ಬಯಸಿ ಬಂದೆ ಮನದಿ ನಿಂದೆ
ಮನದಾಳದ ಕಡಲಲ್ಲಿ ಮಿಂದೆ ||

ನೀನೇ ಎಂದಿಗೂ ನೀನು ಇಂದಿಗೂ
ಒಲವು ಗೆಲುವು ನೀನೇನೇ… ||

ನಾಕು ತಂತಿ ನಾಕು ಭಾವ
ಹೃದಯ ಚೆಲುವು ರಿಂಗಣ ||

ಭಾವ ಸಿರಿಯ ಸ್ವರಗಾನ ಮನನ
ತನ್‌ತನಾನ ತನನ ತಾನನ ||

ನೀ ಬಂದ ಕ್ಷಣವು ಬೆಸೆದು
ಪುಳಕವಾಯ್ತು ಮೈಮನ ||

ಕನಸೊಂದು ಕಂಡು ಗೆಳೆಯ
ಮನಸು ರೂಪ ತಳೆಯಿತು ||

ಭಾವನೆಗಳ ಬಳ್ಳಿ ಚಿಗುರಿ
ತೃಪ್ತಿ ತಂದಿತು ಕ್ಷಣ ಕ್ಷಣ ||
*****