Arthur Miller ನ Death of a Salesman ಆಧುನಿಕತೆಯಲ್ಲಿ ಬದುಕಿನ ದುರಂತ.

Arthur Miller ನ Death of a Salesman ಆಧುನಿಕತೆಯಲ್ಲಿ ಬದುಕಿನ ದುರಂತ.

ಅರ್ಥರ ಮಿಲ್ಲರ ಬರೆದ “ದಿ ಡೆತ್ ಆಫ್ ಅ ಸೇಲ್ಸಮ್ಯಾನ್” ಇದೊಂದು ಆಧುನಿಕ ನಾಟಕ. ಆಧುನಿಕ ಅಪಾರ್‍ಟಮೆಂಟುಗಳು, ಅಟೋಮೊಬೈಲಗಳು, ಮುಗಿಯದ ರಸ್ತೆಗಳು, ಕರೆನ್ಸಿಗಳು, ಖರೀದಿ, ಮಾರಾಟ, ಜನಜಂಗುಳಿ, ಹೀಗೆ ಎಲ್ಲವೂ ಮುಂದುವರಿದ ಸಮಾಜದ ದ್ಯೋತಕಗಳು. ಅದರೆ ಮಾನವನ ಒಳಪ್ರಜ್ಞೆ ಹಾಗೂ ಮಾನಸಿಕ ಹೋರಾಟಗಳ ವ್ಯಕ್ತ ರೂಪ. ಅಮೇರಿಕಾದ ಆಧುನಿಕ ಸಮಾಜ ಹಾಗೂ ಜನಸಾಮಾನ್ಯನ ಬದುಕಿನಲ್ಲಿ ಅಮೇರಿಕನ್ ಬದುಕು ಹೇಗೆ ಬರಿಯ ವಿಫಲತೆಗಳ ಆಗರ ಎಂಬುದನ್ನು ಕಟ್ಟಿಕೊಡುತ್ತದೆ.

ಅದು ಸರಿ ರಾತ್ರಿ ಎಲ್ಲರೂ ಮಲಗಿದ್ದಾರೆ. ಕಾರು ಚಾಲಕ ೬೦ರ ಪ್ರಾಯದ Willy Loman ಆಗಷ್ಟೇ ಮನೆಗೆ ಬಂದಿದ್ದಾನೆ. ನ್ಯೂ ಇಂಗ್ಲೇಂಡಿನಲ್ಲಿ ಆತನ ಕಾರಿನೊಂದಿಗೆ ಹೊಸ ಕೆಲಸ ಹುಡುಕಾಟಕ್ಕೆ ಹೊರಟು ಕಾರು ಚಲಾಯಿಸಲಾಗದೇ ಮರಳಿ ಬಂದಿದ್ದಾನೆ. ಆತನಿಗೆ ಇತ್ತಿತ್ತಲಾಗಿ ಮೊದಲಿನಂತೆ ಕಾರು ಚಲಾಯಿಸಲಾಗದು. ಪತ್ನಿ Linda ಹಲವಾರು ಬಾರಿ ಎಚ್ಚರಿಸಿದ್ದಾಳೆ. ಕಾರಿನ ಸ್ಟೇರಿಂಗ ಬದಲಾಯಿಸು ಎಂದು. ಆದರೆ ಆತನಿಗೆ ಗೊತ್ತು ನ್ಯೂನ್ಯತೆ ಕಾರಿನದಲ್ಲವೆಂದು ಬದಲಾಗಿ ಆತನ ಮೈ ಏರಿರುವ ಆ ಹಾಳು ಖಯಾಲಿ. ಸದಾ ಪ್ರಶ್ತುತವನ್ನು ಮರೆತು ಭೂತಕಾಲದ ಘಟನೆಗಳ ಮೆಲಕು ಹಾಕುತ್ತ ತನ್ನನ್ನು ಮರೆತುಬಿಡುವುದು. ಅದರ ಪರಿಣಾಮ ಕಾರಿನ ಅಡ್ಡಾದಿಡ್ಡಿ ಚಲಾಯಿಸುವುದು.

