ನಿನ್ನ ರುದ್ರ ಭಯಂಕರ ಆರ್ಭಟದ ಸ್ಪರ್‍ಷ ಒಂದಿಷ್ಟಾದರೂ ಈ ಕವಿಕರ್ಮದ ಏದುಬ್ಬಸದ ಲಯಕ್ಕೆ ದೊರೆಯುವಂತಿದ್ದರೆ! ನನ್ನೆತೊದಲು ನಡಿಯೊಡನೆ ನಿನ್ನ ದನಿಯ ಮಿಲನವಾಗುವಂತಿದ್ದರೆ! ನಿಸರ್‍ಗದೊಡನೆ ಕಲೆಯೂ ಬೆಸೆದುಕೊಂಡ ಉಪ್ಪಿನಂಥ ಪದಗಳನ್ನು ನಿನ್ನಿಂದ ಲಪಟಾ...

ಬಯಸಿ ಬಂದೆ ಮನದಿ ನಿಂದೆ ಮನದಾಳದ ಕಡಲಲ್ಲಿ ಮಿಂದೆ || ನೀನೇ ಎಂದಿಗೂ ನೀನು ಇಂದಿಗೂ ಒಲವು ಗೆಲುವು ನೀನೇನೇ… || ನಾಕು ತಂತಿ ನಾಕು ಭಾವ ಹೃದಯ ಚೆಲುವು ರಿಂಗಣ || ಭಾವ ಸಿರಿಯ ಸ್ವರಗಾನ ಮನನ ತನ್‌ತನಾನ ತನನ ತಾನನ || ನೀ ಬಂದ ಕ್ಷಣವು ಬೆಸೆದ...

ಈಗ ಕೂಡ ಒಮ್ಮೊಮ್ಮೆ ದೆವ್ವ ಮನೆಗೆ ಬರುತ್ತವೆ ; ಬರೀ ಕೈಲಿ ಬರುವುದಿಲ್ಲ ಏನೋ ವಾರೆಂಟ್ ತರುತ್ತವೆ ನಟ್ಟ ನಡೂರಾತ್ರಿ ; ಡೈರಿ ಬರೆದ ದಿನವಂತೂ ಅವು ಬರುವುದು ಖಾತ್ರಿ – ಝಡತಿಯ ದಂಡದ ಹಾಗೆ, ಮಿಡತೆಯ ಹಿಂಡಿನ ಹಾಗೆ, ಕುಕ್ಕಿ ಕುಕ್ಕಿ ಗುಟ್ಟ ...

ಒಂದು ಎರಡು ಮೂರು ಅಹ ಮೂವತ ಮೂರು ಎಂಬತು ತೊಂಬತು ನೂರು ಒಹೊ ಮೂವತ ಮೂರು ಒಂದು ಎರಡು ಮೂರು ಗಾಳಿ ಬಂದೆಡೆ ತೂರು ಏಳು ಸಮುದ್ರವ ಹಾರು ಖಾಲಿಯಿದ್ದೆಡೆ ಕೂರು ಅಯ್ಯಾ ಯಾರಿಗೆ ಯಾವುದು ಊರು ಕೆಟ್ಟು ಪಟ್ಟಣ ಸೇರು ಒಂದು ಎರಡು ಮೂರು ಸೇರಿಗೆ ಸವ್ವಾ ಸೇರ...

ತಾನು ನಿರ್ದೇಶಿಸಿದ ನಾಟಕವೊಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪ್ರದರ್ಶಿತವಾಗಬೇಕೆಂದು ರಂಗ ನಿರ್ದೇಶಕ ಜಯತೀರ್ಥ ಜೋಶಿ ಅವರ ಅದಮ್ಯ ಬಯಕೆ ಆಗಿತ್ತು. ಕರ್ನಾಟಕ ನಾಟಕ ಅಕಾಡಮಿಯ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ನವೆಂಬರ್ ದಿನಾಂಕ ೧೫ ರಂ...

ಬಂಗರ ಚಂದ್ರಾ ಮುಗಿಲಾ ಇಂದ್ರಾ ಹೌವ್ವನೆ ನಕ್ಕಿದ್ದಾ|| ಏನ್ಚಂದಽಽ ಏನ್ಚಂದಽಽ ||ಪಲ್ಲ|| ಚಂಚಂದಾಗಿ ಆಡ್ಯಾಡ್ಯಾಡ್ತಾ- ನನ್ನನ್ರಾಗ ಇಲ್ಲಾಗಿ ಹೋದ ಬಂದೇನೆಂದು ಬ್ಯಾಸತ್ತಾನು ಹೇಳೇಳ್ರಾಗ ಗಳ್ಳನೆ ಹೋದ ||೧|| ಕಂಡ್‍ಕಂಡಾನು ಕಲ್ಲಾಬಿಲ್ಲಿ ಹೌವ್ವವ್ವ...

ಆಕೆ ಕಥೆಗಳನ್ನು ಬರೆಯುತಿದ್ದಳು. ಪಕ್ಕದಮನೆಯ ಕಾಲೇಜು ಹುಡುಗಿ ಆಕೆ ಬರೆದ ಕಥೆಗಳನ್ನು ಓದುತ್ತಿದ್ದಳು. ಇಂದು ಸುಖಾಂತವಾದ ಕಥೆ ಮಾರನೆಯ ದಿನ ಬದಲಾಯಿಸಿ ಪ್ರೀತಿಯ ಜೋಡಿಯಲ್ಲಿ ಒಬ್ಬರನ್ನು ಸಾಯಿಸುತ್ತಿದ್ದಳು. ಓದಿ ಬೇಸತ್ತ ಹುಡುಗಿ ಆಂಟಿಗೆ ‘ಕೊಲೆಗ...

ಹಸಿವು ಸೋಲುವುದಿಲ್ಲ ರೊಟ್ಟಿ ಗೆಲ್ಲುವುದಿಲ್ಲ ಪಂದ್ಯವೆಂಬ ಭ್ರಮೆ ಹಸಿವು ರೊಟ್ಟಿಗೆ. ಆದರಿಲ್ಲಿ ಸೋಲು ಗೆಲುವುಗಳಿಲ್ಲ ದಾಖಲಾಗುವುದಿಲ್ಲ ಚಕ್ರ ತಿರುಗುತ್ತದೆ ರೊಟ್ಟಿ ಹಸಿವು ಕೈ ಹಿಡಿದು ಸುತ್ತಬೇಕಿದೆ ಜೊತೆ ಜೊತೆಗೇ. *****...

1...789

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....