ಗವ್ವೆನುವ ಗೂಢದಲಿ
ಕತ್ತಲೆಯ ಮುಸುಕಿನಲಿ
ಭಾರವಾದ ಎಣ್ಣೆಗಟ್ಟಿದ
ಮಸುಕಾದ ಮೂಗುತಿ
ತಲೆ ತು೦ಬ
ಮುಸುಕು ಹೊದ್ದು
ಮೊಳಕಾಲುಗಳ ಮಧ್ಯೆ
ತಲೆ ತೂರಿಸಿ-
ಮುಳುಮುಳು ಅತ್ತು
ತಲೆ ತಗ್ಗಿಸಿ ಕೂಡದೇ,
ವಿಷ ಜಂತುಗಳ ಎದೆಗೆ
ಒದ್ದು – ತಲೆಯೆತ್ತಿ ನಡೆದರೆ,
ಕುಕ್ಕಿ ಕುಕ್ಕಿ ನೋಯಿಸುವ
ರಣಹದ್ದುಗಳ ಭೇದಿಸಿ
ಮೌಡ್ಯತೆಯ
ಪೊರೆ ಹರಿದು
ನೋವಿನಲ್ಲೂ ನಗುವ
ಮುಖವಾಡಗಳ ಬದಿಗಿಟ್ಟು
ನಿಜವಾದ ಬದುಕು
ಬದುಕುವುದಕ್ಕೆ
ಸತ್ಯದ ಸಮೀಪ ಬಾ.
*****