ಟ್ರಿಪ್ ಮುಗಿಸಿ ಮನೆಗೆ ಬಂದ ವಿಲ್ಲಿ ಪತ್ನಿ ಲಿಂಡಾಳೊಂದಿಗೆ ಅರೆಬರೆ ಮಾತು ಮುಗಿಸಿ ಪುನಃ ಹಳೆಯ ನೆನಪುಗಳ ಏಣಿ ಏರುತ್ತಾನೆ. ಅದು ತಾನು ಸೇಲ್ಸ ಮ್ಯಾನ್ ಆಗಿ ದುಡಿದ ದಿನಗಳು, ಮಾಡಿದ ಕೆಲಸಗಳು, ತನ್ನ ಹಳೆಯ ಬಾಸ್ ವೆಗನಾರ್ ಸಹೃದಯನಾಗಿದ್ದ. ಆದರೆ ಈಗ ಆತನ ಮಗ ಹಾವರ್ಡ ಯಾವ ಅನುಕಂಪ ಕರುಣೆಗಳ ಕಟು ಹೃದಯಿ. ತನ್ನ ಸಂಸಾರ ಮಕ್ಕಳು ದುಡಿತ ಈ ಮೂರು ಸಂಗತಿಗಳ ಸುತ್ತ ಬಂಧಿ ಆತ. ಆಧುನಿಕ ಅಮೇರಿಕಾದ ಸಾಂಕೇತಕ ವ್ಯಕ್ತಿತ್ವಕ್ಕೆ ಉದಾಹರಣೆ ನೆರೆಹೊರೆ ಕೆಲಸಗಾರರು, ಹೀಗೆಂದು ಆತ ಯಾರ ಮೇಲೂ ಯಾವ ಕಾಳಜಿ ಅನುಕಂಪ ತೋರಿಸಲಾರ. ಹಾಗಾಗೇ ವಯಸ್ಸಾದ ವಿಲ್ಲಿಯ ಅಸಮರ್ಥತೆಯನ್ನು ತಿಳಿದು ೩೦ ವರ್ಷಗಳಿಂದ ದುಡಿಯುತ್ತಿದ್ದ ಆತನನ್ನು ಕೆಲಸದಿಂದ ತೆಗೆದುಹಾಕಿದ್ದಾನೆ. ಇದು ವಿಲ್ಲಿಯ ಹತಾಶೆ ಮೂಲ ಕಾರಣವಾಗಿದೆ.

ವಿಲ್ಲಿ ಅಮೇರಿಕಾದ ಒಬ್ಬ ಸಾಮಾನ್ಯ ವ್ಯಕ್ತಿ. ಆತನ ಮನಸ್ಸಿನಲ್ಲಿ ಏನು ನಡೆಯುತ್ತದೆ ಎಂಬುದೆ ನಾಟಕದ ಕೇಂದ್ರ ಬಿಂದು. ವಿಲ್ಲಿ ಅಸಂತುಷ್ಟ ಕಾರಣ ಯಾವ ಬಯಕೆಗಳು ಕೈಗೂಡದೆ ಇರುವುದು. ವಿಲ್ಲಿಯ ಎರಡು ಮಕ್ಕಳು Biff ಮತ್ತು Happy. ಬಾಳ ಸಾಧನೆಯ ಹಾದಿಯಲ್ಲಿ ಗೆಲ್ಲಲಿಲ್ಲ. ವಿಲ್ಲಿ ತನ್ನ ಮಕ್ಕಳಿಗೆ ಮಾದರಿ ವ್ಯಕ್ತಿತ್ವ ಹೊಂದುವಂತೆ ಉಪದೇಶಿಸುತ್ತಾನೆ. ಪುರುಷ ಶಕ್ತಿಯ ಮಹತ್ವವನ್ನು ತಿಳಿಸಿಕೊಡುವ ಪ್ರಯತ್ನ ಮಾಡುತ್ತಾನೆ. ಒಬ್ಬ ತಂದೆಯಾಗಿ ಜವಾಬ್ದಾರಿಯ ವರ್ತನೆಯನ್ನು ಪ್ರದರ್ಶಿಸುತ್ತಾನೆ. ಆದರೆ ಮಕ್ಕಳಿಬ್ಬರೂ ಹೊಸ ತಲೆಮಾರಿನವರು ಸದಾ ಹೆಣ್ಣುಗಳ ಹಿಂದೆ ಬಿದ್ದು ಗಳಿಸಿದ ಹಣವನ್ನೆಲ್ಲಾ ಐಶಾರಾಮಿ ಬದುಕಿಗೆ ಹಾಳು ಮಾಡುವ ಅವರು ವಿಲ್ಲಿಯ ಜೀವನ ಪ್ರೀತಿಗೆ ಬೆಲೆಕೊಡದೆ ತಮ್ಮದೇ ಲೋಕದಲ್ಲಿ ಸದಾ ಸಂಚಾರಿಗಳು. ವಿಲ್ಲಿಗೆ ಮಗ ಬಿಫ್ ಪಟ್ಟಣದಲ್ಲಿ ಯಾವುದಾದರೂ ಬಿಸಿನೆಸ್ ಜಾಬ್ ಹಿಡಿದು ಹಣ ಗಳಿಸಬೇಕೆಂಬ ಆಸೆ. ವಿಲ್ಲಿಯ ಪ್ರಕಾರ ಯಶಸ್ಸು ಎಂದರೆ ಅದು ಹಣ ಗಳಿಸುವಿಕೆ. ಆದರೆ ಬಿಫ್‌ನಿಗೆ ಅದು ಇಷ್ಟವಿಲ್ಲ. ಹೊಲ ಮಾಡಿಕೊಂಡು ದನಕರು ಸಾಕುವ ಇರಾದೆ ಆತನದು. ಅದರಲ್ಲೂ ಆತ ಹಲವಾರು ಕಿಡಿಗೇಡಿತನಗಳ ಮಾಡಿ ಇದ್ದ ಕೆಲಸವನ್ನೂ ಕಳೆದುಕೊಂಡಿದ್ದಾನೆ.

