ಹೋಗಲಿ! ಜೀವಧರಿಸಿ ನನ್ನ ಗಂಡನನ್ನು ಮಠದಲ್ಲಿ ಕೊಂದ ಮಾರೆಗಾರರ ಪಕ್ಷವನ್ನೇ ಸರ್ಕಾರದ ಜನರು ಹಿಡಿದ ಮೇಲೆ ಬಡ ವೆಯಾದ ನನ್ನ ಸಂಕಷ್ಟ ಯಾರಿಗೆ ಹೇಳಲಿ? ಭಗವಂತನೇ! ಹೇ ಜಿನೇಶ್ವರಾ!...

ಹೃದಯವು ದಣಿವಿಲಿ ನವೆದಿತ್ತು, | ಸ್ಪಂದಕೆ ಮರೆವೋ ಕವಿದಿತ್ತು ಎಲ್ಲವು ಇತ್ತೆಂದಾಗಿತ್ತು, | ಮುಂದಕೆ ಇನ್ನಿಲ್ಲೆನಿಸಿತ್ತು ಬಿಲ್ಲೇ ಕಳಚಿದೆ ಕೈಯಿಂದ, | ಹೆದೆ ಹರಿದಿದೆ ಒಳಹುರಿಯಿಂದ ಕೈಗಳ ಹಿಡಿತವೆ ಸಡಿಲಾಗಿ, | ಎನಿಸಿದೆ ಆಗದು ಒಂದಾಗಿ ಪ್ರಾಣಲ...

ಬಾರ ಕಾರಹುಣ್ಣಿವೆ, ದೈವದ ಕಾರುಣ್ಯವೆ! ೧ ದೂರದಿಂದ ನಿನ್ನ ವಾರ್ತೆ ಹಾರಿ ಸಾರಿ ಬರುತಲಿದೆ…. ಹಾರಯಿಸುತ ನಿನ್ನ ಬರವ ದಾರಿ ಕಾಯ್ವೆನೆಂದಿನಿಂದೆ ; ಬಾರ ಕಾರಹುಣ್ಣಿವೆ, ನಮ್ಮೆಲ್ಲರ ಪುಣ್ಯವೆ? ೨ ಬಡವರ ಬರಿಯೊಡಲಿನಂತೆ ಬರಿದು ಬರಿದು ಬಾನೆಲ್...

ಶೃಂಗಾರ ಕಾವ್ಯ ರಚಿಸುವೆ ನೀ ಸಹಕರಿಸಿದರೆನಗೆ| ಶೃಂಗಾರತೆಯ ವಿರಚಿಸುವೆ ಅಮರ ಪ್ರೇಮಿಯಾಗಿ ನಿನ್ನ ಸಹಯೋಗದೊಳಗೆ|| ನಾ ಬರೆಯಲನುವಾಗೆ ತೆರೆದಿಡುವೆಯ ನಿನ್ನಯ ಸಿರಿ ಸೌಂದರ್‍ಯ ಪುಟವ| ಮೋಹ ಮನ್ಮಥನಾಗಿ ರಚಿಸುವೆ ನೂತನ ರತಿ ಸಂವಿಧಾನ| ಬೆತ್ತಲ ಕಾಳಿರು...

ನಾನು ಕಾಲಿಟ್ಟಲ್ಲಿ- ಕರುಳು ಕಿಟಾರನೆ ಕಿರುಚಿ ಬೆವರೊಡೆಯುತ್ತದೆ. ನೆರಳು ನಗುತ್ತದೆ. ನಾನು ಕೂತಲ್ಲಿ- ನೆಲ ಕೀವೊಡೆದು ಬಾವು ಬಿರಿಯುತ್ತದೆ; ನೋವು ಹರಿಯುತ್ತದೆ. ನಾನು ಮಲಗಿದಲ್ಲಿ- ಮಂಚ ಮೌನ ಮುರಿದು ಉರಿಯುತ್ತದೆ; ಕನಸು ಬೂದಿಯಾಗುತ್ತದೆ. ****...

