Month: June 2020

#ನಗೆ ಹನಿ

ಸೀಟು

0
ತೈರೊಳ್ಳಿ ಮಂಜುನಾಥ ಉಡುಪ
Latest posts by ತೈರೊಳ್ಳಿ ಮಂಜುನಾಥ ಉಡುಪ (see all)

ಪಾಪು ಅಮ್ಮನಿಗೆ ಹೇಳಿತು. “ಮೊಮ್ಮಿ ನಿನ್ನ ನೀನಿಲ್ಲದಿರುವಾಗ ಪಕ್ಕದ ಮನೆ ಆಂಟಿಗೆ ನಾನು ನನ್ನ ಸೀಟು ಬಿಟ್ಟು ಕೊಟ್ಟೆ.” ಅಮ್ಮ ಹೇಳಿದ್ಲು “ಜಾಣ ಮರಿ ದೊಡ್ಡವರು ಬಂದಾಗ ನಾವು ನಮ್ಮ ಸೀಟು ಬಿಟ್ಟು ಕೊಡಬೇಕು. ನೀನು ಎಲ್ಲಿ ಕುಳಿತಿದ್ದೆ ಹೇಳು?” ಪಾಪು ಹೇಳಿತು. “ಅಪ್ಪನ ತೊಡೆ ಮೇಲೆ.” *****

#ಹನಿ ಕಥೆ

ಮೂರು ಮಳೆಯ ಹನಿಗಳು

0
ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)

ಒಂದು ಮಳೆಯ ಹನಿ ಹೇಳಿತು – “ನನ್ನ ಬಾಳು ಸಾರ್ಥಕ. ನಾನು ಹೂವಿನ ದಳದ ಮೇಲೆ ಬಿದ್ದು ಅದರ ಬಾಯಾರಿಕೆ ತೀರಿಸುವೆ” ಎರಡನೆಯ ಹನಿ ಹೇಳಿತು- “ನಾನು ಎಲೆಯ ಮೇಲೆ ಮಲಗಿ ಆನಂದ ಪಡುವೆ.” ಎಂದು. ಮೂರನೆಯ ಹನಿಹೇಳಿತು- “ನನ್ನ ಬಾಳು ಹುಲ್ಲು ಕಡ್ಡಿಯ ಉಯಾಲೆಯಲ್ಲಿ ತೂಗಾಡುವುದು ಅದೆಷ್ಟು ಚೆಂದ” ಎಂದು. ಇದನ್ನು ಕೇಳಿಸಿ ಕೊಂಡ […]

#ಹನಿಗವನ

ಗಳಿಗೆಬಟ್ಟಲ ತಿರುವುಗಳಲ್ಲಿ – ೭೪

0

ಗೋಲು ಗೋಲು ಗೋಲಾಕಾರ ಪರಿಭ್ರಮಿಸುವ ರೊಟ್ಟಿ ಬೀದಿಯಳೆಯುತ್ತಲೇ ಒಳಗೆ ಬೆಳೆಯುತ್ತಲೇ ಬತ್ತಲಾಗುತ್ತದೆ. ಆ ಮಹಾ ಬೆಳಕಿನಲಿ ಮಿಂದು ತಣಿಯುತ್ತದೆ ವಿರಕ್ತಿಯಲಿ ಅಂತರಂಗ ಮಾಗಿಸಿ ತಾನು ತಾನಲ್ಲವೆಂಬಂತೆ ಬಹಿರಂಗದಲಿ ಹಸಿವೆಗೆ ಸುಮ್ಮನೆ ಮಣಿಯುತ್ತದೆ. *****

#ಕವಿತೆ

ಹಕ್ಕಿ ಮರ

0
ಕಸ್ತೂರಿ ಬಾಯರಿ
Latest posts by ಕಸ್ತೂರಿ ಬಾಯರಿ (see all)

