ನೆನಪುಗಳು ನುಂಗಿ ನೊಣೆಯುತ್ತಿರುವಾಗ ಬೆಚ್ಚಿ ಎಚ್ಚೆತ್ತಳು ಶಬರಿ. ಹುಚ್ಚೀರ ಕಣ್ಣಲ್ಲಿ ಎಣ್ಣೆ ಹೊಯ್ದುಕೊಂಡಂತೆ ನೋಡುತ್ತ ಕೂತಿದ್ದಾನೆ. ಅಂದು-ಒಂದಾದ ರಾತ್ರಿಯ ಕತ್ತಲು; ಒಳಗೆಲ್ಲ ಬೆತ್ತಲು. ಇಂದು- ಅದೇರೀತಿಯ ಕತ್ತಲು; ಬಿರುಗಾಳಿ ಸುತ್ತಲು ಆದರೆ...

ಜಗದೊಳಗೆ ಹುಟ್ಟಿಬೆಳೆದರೂ ಜನರೊಳಗೆ ಬೆಳೆಯುವುದೇ ಸಾಧನೆ ವೇಮುಲ. ಇಲ್ಲದ ಮೂಲದಲ್ಲೇ ಹುಟ್ಟಿದರೂ ಇಲಾಖೆಗಳನ್ನೇ ಕಟ್ಟಬಲ್ಲವರು ಇಲ್ಲಿಹರು ಇದ್ದರಮನೆಯ ಮಾರಿ ತಿಂದವರು ಇಹರು ಪರಿಪರಿಯ ಪಂಡಿತರು, ಪಾಮರರು, ಅರೆಬರೆಯ ಶಿಕ್ಷಿತರು ಎಲ್ಲರ ಗೂಡಲ್ಲವೇ ಇದ...

ಫಿಲ್ (ಅರ್ಥಾತ್ ಫಿಲಿಪ್ ಕಾರ್ನಬಿ) ಶೆಲ್ಫಿನಲ್ಲಿ ಪುಸ್ತಕಗಳ ನಡುವೆ ತಲೆಬುರುಡೆಯೊಂದನ್ನ ಇರಿಸಿಕೊಂಡಿದ್ದಾನೆ. ಸಾಹಿತ್ಯದ ವಿದ್ಯಾರ್ಥಿ ಫಿಲ್ ತುಂಬಾ ಓದುತ್ತಾನೆ- ಶೇಕ್ಸ್‌ಪಿಯರ್, ಮಿಲ್ಟನ್, ಲಾರೆನ್ಸ್, ಇತ್ಯಾದಿ ಇತ್ಯಾದಿ ನಾಟಕದ ಹುಚ್ಚು ಬೇರೆ...

ವಿಮಾ ಏಜಂಟರಿಗಿಂತ ಎರಡು ಮಾತುಗಳನ್ನು ಹೆಚ್ಚಾಗಿ ಮಾತಾಡಿ, ಆಡಿದ ಸುಳ್ಳನ್ನು ಸತ್ಯವೆಂದೇ ಹಟ ವಿಡಿದು ವಾದಿಸುವ ಏಜಂಟರಾರೂ ಇರುವರಾದರೆ- ಅವರೇ ಇವರು ಮದುವೆಯ ಏಜಂಟರು. ಅಷ್ಟೇ ಅಲ್ಲ, ವಿಮಾ ಏಜಂಟರು ತಿಳಿಯದ ಒಂದೆರಡು ಚಿಕ್ಕ ಆಟಗಳನ್ನು ಈ ಏಜಂಟರು ...

ನೆರಳಲ್ಲಿ ನಿಂತು, ಸಾವಿರಬಾರಿ, ಇದೆಲ್ಲ ನಡೆಯುವುದು, ನೋಡಿದ್ದೇನೆ. ಕಳ್ಳತನ ಮೊದಲು, ಕೊಲೆ ಆಮೇಲೆ, ಮಾನಭಂಗ, ನಂತರ ಕುರುಡು ಕೈಯ ದಾರುಣ ಕೃತ್ಯಗಳು. ಪ್ರತಿ ಬಾರಿ ಹೊಸತಾಗಿ ಪ್ರಾರ್ಥಿಸಿದ್ದೇನೆ, ಇಲ್ಲವೆ ಹಳೆಯ ಪ್ರಾರ್ಥನೆಯನ್ನೆ ಹೊಸದಾಗಿ ಹೇಳಿದ...