ಇನ್ನು ಕಿರಿಯ ಮಗ ಹ್ಯಾಪಿ ಸರಕು ವ್ಯಾಪಾರ ಮಳಿಗೆಯಲ್ಲಿ ಕ್ಲರ್ಕ. ಆತನಿಗೆ ದುಬಾರಿ ಪ್ಲಾಟುಗಳಲ್ಲಿ ಬದುಕುತ್ತಾ ಜೀವನವನ್ನು ಮನಸೋ ಇಚ್ಛೆ ಆಸ್ವಾದಿಸುವ ಬಯಕೆ. ಹೀಗಾಗಿ ವಿಲ್ಲಿಗೆ ಇದುವರೆಗೆ ತಾನು ಬದುಕಿದ ರೀತಿಯ ಬಗ್ಗೆ ಆನಂದವಿಲ್ಲ. ತೃಪ್ತಿಯಿಲ್ಲ. ವಿಲ್ಲಿ ಲೊಮೆನನ ಅಣ್ಣ Ben ಎಳೆವೆಯಲ್ಲಿಯೇ ಆಫ್ರಿಕಾಕೆ ಓಡಿಹೋಗಿ ಬದುಕಿನಲ್ಲಿ ಯಶಸು ಸಾಧಿಸಿದ್ಧಾನೆ. ಆದರೆ ಆತ ವಿಲ್ಲಿ ಮತ್ತವನ ಮಕ್ಕಳಿಗೆ ಯಾವ ಸಹಾಯವನ್ನು ಮಾಡುವುದಿಲ್ಲ. ವಿಲ್ಲಿಗೆ ಆತನ ಮೇಲೆ ಕೋಪವಿದೆ ಯಾಕೆಂದರೆ ತನ್ನ ತಂದೆಯ ಮರಣದ ಸಮಯದಲ್ಲಿ ವಿಲ್ಲಿ ಬರಿಯ ಮೂರುವರ್ಷದ ಕೂಸು ಹದಿನೈದು ವರ್ಷಪ್ರಾಯದ ಬೆನ್ ತಂದೆಯ ಜವಾಬ್ದಾರಿ ವಹಿಸಿಕೊಳ್ಳಬೇಕಿತ್ತು ಎಂಬುದು ವಿಲ್ಲಿಯ ತಕರಾರು.

