ಅಟ್ಟೋಣ, ಮೆಟ್ಟೋಣ ಕೆಚ್ಚೆದೆಯ ಮಿಂಚಿನಲಿ ತಟ್ಟೋಣ ದವಡೆಯನೆ ಧಾಂಡಿಗರ ಸಂಚಿನಲಿ…. ನಮ್ಮುಸಿರ ಬಿಸಿಯು ಆರುವ ಮುನ್ನ ನಮ್ಮೆದೆಯ ಅಸುವು ನೀಗುವ ಮುನ್ನ ನಾಡಿಗರ ಹಸಿರಕ್ತ ಬರಿದೆ ಹೋಗುವ ಮುನ್ನ ಕ್ರೋಧದುರಿ ಮೈತಾಳಿ ನಮ್ಮನೇ ಸುಡುವ ಮುನ್ನ&#82...

ತಾರೆಗಳ ಊರಲ್ಲಿ ಚುಕ್ಕಿ ಚಂದ್ರಮರ ಆಟ ನನ್ನಾಟ ಇಲ್ಲಿ ನಿನ್ನಾಟ ನಡುವೆ ಶಿವನಾಟ ಸುವ್ವಿ ಸುವ್ವಲಾಲಿ ಲಾಲಿ ಜೋ ಜೋ || ನಾಲ್ಕು ಕಂಬಗಳ ನಡುವೆ ತೂಗುವ ತೊಟ್ಟಿಲು ಜೀವ ಸೆಳೆವ ಕಂದ ನಗಲೂ ನಿನ್ನಾಟ.. ನನ್ನಾಟ ನಡುವೆ ಶಿವನಾಟ ಸುವ್ವಿ ಸುವ್ವಲಾಲಿ ಜೋ ...

ಬೆಳಗಾವಿಯ ಹವ್ಯಾಸಿ ಕಲಾಪ್ರೇಮಿಗಳು ಸೇರಿ ರಂಗ ಕಲೆಯ ಹವ್ಯಾಸ ಸುಸಂಸ್ಕೃತ ಸಮಾಜವನ್ನು ನಿರ್ಮಿಸಲು ನಾಟಕ ಕಲೆ ಬಳಕೆಯಾಗಬೇಕೆನ್ನುವ ಹಂಬಲದೊಂದಿಗೆ ಸಂಸ್ಕೃತಿ ಕಲೆಗಳ ಬಗ್ಗೆ ಅಭಿರುಚಿ ಮೂಡಿಸುವ ಮಹಾ ಉದ್ದೇಶದೊಂದಿಗೆ ನೂತನವಾಗಿ ಹುಟ್ಟಿದದೆ ‘ಕಲಾರಂಗ...

ಈ ನಶ್ವರದ ತನುವಿನಲಿ ಎಸೊಂದು ಆಸೆ ಹೆಜ್ಜೆ ಹೆಜ್ಜೆಗು ತುಂಬುತ್ತಿದೆ ಪಾಪದ ಪಾತ್ರೆ ಇಂದ್ರಿಯಗಳ ಸುಖಕ್ಕಾಗಿ ನಿತ್ಯ ಚಡಪಡಿಸಿ ಸ್ವಾರ್ಥ ಸಾಧನೆಗಳಿಂದ ಮಾಡಿದೆ ಜಾತ್ರೆ ಕಾಣದ ಮನಸು ಇದು ದಾರಿ ತಪ್ಪಿಸುತ್ತಿದೆ ಮೋಹಕ್ಕಾಗಿ ನಿತ್ಯ ನಿತ್ಯ ದುಡುಕುತ್ತ...

ಓ ಪಿತೃದೇವರುಗಳೇ ಅರ್ಪಿಸುವೆವು ನಿಮಗೆ ನಮ್ಮಯಾ ನಮನ| ಸ್ವೀಕರಿಸಿ ಹರಸಿರೆಮ್ಮನಿಂದು ಈ ಪುಣ್ಯದಿನ|| ವರುಷಕ್ಕೊಮ್ಮೆ ಬರುವ ಈ ಸುದಿನ ಮೀಸಲಿಡುವೆವು ನಿಮಗಾಗಿ ನಮ್ಮಯಾ ತನುಮನ| ನೀಡುವೆವು ಸದಾನಿಮ್ಮ ನೆನಪಲಿ ಬದುಕುವವೆಂದು ವಚನ|| ನಿಮ್ಮ ಸಂತೃಪ್ತಿ...