ಗಗನ ಮಲ್ಲಿಗೆ ಮುಗಿಲ ಮಂಚದಿ ರಂಗವಲ್ಲಿಯ ಬರೆಯಲಿ ಪ್ರೀತಿ ಸಂಪಿಗೆ ತುಟಿಯ ಗುಡಿಯಲಿ ತಾಯ ಹಾಡನು ಹಾಡಲಿ ಸಿಡಿಲ ಮುಗಿಲಲಿ ಕಡಲ ಅಲೆಯಲಿ ಆತ್ಮ ಚಂದಿರ ಮೂಡಲಿ ಬಾಳ ತೋರಣ ಕಲೆಯ ಹೂರಣ ಹರುಷ ಹೋಳಿಗೆ ಉಣಿಸಲಿ ಅವ್ವ ತಾಯಿಯೆ ಅಬ್ಬೆ ದೇವಿಯೆ ಆಡು ಆಡಿಸು ...

ಯಾರೋ ಬಂದರು ಯಾರೋ ಹೋದರು ಗೋಡೆ ಮೇಲೆಲ್ಲ ನೆರಳು, ಚಲಿಸಿದಂತಾಗಿ ಕುತ್ತಿಗೆ ಬೆನ್ನೊಳು ಯಾರದೋ ನುಣುಪು ಬೆರಳು, ಬಂದಿದ್ದರು, ನಿಂತಿದ್ದರು, ನುಡಿಸಲು ಎಣಿಸಿದ್ದರು ಎಂಬ ಭಾವವೊಂದೆ ಉಳಿದಿದೆ, ಕತ್ತೆತ್ತಲು ಏನಿದೆ, ಬರಿಬಯಲು! ಹೂ ಪರಿಮಳ ಹಾಯಾಗಿ ಹ...

ಶಕ್ತಿಯ ಕೊಡು ಶಕ್ತಿಯ ಕೊಡು ಹೇ ಪ್ರಭು ಶಕ್ತಿಯಿಂದಲಿ ಎನಗೆ ಭಕ್ತಿಯ ಕೊಡು ಹೇ ಪ್ರಭು|| ಜನ್ಮ ಚಕ್ರಧಾರೆಯ ಬಿಡಿಸಿ ಹೇ ಪ್ರಭು ಕರ್‍ಮ ಭೇದಗಳ ಅಳಿಸಿ ಏಕ ಚಿತ್ತದೆ ನಿಲ್ಲಿಸು ಹೇ ಪ್ರಭು|| ನಿನ್ನ ನಾಮಾಮೃತವ ಭಜಿಸಿ ಹೇ ಪ್ರಭು ಮನವ ನಿಲ್ಲಿಸು ನಿನ್...

೨೦೦೫ ಆಗಸ್ಟ್ ತಿಂಗಳು ಮತ್ತು ೨೦೦೫ ಸೆಪ್ಟೆಂಬರ್ ತಿಂಗಳು ಪ್ರತಿಯೊಬ್ಬ ಬೆಂಗಳೂರಿಗನೂ (ಪ್ರೌಢಶಾಲೆಯ ಹುಡುಗ ಹುಡುಗಿಯರಿಂದ ಹಿಡಿದು ನನ್ನಂತಹ ತಪ್ಪಿತಸ್ಥ ಹಿರಿಯರವರೆಗೆ) ಬೆಂಗಳೂರಿನ ಕಳಪೆ ಮೂಲಭೂತ ಸೌಕರ್ಯಗಳ ಬಗ್ಗೆ ಮಾತನಾಡುತ್ತಿದ್ದುದು. ಪ್ರತಿ...

1234...9

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...