“ಬಯಲು ಬಯಲನೆ ಉಂಡು, ಬಯಲು ಬಯಲಾಗಿತ್ತು……” ಸಂಜೆ ಏಳಕ್ಕೆ ಬೀಚ್ ಹತ್ತಿರ ಬರುತ್ತೇನೆ….. ಕಾಯುತ್ತಿರು. ಯುದ್ಧನೌಕೆ ಮ್ಯೂಜಿಯಂ ಒಳಗಿಂದ ಪುಟಾಣಿ ರೈಲು ಹಳಿ ದಾಟಲು ಇರುವ ಕಾಲುದಾರಿಯ ಮೂಲಕ ಬೀಚ್ ತಲುಪುತ್ತೇನೆ...

ನಾನು ಕಳಿಸಿದ್ದು ಮಿಂಚುಗಳನ್ನು ತಲುಪಿದ್ದು ಮಿಣುಕು ಹುಳುಗಳೇ? ಹಾಗಾದರೆ ಮಿಂಚೆಲ್ಲ ಹೋಯಿತು? ನನ್ನ ಕುಂಚದಿಂದ ಮೂಡಿದ ಮೊಲ ನಿನ್ನಲ್ಲಿಗೆ ಕೊಂಬಿನೊಂದಿಗೆ ಓಡಿಬಂದಿತ್ತೆ? ಹಾಗಾದರೆ ಮೊಲವೆಲ್ಲಿ ಮಾಯವಾಯಿತು? ನಾನು ಕಿವಿಯಲ್ಲಿ ಕಿಣಿಕಿಣಿಸಿದ್ದು ಮ...

ಹಟ್ಟಿ ಸೇರಿದ ಮೇಲೆ ಹೆಂಗಸರಿಗೆ ಅಡಿಗೆ ಕಲಸ; ಸೂರ್ಯ, ನವಾಬ್ ಇಬ್ಬರೂ ಕಟ್ಟೆಯ ಮೇಲೆ ಕೂತರು. ದೇಶ ವಿದೇಶಗಳ ಸ್ಥಿತಿಗತಿ ಕುರಿತು ಮಾತನಾಡತೊಡಗಿದರು. ಇವರ ಮಾತುಗಳು ಪೂರ್ಣ ತಾತ್ವಿಕ ಚರ್ಚೆಯ ಸ್ವರೂಪ ಪಡೆದದ್ದರಿಂದ ಅಕ್ಕಪಕ್ಕ ಕೂತಿದ್ದ ಮೂರ್‍ನಾಲ್...

ಎದೆಯೊಳಗೆ ಬೆಂಕಿ ಬಿದ್ದರೂ ಜಪ್ಪಯ್ಯ ಎನ್ನದೇ ನಗುವ ಮುಖಗಳ ಕಂಡಾಗಲೆಲ್ಲಾ ನನ್ನಲ್ಲಿ ಕನಿಕರದೊಂದಿಗೆ ಉಕ್ಕುವ ತಳಮಳ ನಾನೊಬ್ಬಳೆ ಅಲ್ಲ ನನ್ನ ಸುತ್ತಲೂ ಹತ್ತಾರು ಪಾತ್ರಗಳು ನವಿಲುಗರಿ ಪೋಣಿಸಿಕೊಂಡು ಡಂಭ ಬಡಿಯುವ ಕೆಂಬೂತಗಳು ಹಾದು ಹೋಗುತ್ತಿವೆ. ಒ...

ಯಾಕೆ ಸೃಷ್ಟಿಸಿದೆ ನನ್ನನೀ ರೀತಿ ಅಲ್ಲಿಗೂ ಸಲ್ಲದೆ ಇಲ್ಲಿಯೂ ನಿಲ್ಲದೆ ಇರುಳಿನೇಕಾಂತದ ನೀರವತೆಯಲ್ಲಿ ನನಗೆ ನಾನೇ ಆಗುವಂತೆ ಭೀತಿ ಬೀಸಿತೆ ಗಾಳಿ? ಆ! ಏನದು ಎದ್ದು ಮರಮರದ ಮೇಲು ಮರಮರವೆಂದು ಹಾರುವುದೆ ಕುಣಿಯುವುದೆ ಕುಪ್ಪಳಿಸುವುದೆ ನೋಡುವೆನು ನಾ...

