ಪರಿಣಾಮ
ಹೊಲಸು ನೀರು ಹರಿವ ಕಡೆ ಹಲಸು ಹಣ್ಣಾಗಿ ಊರಿಗೆ ತುಂಬಿತು ಪರಿಮಳ ಗಂಗೆ ತುಂಗೆ ಕಾವೇರಿ ಮಿಂದು ಬಂದರು ಕಳೆದು ಹೋಗಲಿಲ್ಲ ಮನದ ಮಡಿ ಮೈಲಿಗೆ ಆಚಾರ ವಿಚಾರ *****
ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ… ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ…. ಯಾರಾದರೂ ಬಿದ್ದರೆ, ಕೈಕಾಲು ಮುರಿದುಕೊಂಡರ? ಅಷ್ಟೇ ಅಲ್ಲ ಅವರದೇ ಲೋಕದಲ್ಲಿ ಅವರದೇ ನ್ಯಾಯ ದಂಡದ ಆಧಾರದ ಮೇಲೆ ಅಳು, ನಗು ಶಿಕ್ಷೆ… ಇವೆಲ್ಲಾ ಇದ್ದದ್ದೇ. ಹೀಗಾಗಿ ಬೇಸಿಗೆ ರಜಾ ಬಂದದ್ದರಿಂದ […]
ರಜದಲ್ಲೇನು ಮಾಡುವಿರಿ ಎಂದು ಕೇಳಿದರು ಟೀಚರು ಊರಿಗೆ ಹೋಗುತ್ತೇವೆ ಎಂದರು ಒಬ್ಬಿಬ್ಬರು ಊಟ, ಆಟ ಎಂದು ಪಿಸುಗುಟ್ಟಿ ನಕ್ಕರು ತುಂಟರು ಒಬ್ಬರಿದ್ದಂತಿದ್ದರಲ್ಲವೆ ಇನ್ನೊಬ್ಬರು? ತಲೆಗೊಂದರಂತೆ ಮಾತು ಗದ್ದಲಿಸಿದರು ಅದೇನು ಮಾಡುತ್ತಿರೊ ಮಾಡಿ ಅಂದರು ಟೀಚರು ಮಾಡಿದ್ದನ್ನೆಲ್ಲಾ ದಿನವೂ ಬರೆದಿಡಿ ಅಂದರು ‘ಇದ್ದದ್ದು ಇದ್ದ ಹಾಗೆಯೇ’ ಎಂದೂ ಸೇರಿಸಿದರು. ಹೀಗೆ ಊಟ ಆಟದ ಜೊತೆಗೆ ದಿನಚರಿ ಬರೆಯುವುದೂ […]
ರಾತ್ರಿ ಶಾಲೆ ಚೆನ್ನಾಗಿಯೇ ನಡೆಯತೂಡಗಿತು. ಶಬರಿಯ ನೇತೃತ್ವದಲ್ಲಿ ಹೆಂಗಸರು ಹಚ್ಚಾಗಿಯೇ ಬರುತ್ತಿದ್ದರು; ಸಣ್ಣೀರ, ಹುಚ್ಚೀರ ಸೇರಿ ಗಂಡಸರನ್ನೂ ಕರೆತರುತ್ತಿದ್ದರು. ನವಾಬನನ್ನು ಎಲ್ಲರೂ ‘ನವಾಬಣ್ಣ’ ಎನ್ನುವುದಕ್ಕೆ ಆರಂಭಿಸಿದರು. ಸೂರ್ಯ ಕೆಲಸವಿದಿಯೆಂದು ಹಟ್ಟಿ ಬಿಟ್ಟು ಹೋಗುವುದೂ ಬರುವುದೂ ಜಾಸ್ತಿಯಾದಾಗ ನವಾಬನೇ ಎಲ್ಲ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದ. ಹೀಗಾಗಿ ಸಲಿಗೆ ಜಾಸಿಯಾಗಿತ್ತು. ಸೂರ್ಯನ ಬಗ್ಗೆ ಗೌರವ ಜಾಸ್ತಿಯಿತ್ತು. ಸೂರ್ಯನ ಜೊತಗೆ ನವಾಬನೂ […]
