ಏನಿದೀ ಜಿಗಿದಾಟ ಕಿವಿಹರಿವ ಕೂಗಾಟ ಇದುವರೆಗು ಕೇಳರಿಯದೀ ಆರ್ಭಟ? ಕಳೆದ ಸಂತಮಹಾಂತರಾರು ಕಾಣದ ನೆಲೆಯ ಕಂಡನೆಂಬಂತೆ ಇವನಾಡುವಾಟ! ಅವರಿವರ ನಾಲಗೆಯ ಕಿತ್ತು ತಲೆಯೊಳು ನೆಟ್ಟು ಬೆಳೆಸಿಹನು ಇವನೊಂದು ಭಾರಿ ಮಂಡೆ. ರಮಣ ಅರವಿಂದ ನುಡಿಯುವರು ಬುರುಡೆಯೊಳ...

ಹಾಡೆಂದರೆ ಹಾಡಲೇನು ಬಾನು ಚುಕ್ಕಿಯ ಕರೆಯಲೇನು || ಮೌನ ರಾಗವ ಮೀಟಿ ಭಾವನುರಾಗ ಸೆರೆಯಲಿ || ಸುತ್ತ ಚಂದ್ರ ತಾರೆ ಮಿಂಚಿ ನನ್ನ ಮನದ ಭಾವ ಹೊಂಚಿ ನಸು ನಾಚಿ ಕಾಮನೆ ಚೆಲ್ಲಿ ಸೆರಗ ಹೊದ್ದಿದೆ ಶಿಲೆಯು ||ಮೌ|| ಕಡಲ ತೀರ ಅಲೆಯ ಮೇಲೆ ನನ್ನ ಧಾರೆ ಹರಿಗ...

ಕಾನ್ಸಿರಾಮ್ ಅವರು ಕದ ತಟ್ಟುತ್ತಿದ್ದಾರೆಂದ ಕೂಡಲೆ ಭೂಕಂಪವಾದಂತೆ ಬೆಚ್ಚಿ ಬೀಳುವ ವಾತಾವರಣವಿದೆ ಎಂಬಂತೆ ವರದಿಗಳು ಬರುತ್ತಿವೆ. ಮಹಾರಾಷ್ಟ್ರಕ್ಕೆ ಅವರು ಬರುವುದಕ್ಕೆ ಎರಡು ದಿನ ಮುಂಚೆಯೇ ಮರಾಠವಾಡ ವಿಶ್ವವಿದ್ಯಾಲಯಕ್ಕೆ ಅಂಬೇಡ್ಕರ್ ಹೆಸರು ಇಡುವ...

ಗುಂಡ ಪರೀಕ್ಷೆಗೆ ಹೋದ ಹತ್ತೇ ನಿಮಿಷಕ್ಕೆ ಮನೆಗೆ ವಾಪಸ್ಸು ಬಂದನು. ಅಪ್ಪ ಕೇಳಿದ. “ಯಾಕೆ ಇಷ್ಟು ಬೇಗ ಬಂದಿರುವೆ?” “ನೀವೇ ಹೇಳಿದ್ರಲ್ಲಾ. ಪರೀಕ್ಷೆಯಲ್ಲಿ ನೀನೇ ಮೊದಲು ಬರಬೇಕು.” *****...

“ಏ, ಗುಡುಗೆ! ಗುಡಿಗಿ ಬಡಬಡಸ ಬೇಡ” ಎಂದು ಮಿಂಚು ಹೇಳಿತು. “ಏ, ಮಿಂಚೆ! ನೀಕುಣಿಕುಣಿದು ಕುಪ್ಪಳಿಸ ಬೇಡ.” ಎಂದಿತು ಗುಡುಗು. “ನಾ ಗುಡುಗಿ ಹನಿಹನಿ ಸೃಷ್ಟಿಸಿ ಮಳೆಯಾಗಿ ಸುರಿಸುವೆ. ನೀ ಕುಣಿಕುಣಿದು ಏನು ಮಾಡು...

ತನ್ನಂತೆಯೇ ರೂಪಿಸಲು ರೊಟ್ಟಿಯನ್ನು ಬಡಿಬಡಿದು ಅದೆಷ್ಟು ಚೆಂದಗೆ ಹದಗೊಳಿಸುತ್ತದೆ ಹಸಿವು. ರೊಟ್ಟಿಯೀಗ ಹೊರನೋಟಕ್ಕೆ ಹಸಿವಿನದೇ ಪ್ರತಿಬಿಂಬ ಒಳಗು ಮಾತ್ರ ಆತ್ಮಪ್ರತ್ಯಯದಲಿ ಜ್ವಲಿಸುವ ಮೂಲ ಬಿಂಬ. *****...

ಬೀಜ ಬಿತ್ತಿದ ಅಮ್ಮನ ಹಿತ್ತಲಲಿ ಹಕ್ಕಿ ಪಕ್ಷಿಗಳ ಇನಿದನಿ ಚಿಮ್ಮಿ ಅರಳಿ ಘಮ್ಮೆಂದು ಸೂಸಿ ನೆಲತುಂಬ ಹರಡಿ ಹಾಸಿದ ಪಾರಿಜಾತ ಹೂರಾಶಿ. ಅಲ್ಲೇ ಬಟ್ಟೆ ಒಗೆಯುವ ಕಲ್ಲಮೇಲೆ ಮೂಡಿವೆ ಅವಳ ಕೈ ಬೆರಳ ಬಳೆಗಳ ಚಿಕ್ಕೀ ನಾದ ರೇಖೆಗಳು ಚಿತ್ತ ಪಟ ಪಾತರಗಿತ್ತಿ...

ಅಧ್ಯಾಯ -೯ ಭಾಷೆಯೊಂದರ ಬೆಳವಣಿಗೆ ಮತ್ತು ವಿಕಾಸ ಮಗುವಿನಲ್ಲಿ ಅದರ ಹುಟ್ಟಿನೊಂದಿಗೇ ಪ್ರಾರಂಭವಾಗುತ್ತದೆ. ಹುಟ್ಟಿದ ಕೂಡಲೇ ಆ ಮಗುವಿನ ಮನೆಯವರಾಡುವ ಭಾಷೆಯ ಮಾತುಗಳು ಅದರ ಕಿವಿಯ ಮೇಲೆ ಬೀಳಲಾರಂಭಿಸುತ್ತವೆ. ಮಗುವಿನ ಮೆದುಳಿನಲ್ಲಿ ಎರಡು ಭಾಗಗಳಿವ...

1234...10

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....