ಆನು ಪೇಳಿದೆಲ್ಲವನು ಮಾಡದೊಡೇನಂತೆ ?
ಆನಿಲ್ಲ ಪೇಳಿದೆಲ್ಲವನು ಆನು ಮಾಡಿ
ದೆನೆಂದಿಲ್ಲ ಆನೆಷ್ಟು ಮಾಡಿಹನೆಂದು
ಆನು ಪೇಳುವುದಲ್ಲ, ಬುದ್ಧಿಮಾತನು
ಎನಗಾನೇ ಪೇಳಿ ಆದನಾನೇ ಕೇಳಿ
ಆನೆಷ್ಟು ಮಾಡಿದರಷ್ಟು ಲಾಭವೆನಗೆ – ವಿಜ್ಞಾನೇಶ್ವರಾ
*****