ಒಡಲ ಕುಂಡದಲ್ಲಿ ಹೀಗೆ ನರಳಿ ಹೊರಳಿ ಅರಳುವ ಒಂಟಿತನಕ್ಕೆ ಪಕ್ಕದಲ್ಲಿ ಮರದಲ್ಲಿ ಕುಳಿತು ಹಕ್ಕಿ ಹಾಡಿತು, ರೆಕ್ಕೆ ಬಿಚ್ಚಿ ಹಾರಲು ನೀಲಬಾನುವಿನ ಆಳ ನಿರಾಳ ಲೋಕಕ್ಕೆ ಕಣ್ಣುಗಳು ಹೊರಳಿದವು, ವಿವಶವಾಗಿ ಚಂಗನೆ ಚಿಗುರಿದ ವಿಸ್ಮಯಗಳು ಕಂಡು. ರಾಗವಿಲ್ಲದ ಪದಗಳಿಗೆ ಹಕ್ಕಿ ಮೆಲ್ಲಗೆ ನೇವರಿಸಿ ಪ್ರೀತಿ ಕೊರಳು ತುಂಬಿ ಹಾಡು ಹಾಡಿತು, ಅಂಟುನಂಟಿಲ್ಲದ ಹಂಗಿನಲ್ಲಿ, ಮೊಳಕೆ ಹರಡಿ […]

#ವಿಜ್ಞಾನ

ಇರೋಡಿಯಂ ಪ್ರಾಜೆಕ್ಟರ್

0

ಒಂದು ಕಾಲವಿತ್ತು ಒಂದು ಫಿಲ್ಮ್ ಮೂಲಕ ಬೆಳಕನ್ನು ಹರಿಸಿ ಫಿಲ್ಮಿನಲ್ಲಿರುವ ಚಿತ್ರಗಳನ್ನು ದೊಡ್ಡದನ್ನಾಗಿ ತೋರಿಸುವ ವಿಧಾನ. ಇದನ್ನು ತೋರಿಸುವ ಯಂತ್ರಕ್ಕೆ ಪ್ರೋಜೆಕ್ಟರ್ ಎಂದು ಕರೆದರೂ ಹೊಸ ಆವಿಷ್ಕಾರ ಬಂದ ನಂತರ ವಿನೂತನ ಪ್ರಯೋಗಗಳಾಗಿ ಹೊಸ ನಮೂನೆಯ ಪ್ರೋಜೆಕ್ಟರ್‌ಗಳು ಬಂದಿವೆ. ಹಳೆಯದರದಲ್ಲಿ ಅನೇಕ ನ್ಯೂನ್ಯತೆಗಳಿದ್ದ ಕಾರಣವೂ ಸಹ ಅವು ಮೂಲೆ ಗುಂಪಾದವು. ಈದೀಗ ಸುಧಾರಣೆಗೊಂಡು ನೂತನ ತಂತ್ರಜ್ಞಾನ […]

#ಹನಿಗವನ

ಆಕೆ

0
ಲತಾ ಗುತ್ತಿ
Latest posts by ಲತಾ ಗುತ್ತಿ (see all)

ಚೆಂದಾದ ಮನೆ ಚೂಟಿಯಾದ ಮಕ್ಕಳು ಚುರುಕಾದ ಗಂಡ ಆದರೇನು ಮನಸ್ಸಿಲ್ಲದ ಒಡತಿ ಹವ್ಯಾಸಗಳ ಗೆಳತಿ. *****

#ಹನಿಗವನ

ಅಂತರಾಳ

0
ಜರಗನಹಳ್ಳಿ ಶಿವಶಂಕರ್‍
Latest posts by ಜರಗನಹಳ್ಳಿ ಶಿವಶಂಕರ್‍ (see all)

ಬೇಲಿಯ ಮೇಲಿನ ಬಡಕಲು ಬಳ್ಳಿಗಳು ಬಿರಿದು ಹೂಗಳು ಹಡೆದವು ಸೋರೆ ಕುಂಬಳ ಬೆರಗಾಗಿ ಕೊರಗಿ ಬಾಡಿ ಉದುರಿದವು ಬೀಗಿ ನಗುತ್ತಿದ್ದ ಸಂಪಿಗೆ ದಾಸವಾಳ *****