ನಾಟಕ ತೆರೆದಿಡುವ ಇನ್ನೊಂದು ವಿಷಾದವೆಂದರೆ ಅದು ಅಪಾರ್ಟಮೆಂಟ ಬದುಕಿನ ಇಕ್ಕಟ್ಟು ಬಿಕ್ಕಟ್ಟು. ವಿಲ್ಲಿ ಇಗಷ್ಟೇ ಮನೆಯೊಂದರ ಒಡೆಯನಾಗಿದ್ದಾನೆ. ಆತನ ಜೀವನ್ಮಾನದ ಗಳಿಕೆಯಿಂದ ಸಂಪಾದಿಸಿದ ಸೂರು. ಸುತ್ತಮುತ್ತ ತೆರೆದ ಆಕಾಶ, ಸುಂದರ ನಿಸರ್ಗವಿದೆಯೆಂದು ಕೊಂಡುಕೊಂಡಿದ್ದ. ಆದರೆ ದುರಂತವೆಂದರೆ ಆತನ ಮನೆಯ ಸುತ್ತಲೂ ಈಗೀಗ ದೊಡ್ಡ ದೊಡ್ಡ ಕಟ್ಟಡಗಳು ಎದ್ದು ಆತನ ಮನೆಗೆ ಗಾಳಿ ಬೆಳಕಿಗೆ ಪರದೆ ಕಟ್ಟಿಬಿಟ್ಟಿವೆ. ಸುತ್ತಲಿನ ಮರಗಳನ್ನು ಕಡಿದು ಹಾಕಲಾಗಿದೆ. ಆತನ ಮನೆ ನಾಟಕದ ಬಹುಮುಖ್ಯ ಸಾಂಕೇತಿಕ ರೂಪ. ವಯಕ್ತಿಕ ಕೌಟಂಬಿಕ ಸಾಮರಸ್ಯಗಳಿಗೆ ಆತ ಬೆಲೆಕೊಡುತ್ತಾನೆ. ಆದರೆ ಬಂಡವಾಳ ಶಾಹಿ ಸ್ವಾರ್ಥ ವ್ಯಕ್ತಿಗತ ಆಕಾಂಕ್ಷೆಗಳು ಸುಂದರ ಸ್ಥಳವನ್ನು ವಿರೂಪಗೊಳಿಸಿ ಕಡಿಸಿಹಾಕುತ್ತವೆ. ಕಟ್ಟಡಗಳು ಕಾರು ಕೊಳಲು ಹೀಗೆ ಬಳಸುವ ಕೆಲವು ಸಂಗತಿಗಳು ನಾಟಕದಲ್ಲಿ ಆಧುನಿಕ ಬದುಕಿನ ಸಾಂಕೇತಿಕ ರೂಪಗಳು. ಕಾರು ಯಶಸ್ಸು, ಚಲನೆ, ಹಾಗೂ ನಿಯಂತ್ರಣಕ್ಕೆ ರೂಪಕವಾಗಿ ನಿಲ್ಲುತ್ತದೆ.

ನಾಟಕದ ಕೊನೆಯಲ್ಲಿ ತನ್ನ ಯಾವ ಕನಸು ಸಾಕಾರಗೊಳ್ಳದ ನೋವಿನಲ್ಲಿ ವಿಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಾನೆ. ಅಷ್ಟೇ ಅಲ್ಲ ಆತ್ಮಹತ್ಯೆಗೆ ವಿವಿಧ ಪರಿಯಲ್ಲಿ ಪ್ರಯತ್ನಿಸುತ್ತಾನೆ. ಅದೊಂದು ದಿನ ವಿಲ್ಲಿ ಚಿತ್ರವಿಚಿತ್ರವಾಗಿ ಆಡುತ್ತ ಇರುವಾಗ ಮಕ್ಕಳಿಬ್ಬರೂ ಮನೆಗೆ ಬಂದಿಲ್ಲವಾದ್ದರಿಂದ ಬೆದರಿದ ಲಿಂಡಾ ತಳಮಳಿಸುತ್ತಿರುವಾಗಲೇ ಗೆಳತಿಯರೊಡನೆ ಡೇಟಿಂಗ್ ಹೋದ ಮಕ್ಕಳು ಮನೆಗೆ ಬರುತ್ತಲೇ ಲಿಂಡಾ ಅವರ ಮೇಲೆ ಹರಿಹಾಯುತ್ತಾಳೆ. ತಂದೆಯನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲವೆಂದು ಆಪಾದಿಸುತ್ತಾಳೆ. ಆ ಹೊತ್ತಿಗೆ ಬಿಫ್ ತನ್ನ ಬದುಕಿನ ಸೋಲುಗಳನ್ನು ಮೆಲಕುಹಾಕುತ್ತಾನೆ. ಆದರೂ ಮನೆಯಿಂದ ದೂರವಿದ್ದು ಬದುಕುವ ಛಲವನ್ನು ವ್ಯಕ್ತಪಡಿಸುತ್ತಾನೆ. ತಂದೆಯನ್ನು ಅಪ್ಪಿ ಗೋಳಿಡುತ್ತಾನೆ. ಆದರೆ ಅದಾವುದೂ ವಿಲ್ಲಿಗೆ ಅರ್ಥವಾಗುವುದಿಲ್ಲ. ಲಿಂಡಾ ಒತ್ತಾಯಿಸಿದರೂ ಮಲಗದೇ ಮತ್ತದೇ ಹಳೆಯ ನೆನಪುಗಳ ಗಾಡಿ ಏರಿ ಕಾರು ಅತಿ ವೇಗವಾಗಿ ಚಲಾಯಿಸಿಕೊಂಡು ಹೋಗುತ್ತ ಅಪಘಾತಕ್ಕೆ ಗುರಿಯಾಗುತ್ತಾನೆ ತಾನಾಗಿಯೇ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.