ಇದೋ ನಿಮಗೆ ಸುಸ್ವಾಗತ. ನೀವು ಈ ಊರಿಗೆ ಹೊಸಬರೇ ಸಾರ್. ನಿಮ್ಮ ಮುಖವೇ ಹೇಳುತ್ತಿದೆ-ನೀವು ಇಲ್ಲಿಯವರಲ್ಲವೆಂದು. ನಿಮ್ಮ ಮೊಗದಲ್ಲಿಯ ವಿಚಿತ್ರ ಕಳೆ ಇಲ್ಲಿಯ ಕಾಣಿಕೆಯಲ್ಲ. ಪ್ರವಾಸದಲ್ಲಿ ಮೊಗ ಬಾಡಿದೆಯಲ್ಲ… ಮುಖಕ್ಕೆಲ್ಲ ಧೂಳು-ಧೂಳು. ಈ ಹೋಲ...

೧ ಮೊದಲನೆಯವಳು ಟ್ಯೂಬು ಲೈಟಿನಂತ ಸುಪ್ರಕಾಶ ಸಭ್ಯ ನಗೆ ಹೊತ್ತುಬರುತ್ತಾಳೆ. ಸುತ್ತ ಇದ್ದವರತ್ತೆಲ್ಲ ಸರ್‍ವೋಪಯೋಗಿ ಮುಗುಳ್ನಗೆ ಬೀರುತ್ತಾ, ರೋಗಿಗಳ ಎದೆಯಲ್ಲಿ ಆಸೆಯ ಬುಗ್ಗೆ ಚಿಮ್ಮಿಸುತ್ತಾ ದಡ ದಡ ಬರುತ್ತಾಳೆ. ಕಂಡ ತಕ್ಷಣ, ಅವಳ ಸಭ್ಯತೆಯ ಪರ್ವ...

ಬಾರೈ ಬಾರೈ ಹೋಳಿ ಕಾಮಾ ಹೋಳಿಗೆ ನಿನ್ನಾ ಮಾಡೂವೆ ನಿನ್ನಾ ಕಾಳು ಬ್ಯಾಳಿ ಕುಚ್ಚಿ ಯೋಗಾ ಬೆಲ್ಲಾ ಹಾಕೂವೆ ರುಬ್ಬೀ ರುಬ್ಬೀ ಗುಬ್ಬಿ ಮಾಡಿ ನಿನ್ನಾ ಹೂರ್‍ಣಾ ರುಬ್ಬೂವೆ ಯೋಗಾ ಆಗ್ನಿ ಹಂಚು ಮಾಡಿ ಬಿಸಿಬಿಸಿ ಹೋಳ್ಗೀ ಮಾಡೂವೆ ಶಿವನೇ ಬಂದಾ ಎಂಥಾ ಚಂದಾ...

ಹುರಿಹೊಸೆದ ಹಗ್ಗದಲಿ ಹಾವು ಕಂಡಿತೆ, ಪಾಪ! ಬರಿಯುಸಿರು ಬಿಟ್ಟವರೆ ಇಲ್ಲಿ ಕೇಳಿ; ತುದಿಗಾಲ ಮೇಲೇಕೆ ನಿಲ್ಲುವಿರಿ? ಬಣ್ಣದುರಿ ಹಳೆಮನೆಯ ಉರಿಸಿದರೆ ತಪ್ಪೆ ಹೇಳಿ. ಅಜ್ಜ ಮೊಮ್ಮಗು ಮಾತು ನಮಗೇಕೆ ಬಿಟ್ಟುಬಿಡಿ ಮಣ್ಣು ಹಡೆದದ್ದರಿತೆ ಪ್ರೀತಿ ನೀತಿ ; ...

1...6789

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....