#ಸಣ್ಣ ಕಥೆ

ಒಂದು ಪುಟ್ಟ ಚಿತ್ರ

0
ಕೊಡಗಿನ ಗೌರಮ್ಮ
Latest posts by ಕೊಡಗಿನ ಗೌರಮ್ಮ (see all)

-೧- ೮-೪-೧೯೨೪ ರಘು, ಇಲ್ಲಿಂದ ಹೊರಟು ಹೋದ ಮೇಲೆ ಕಾಗದಗಳನ್ನೇ ಬರೆಯುತ್ತಿಲ್ಲವೇಕೆ? ನೀನು ಹೋದಂದಿನಿಂದ ನಿನ್ನ ಕಾಗದಗಳಾದರು ನೋಡುತ್ತಿರುವುದೇ ನನಗೆ ಕೆಲಸವಾಗಿದೆ. ನೀನು ಇಲ್ಲಿದ್ದಾಗ ನನ್ನೊಡನೆ ಹೇಳಿದ ಮಾತುಗಳನ್ನೆಲ್ಲಾ ಮರೆತಂತಿದೆ. ರಘು, ಯಾವ ದಿನ ನಿನೊಡನೆ ಅಡ್ಡ ಹಾದಿಯಲ್ಲಿ ಕಾಲಿಟ್ಟ ಆ ದಿನದಿಂದ ನನ್ನ ಮನಸ್ಸಿಗೆ ಶಾಂತಿಯಿಲ್ಲ. ಭಗವಂತನಿದಿರಿನಲ್ಲಿ ನಾನು ನಿನ್ನವಳೆ ಆದರೂ ಜನರಿಗೆ ತಿಳಿದರೆ […]

#ಹನಿಗವನ

ರೈಲು

0
ಶ್ರೀವಿಜಯ ಹಾಸನ
Latest posts by ಶ್ರೀವಿಜಯ ಹಾಸನ (see all)

ಗಂಡಂದಿರು ಹೆಂಡತಿಯರಿಗೆ ಬಿಡುತ್ತಾರೆ ಸುಳ್ಳಿನ ರೈಲು ನಿಜಗೊತ್ತಾದ ಮೇಲೆ ಹಿಡಿಯುತ್ತಾರೆ ಕಾಲು *****

#ಕವಿತೆ

ಯಾವುದು ಇಷ್ಟ?

0
ಸವಿತಾ ನಾಗಭೂಷಣ
Latest posts by ಸವಿತಾ ನಾಗಭೂಷಣ (see all)

ಕಾಮನಬಿಲ್ಲು ಅಷ್ಟೂ ಬಣ್ಣಗಳನ್ನು ಚೆಲ್ಲಿತು ನನಗೆ ನಾನೆ ಕೇಳಿಕೊಂಡೆ ನಿನಗೆ ಯಾವ ಬಣ್ಣ ಇಷ್ಟ? ಗೊರಟೆ, ಗುಲಾಬಿ, ಸೇವಂತಿಗೆ ದಾಸವಾಳ, ಕನಕಾಂಬರ, ಮಲ್ಲಿಗೆ ಹೆಣೆದು ನಿಂತವು ಅನ್ನಿಸಿತು: ಆಯ್ಕೆ ಬಹಳ ಕಷ್ಟ. ೨ ಹುಲಿ, ಕರಡಿ, ಆನೆ, ಅಳಿಲು? ಜಿಂಕೆ, ಕೊಕ್ಕರೆ, ಕಾಜಾಣ, ನವಿಲು? ನನಗೆ ನಾನೆ ಕೇಳಿಕೊಂಡೆ ನಿನಗೆ ಯಾವುದು ಇಷ್ಟ? ರೆಕ್ಕೆ, ಪುಕ್ಕ, […]