ನಾಟಕದ ಉದ್ದಕ್ಕೂ ಹತಾಶೆ, ಹಾಗೂ ಹಳೆಯ ನೆನಪುಗಳ ಸಾಲು ನಿರಂತರ ಗಿರಕಿ ಹೊಡೆಯುತ್ತವೆ. ವಿಲ್ಲಿ ವಯಸ್ಸಾದ ಸೇಲ್ಸ ಮ್ಯಾನ್ ಆದರೆ ಸಂಪ್ರದಾಯ ಶೀಲ ತಂದೆ ಗಂಡ ಕೂಡ. ಒಂದು ದಿನ ಮತ್ತು ಒಂದು ಹಗಲಿನ ಅಲ್ಪ ಅವಧಿಯಲ್ಲಿ ಆಧುನಿಕ ಅಮೇರಿಕಾದ ಜನಜೀವನವನ್ನು ಒಂದು ಕಥಾಹಂದರದಲ್ಲಿ ಕಟ್ಟಿಕೊಡುತ್ತಾನೆ ಮಿಲ್ಲರ್. ಪಾತ್ರಗಳ ಸಂಭಾಷಣೆಗಳೇ ನಾಟಕವನ್ನು ಜೀವಂತಗೊಳಿಸುತ್ತವೆ.

ಅಮೇರಿಕಾದ ನ್ಯೂಯಾರ್‍ಕನ ಮ್ಯಾನಹಟನ್ ದಲ್ಲಿ ೧೯೧೫ರಲ್ಲಿ ಜನಿಸಿದ ಮಿಲ್ಲರ ಸುಮಾರು ೧೬ ನಾಟಕಗಳ ಬರೆದ. ಆಧುನಿಕ ಜಗತ್ತಿನಲ್ಲಿ ಆತನ ನಾಟಕಗಳು ಯಶಸ್ವಿಯಾದವು. ಸಾಮಾಜಿಕ ಜೀವನದ ನೈಜತೆ ಭಾವನಾತ್ಮಕ ನೆಲೆಗಳಲ್ಲಿ ವಿಸ್ತೃತಗೊಳ್ಳುವ ನಾಟಕಗಳು ಪ್ರಸಿದ್ದಿ ಗಳಿಸಿದ್ದು. ಆತನ ಬದುಕಿಗೆ ಹೊಸ ತಿರುವುಕೊಟ್ಟ ಇನ್ನೊಂದು ನಾಟಕ ೨೧ ವರ್ಷಕ್ಕೆ ಮರಣಿಸಿದ ಅಮೇರಿಕಾದ ಪೈಲೆಟ್‌ನೊಬ್ಬನ ಬದುಕನ್ನು ಆಧರಿಸಿ ಬರೆದ “ಆಲ್ ಮೈ ಸನ್ಸ್”ಎಂಬುದು. ಇದನ್ನಾತ ೧೯೪೭ರಲ್ಲಿ ಬರೆದ. ಮಿಲ್ಲರನ ನಾಟಕಗಳಲ್ಲಿ ನಾಟಕ ಕಲೆಯ ಹೊಸಹೊಸ ಪ್ರಯೋಗಗಳ ಕಂಡುಕೊಂಡಿದ್ದ. ಸಾಮಾಜಿಕ ಸಂಗತಿಗಳ ಪರಿಶೋಧನೆಯನ್ನು ಆ ಮೂಲಕ ಅನ್ವೇಷಿಸಿದ ಹಾಗಾಗಿ ಆಧುನಿಕ ನಾಟಕ ಜಗತ್ತಿನ ಶಿಲ್ಪಿಯೆಂದು ಪ್ರಸಿದ್ಧನಾದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮರಳು ಮನೆ
Next post ಬದುಕು

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…