ಮಾನವ ಶರೀರ ಬರೀ ಮೂಳೆ ಮಾಂಸದ ಮುದ್ದೆಯಲ್ಲ, ವಿಸ್ಮಯಗಳ ಆಗರವಾಗಿದೆ. ನಮ್ಮ ಶರೀರದ ಪ್ರತಿಯೊಂದು ಅಂಗಗಳು ನಿರ್‍ವಹಿಸುವ ಕಾರ್‍ಯಗಳನ್ನು ಅವಲೋಕಿಸಿದರೆ ವಿಸ್ಮಯವಾಗುವುದು ಖಂಡಿತ. ಅಂತಹ ವಿಸ್ಮಯಕರ ಸಂಗತಿಗಳನ್ನು ವಿವರಿಸುವ ಒಂದು ಸಣ್ಣ ಪ್ರಯತ್ನವನ್...

ಆನು ಪೇಳಿದೆಲ್ಲವನು ಮಾಡದೊಡೇನಂತೆ ? ಆನಿಲ್ಲ ಪೇಳಿದೆಲ್ಲವನು ಆನು ಮಾಡಿ ದೆನೆಂದಿಲ್ಲ ಆನೆಷ್ಟು ಮಾಡಿಹನೆಂದು ಆನು ಪೇಳುವುದಲ್ಲ, ಬುದ್ಧಿಮಾತನು ಎನಗಾನೇ ಪೇಳಿ ಆದನಾನೇ ಕೇಳಿ ಆನೆಷ್ಟು ಮಾಡಿದರಷ್ಟು ಲಾಭವೆನಗೆ – ವಿಜ್ಞಾನೇಶ್ವರಾ *****...

ನಾನು ‘ಅವನನ್ನು’ ಕಾಣ ಹೋದೆ ಬೇಡಿಕೆ ಪಟ್ಟಿ ಹನುಮನ ಬಾಲದಂತಿತ್ತು. ಎದುರಿಗೆ ನಿಂತು ಇಲ್ಲದ ಭಯ, ಭಕ್ತಿ ನಟಿಸುತ್ತ “ನೀನೆ ನನಗೆ ಎಲ್ಲ ನಿನ್ನದೇ ಇದು ಎಲ್ಲ ನಾನು, ನನ್ನದೆಂಬುದೇನೂ ಇಲ್ಲ” ನನ್ನ ಊನ, ವಕ್ರ ನೋಡಬೇಡ ನಿನಗೇನು ಗುನ್ನ...

ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ ಮೇಲೆತ್ತಿ ಆ ಊರಿನ ಮೇಲೆ ಕಣ್ಣಾಡಿಸಿದ, ಅವನಿಗೆ ಆಶ್ಚರ್ಯ ಕಾದಿತ್ತು. ಇದು ನನ್ನ...

ಹೊರಳುತ್ತಿರುವ ಭೂಮಿಯನ್ನೂ ಉರುಳುತ್ತಿರುವ ಸಾಗರವನ್ನೂ ಮಾತನಾಡಿಸಬೇಕು ಉರಿಯುತ್ತಿರುವ ಬೆಂಕಿಯನ್ನೂ ಮೊರೆಯುತ್ತಿರುವ ಗಾಳಿಯನ್ನೂ ಮಾತನಾಡಿಸಬೇಕು ಮರಳುತ್ತಿರುವ ಹಕ್ಕಿಗಳನ್ನೂ ಅರಳುತ್ತಿರುವ ಹೂವುಗಳನ್ನೂ ಮಾತನಾಡಿಸಬೇಕು ಚಿಗುರುತ್ತಿರುವ ಮರವನ್ನ...

ಅಧ್ಯಾಯ ೩ ಮನು ಕಾಲು ಮುರಿದುಕೊಂಡ “ರಿತು ಇವತ್ತು ಏನಾಯ್ತು ಗೊತ್ತಾ? ಆಫೀಸಿನಲ್ಲಿ, ಇನ್ನೇನು ಆಫೀಸ್ ಟೈಮ್ ಮುಗೀಬೇಕು ಅನ್ನುವಾಗ ಯಾರೋ ಇಬ್ಬರು ವಯಸ್ಸಾದ ದಂಪತಿ ಲಗೇಜ್ ಹಿಡ್ಕೊಂಡು ಸೀದಾ ಆಫೀಸಿನೊಳಗೆ ಬಂದರು. ಅವರ ಮಗ ಇದೇ ಆಫೀಸಿನಲ್ಲಿ ...

ಅದೇ ಆ ಕೆಂಪುಮಣ್ಣಿನ ಗದ್ದೆಯ ತುಂಬಾ ಪ್ರತಿಸಲದಂತೆ ಈ ಸಲವೂ ಹೊಸ ಬೀಜಗಳದ್ದೇ ಬಿತ್ತು. ಮೋಹನ ರಾಗದ ಮಾಲಿಕೆಗಳ ಜೊತೆ ತರವೇಹಾರಿ ತಳಿಬೀಜಗಳ ಊರಿಹೋಗುವ ಆತನಿಗೋ ಪುರಸೊತ್ತಿಲ್ಲದ ದಣಿವು. ಸೀಮೆಗೆ ತಕ್ಕಂತಿರುವ ಮಣ್ಣಿನ ಹದಕ್ಕೆ ಬೀಜ ಹಾಕುವುದೇನು ಸಾ...

ಪ್ರಜಾಪ್ರಭುತ್ವವೆಂದ ಮೇಲೆ ಜನಗಳ ಪಾತ್ರ ಅಪಾರವಾದುದು. ಜನಗಳ ತೊಡಗುವಿಕೆಯಿಂದಲೇ ಪ್ರಜಾಪ್ರಭುತ್ವದ ಸಾರ್ಥಕತೆ. ಈ ದೃಷ್ಟಿಯಿಂದಲೇ ಅಬ್ರಹಾಂ ಲಿಂಕನ್ ಪ್ರಜಾಪ್ರಭುತ್ವವನ್ನು ವಿವರಿಸುವಾಗ ‘ಜನರಿಂದ ಜನರಿಗೋಸ್ಕರ ರಚಿತವಾದ ಜನಗಳ ಸರ್ಕಾರ’ ಎಂದು ಹೇಳ...

1...34567...10

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....