ಅವಳು ಮಲಗಿದೊಡನೆ ಅವಳಿಗೊಂದು ಕನಸು ಬೀಳುತಿತ್ತು. ಬೀದಿಯಲ್ಲಿ ಹೋಗುತಿದ್ದ ಇವಳನ್ನು ಎಲ್ಲರೂ “ಹುಚ್ಚಿ, ಹುಚ್ಚಿ” ಎಂದು ಅಪಹಾಸ್ಯ ಮಾಡುತ್ತಿದ್ದರು. ಅವಳಿಗೆ ಅಸಾಧ್ಯ ಕೋಪ ಬರುತ್ತಿತ್ತು. ಮನಸ್ಸು ಕದಡಿ ಹೋಗುತ್ತಿತ್ತು. ಬುದ್ಧಿ ಚು...

ಕತ್ತಲಿಗೆ ಕತ್ತರಿ ಬಿದ್ದು ಇಷ್ಟಿಷ್ಟೇ ಹರಿದು ಚಿಗುರೊಡೆದ ಮರದಲ್ಲಿ ಚಿಲಿಪಿಲಿ; ಒಂದಕ್ಕೊಂದು ಸೇರಿ ಅಸ್ಪಷ್ಟ ಗದ್ದಲ: ಕಣ್ಣ ತೆರೆಯುವ ತುರಿಕೆ; ಮನೆಯ ಒಳಹೊರಗೆಲ್ಲ ಬಳೆ ಸದ್ದು ಪೊರಕೆ. ಮನದ ಮೂಲದಲ್ಲಿ ಬೇರಿಳಿದ ಮರ ಗೀರಿದರೆ ಚಿಲ್ಲೆನ್ನುವ ರಸ; ...

ಮುಂದೆ ಕೆಲ ದಿನಗಳ ತರುವಾಯ ಒಂದು ದಿನ ರಾತ್ರಿ ಗುಲಾಮ ಆಲಿಯು ಆ ನೂತನ ಚಂಡಿನಂಣಪದ ಪ್ರಾಂಗಣದಲ್ಲಿ ಯಾವನೊಬ್ಬ ತರುಣ ಯವನನ ರುಂಡವನ್ನು ತನ್ನ ಕೈಯೊಳಗಿನ ಹದನಾದ ಖಡ್ಗದಿಂದ ಕತ್ತರಿಸಿ, ಒಳ್ಳೇ ದ್ವೇಷದಿಂದ ಆ ರುಂಡದ ಕಡೆಗೆ ನೋಡುತ್ತಿರಲು, ದೇವಿ ಮಂದ...

ಹೋಗೋಣ ಬಾರೆ ಸಖೀ ತೀರಕೆ ಕಲಕಲ ಹರಿಯುವ ನದಿಯಾ ತೀರಕೆ || ಪ|| ಮಧುರ ರಸಾಮೃತ ನಾದವ ಹರಿಸುತ ಮೋಹನ ಮುರಳೀ ಲೋಲನು ಇರುವ ಹಸಿರೆಳೆ ಹುಲ್ಲನು ಮೇಯದೆ ಆಲಿಸಿ ಗೋವುಗಳೆಲ್ಲಾ ನಿಂತಿಹ ತೀರಕೆ || ೧ || ತಳಿರಿನ ಸೊಗಸಿನ ಹಾಸಿಗೆ ಹಾಸಿ ವಿಧ ವಿಧ ಹೂಗಳ ಮಾ...

ಬರುತ್ತಾರೆ ಬಯಸದೇ ಇದ್ದವರು ಯಾರುಂಟು ನಿಮ್ಮೊಳಗೆ ಹೊಚ್ಚ ಹೊಸ ಪದ್ಯಗಳ, ವಿದೇಶಿ ಮದ್ಯಗಳ ? ಅಂತೆಯೇ ನಮ್ಮ ದಾವುದರ ಮಗ ಸುಲೇಮಾನ್‌ ಎಂಬ ಭೂಪತಿ ರಂಗ ! ಬರುತ್ತಾರೆ ! ಬರುತ್ತಾರೆ ! ಹುಡುಗಿಯರು ಬರುತ್ತಾರೆ ! ಸ್ಕರ್ಟಿನಲಿ ಬರುತ್ತಾರೆ ಸೀರೆಯಲಿ ಬ...

1...56789...12

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....