ಅರ್ಥರ ಮಿಲ್ಲರ ಬರೆದ “ದಿ ಡೆತ್ ಆಫ್ ಅ ಸೇಲ್ಸಮ್ಯಾನ್” ಇದೊಂದು ಆಧುನಿಕ ನಾಟಕ. ಆಧುನಿಕ ಅಪಾರ್‍ಟಮೆಂಟುಗಳು, ಅಟೋಮೊಬೈಲಗಳು, ಮುಗಿಯದ ರಸ್ತೆಗಳು, ಕರೆನ್ಸಿಗಳು, ಖರೀದಿ, ಮಾರಾಟ, ಜನಜಂಗುಳಿ, ಹೀಗೆ ಎಲ್ಲವೂ ಮುಂದುವರಿದ ಸಮಾಜದ ದ್ಯೋ...

ರಜಾ ದಿನದಂದು ವೇಳೆ ಕಳೆಯಲೆಂದು ಪುಟ್ಟ ಪುಟ್ಟಿ ಸೇರಿದರು ತಮ್ಮ ತೋಟದತ್ತ ನಡೆದರು ತೋಟದ ದಾರಿ ಮಧ್ಯೆ ಹರಿಯುತ್ತಿತ್ತು ನದಿ ನದಿಯ ಮರಳಿನಲ್ಲಿ ಆಟವಾಡಿದರಲ್ಲಿ ಪುಟ್ಟ ಹೇಳಿದ ಪುಟ್ಟಿಗೆ ಮರಳಲಿ ಮನೆ ಕಟ್ಟಲು ಮರಳಲಿ ಮನೆ ಹೇಗಣ್ಣ? ಬೇಗ ತಿಳಿಸು ಪುಟ...

ರತ್ನಸಿಂಹಾಸನದಿ ಮಣಿ ಕಿರೀಟವನಿಟ್ಟು ತುಂಬಿದೊಡ್ಡೋಲಗದಿ ರಘುವೀರ ಶೋಭಿಸಲು ಪಕ್ಕದಲಿ ಶ್ರೀಸೀತೆ ಮಂಡಿಸಿರೆ ನಸುನಗುತ ಸರುವರುಂ ಕಣ್ತುಂಬ ನೋಡುತ್ತ ಸೇವಿಪರು. ಭರತ ಶತ್ರುಘ್ನರುಂ ಚಾಮರವನಿಕ್ಕುತಿರೆ ಸುಗ್ರೀವ ಮಾರುತಿ ವಿಭೀಷಣರ್ ಮೊದಲಾಗಿ ರಘುಪತಿಯ...

ಗವ್ವೆನುವ ಗೂಢದಲಿ ಕತ್ತಲೆಯ ಮುಸುಕಿನಲಿ ಭಾರವಾದ ಎಣ್ಣೆಗಟ್ಟಿದ ಮಸುಕಾದ ಮೂಗುತಿ ತಲೆ ತು೦ಬ ಮುಸುಕು ಹೊದ್ದು ಮೊಳಕಾಲುಗಳ ಮಧ್ಯೆ ತಲೆ ತೂರಿಸಿ- ಮುಳುಮುಳು ಅತ್ತು ತಲೆ ತಗ್ಗಿಸಿ ಕೂಡದೇ, ವಿಷ ಜಂತುಗಳ ಎದೆಗೆ ಒದ್ದು – ತಲೆಯೆತ್ತಿ ನಡೆದರೆ,...

ಮುಗಿಯಿತೆ ನಾಟಕವು ಪರದೆ ಕೆಳಕ್ಕಿಳಿಯಿತೆ ಪ್ರೇಕ್ಷಕರೆದ್ದು ಹೋಗಿಯಾಯಿತೆ ನೇಪಥ್ಯ ಬರಿದಾಯಿತೆ ವೇಷ ಕಳಚಬೇಕು ನಟರು ಮುಖವ ತೊಳೆಯಬೇಕು ಅವರು ತೊಳೆದರೂನು ಬಣ್ಣವು ಮೋರೆಯಲ್ಲಿ ಇನ್ನುವು ಇನ್ನೂ ಏನೊ ಉಳಿದಂತೆ ಕತೆಯಿನ್ನೂ ಮುಗಿಯದಂತೆ ಮಾತು ಅರ್‍ಧವು...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...