ತಾರೆಗಳ ಊರಲ್ಲಿ

ತಾರೆಗಳ ಊರಲ್ಲಿ
ಚುಕ್ಕಿ ಚಂದ್ರಮರ ಆಟ
ನನ್ನಾಟ ಇಲ್ಲಿ ನಿನ್ನಾಟ
ನಡುವೆ ಶಿವನಾಟ
ಸುವ್ವಿ ಸುವ್ವಲಾಲಿ ಲಾಲಿ
ಜೋ ಜೋ ||

ನಾಲ್ಕು ಕಂಬಗಳ ನಡುವೆ
ತೂಗುವ ತೊಟ್ಟಿಲು
ಜೀವ ಸೆಳೆವ ಕಂದ
ನಗಲೂ ನಿನ್ನಾಟ..
ನನ್ನಾಟ ನಡುವೆ ಶಿವನಾಟ
ಸುವ್ವಿ ಸುವ್ವಲಾಲಿ ಜೋ ||

ಬಾಳಿನ ಬಳ್ಳಿ ಕರುಳು
ಕವಲು ಒಡೆದ ಕರುಣೇ
ಸಂಬಂಧ ನನ್ನ ಕಂದ
ನನ್ನಾಟ ನಿನ್ನಾಟ ಶಿವನಾಟ
ಸುದ್ದಿ ಸುವ್ವಲಾಲಿ ಲಾಲಿ ಜೋ ||

ಎದೆಹಾಲ ಬಂಧ ನನ್ನ
ಕಂದ ತಾರೆಗಳ ಕಾಣೋ
ಚೆಂದಾಟ ನನ್ನಾಟ ಇಲ್ಲಿ
ನಿನ್ನಾಟ ನಡುವೆ ಶಿವನಾಟ
ಸುವ್ವಿ ಸುವ್ವಲಾಲಿ ಜೋ ಜೋ ||

ಚಂದಮಾಮನಿರುವ
ಅಳಬೇಡ ಕಂದ ಗುಮ್ಮ ಬರುವ
ಮಲಗೋ ನನ್ನ ಆನಂದ
ನನ್ನಾಟ ನಿನ್ನಾಟ ಶಿವನಾಟ
ಸುವ್ವಿ ಸುವ್ವಲಾಲೀ ಜೋ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂಜೆ ಹಾಡು – ಚೌಪಟ ಗುಲಾಮ
Next post ನೆಲದ ಬೆಲೆ ಉಳಿಸೋಣ

ಸಣ್ಣ ಕತೆ

 • ಕನಸುಗಳಿಗೆ ದಡಗಳಿರುದಿಲ್ಲ

  ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

 • ಅವನ ಹೆಸರಲ್ಲಿ

  ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

 • ಆನುಗೋಲು

  ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

 • ರಣಹದ್ದುಗಳು

  ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

 • ವಿರೇಚನೆ

  ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…