ಹೊರಳುತ್ತಿರುವ ಭೂಮಿಯನ್ನೂ
ಉರುಳುತ್ತಿರುವ ಸಾಗರವನ್ನೂ
ಮಾತನಾಡಿಸಬೇಕು
ಉರಿಯುತ್ತಿರುವ ಬೆಂಕಿಯನ್ನೂ
ಮೊರೆಯುತ್ತಿರುವ ಗಾಳಿಯನ್ನೂ
ಮಾತನಾಡಿಸಬೇಕು
ಮರಳುತ್ತಿರುವ ಹಕ್ಕಿಗಳನ್ನೂ
ಅರಳುತ್ತಿರುವ ಹೂವುಗಳನ್ನೂ
ಮಾತನಾಡಿಸಬೇಕು
ಚಿಗುರುತ್ತಿರುವ ಮರವನ್ನೂ
ಕರಗುತ್ತಿರುವ ಮಂಜನ್ನೂ
ಮಾತನಾಡಿಸಬೇಕು
ಆಕಾಶ-ಕಾಯದೊಳಗೆ
ಅವಿನಾಶಿ ಸೂರ್‍ಯ!
ದೇವರೆ… ಇವರದ್ದು ಯಾವ ಭಾಷೆ?!
ಎಂದಾದರೂ ಕೈಗೂಡುವುದೇ ಆಶೆ?
*****
Latest posts by ಸವಿತಾ ನಾಗಭೂಷಣ (see all)
- ಕರೇ ಮನುಷ್ಯಾ ದಿಗಿಲು ಯಾಕ? - February 27, 2021
- ಕೋವಿಯಲಿ - February 20, 2021
- ಸಾವು - February 13, 2021