ನನಗೆ ನೀನು ಇಂದಿಗೂ ಒಗಟು ಬಿಡಿಸಲಾಗದ ಕಗ್ಗಂಟು ಯಾಕೆ ನಲ್ಲ? ನನ್ನಲ್ಲಿ ಬಯಲಾಗದ ಹಠ ಒಳಗೆ ತುಡಿತ ಮಿಡಿತ ತೋರಿಕೆಗೆ ಯಾಕೆ ಹಿಂದೆಗೆತ? ಮನಬೆರೆತರೂ ಬೆರೆಯದಂತೆ ಒಲಿದರೂ ಒಲಿಯದಂತೆ ನೀನೆಕೆ ಪದ್ಮಪತ್ರದಂತೆ? ಹಸಿವು ನನಗೂ ನಿನಗೂ ಇಬ್ಬರಿಗೂ ಉಸಿರು ನಿಲ್ಲುವವರೆಗೂ ಗೋಡೆ ಬೇಡ, ಒಣ ಜಂಭ ಹಿತವಲ್ಲ ತುಂಬು ಬಿಂದಿಗೆಯಂತೆ ಹಬ್ಬಿ ನಿಂತಿದೆ ಪ್ರೀತಿ ನಿನ್ನ […]
ಮಂಡೂಕಗಳಿಗವಸ್ಥೆ ಮೂರು: ನಿದ್ದೆ, ಎಚ್ಚರ, ಮಧ್ಯಂತರ. ಮನುಷ್ಯರಿಗೆ ಕೂಡ ಅಷ್ಟೆ. ನಿದ್ದೆಯಲಿ ಕನಸು ಕೀಟಗಳದ್ದೆ ಎಚ್ಚರದಲವುಗಳ ಹಿಡಿಯಲು ಹುಡುಕಾಟ ಸಿಕ್ಕಿದರೆ ಊಟ, ಇಲ್ಲದಿದ್ದರೆ ಉಪವಾಸ ಮಧ್ಯಂತರಾವಸ್ಥೆಯಲಿ ಹೀಗೆಯೇ ಬೇಟ ಹೊಸತೇನಲ್ಲ; ತಲಾಂತರದಿಂದ ಬಂದದ್ದೆ ಕಣ್ಣಿಗೆ ಬೀಳದ ಕರ್ತಾರ ನಡೆಸಿದ ಪವಾಡ ನೆನೆಸಿಕೊಂಡರೇನೆ ಕಣ್ಣುಗಳರಡೂ ಒದ್ದೆ ಅದ್ದರಿಂದಲೆ ಆಗಾಗ ಪ್ರಾರ್ಥನಾ ಕೂಟ ಪುಣ್ಯಭೂಮಿಗಳ ಕಡೆಗೆ ಪ್ರವಾಸ ಮಂಡೂಕಗಳಿಗೆ […]
ಅಧ್ಯಾಯ ಎರಡು ‘ವಸಂತಸೇನಾ’ ಮೂಕಿ ಚಿತ್ರದ ಚಿತ್ರೀಕರಣ ಬಹುತೇಕ ಕರ್ನಾಟಕದಲ್ಲೇ ನಡೆದರೆ, ಮೊದಲ ವಾಕ್ಚಿತ್ರ ‘ಸತಿ ಸುಲೋಚನಾ’ ತಯಾರಾದದ್ದು ಕರ್ನಾಟಕದ ಹೊರಗೆ. ಅದರ ನಿರ್ಮಾಣದ ಹೊಣೆ ಹೊತ್ತವರೂ ಕನ್ನಡೇತರರೇ! ಕರ್ನಾಟಕದಿಂದ ಹೊರಗೆ, ಕನ್ನಡೇತರರಿಂದ ನಿರ್ಮಾಣಗೊಂಡ ‘ಸತಿ ಸುಲೋಚನಾ’ ಕನ್ನಡದ ಮಾತಿನ ಚಿತ್ರಗಳ ಯುಗಕ್ಕೆ ನಾಂದಿ ಹಾಡಿತು. ಅದು ೧೯೩೪ನೇ ಇಸವಿ. ಭಾರತೀಯ ಚಲನಚಿತ್ರರಂಗದ ಮೊದಲ ಟಾಕಿ […]
ಅಮ್ಮಾ, ನನ್ನ ಮಗುವನ್ನು ಕಂಡರೆ ನಿನಗೆ ಪ್ರೀತಿ ಇಲ್ಲವೇನಮ್ಮಾ? ತೊದಲು ಮಾತಿನ ಮಗು, ಪುಟ್ಟ ಹೆಜ್ಜೆ ಇಡುವ ಮಗು, ಮುದ್ದು ಮಗು? ಇದೇ ಈಗ ಸ್ನಾನ ಮಾಡಿಸಿಕೊಂಡು ಥಳ ಥಳ ತೊಳಗುತ್ತಿರುವ ಮಗುಗಳ ಮಾಣಿಕ್ಯನಂಥ ಕಿಲಕಿಲನೆ ನಗುವ ಮಗು? ಮಗಳೇ, ಮಗಳೇ, ನಿನ್ನ ಮಗುವನ್ನು ಮುದ್ದು ಮಾಡಲು ನನಗೂ ಆಸೆ, ಮಗಳೇ. ಅಜ್ಜಿಯ ಪ್ರೀತಿ ತೋರಿ, […]
ನಾವು ಮಕ್ಕಳು ಶಿವನ ಶಿಶುಗಳು ನಾವು ಕಮಲದ ಹೂಗಳು ನಾವು ಆತ್ಮರು ಬಿಂದು ರೂಪರು ನಾವು ನಂದಾದೀಪರು ದೊಡ್ಡ ತೇರು ಎಳೆದ ಮೇಲೆ ಗಿಡ್ಡ ತೇರು ಏತಕೆ ಆತ್ಮ ದೇವರ ಕಂಡ ಮೇಲೆ ಗಿಂಡಿ ದೇವರು ಏತಕೆ ಧೂಮಪಾನಾ ಮದ್ಯಪಾನಾ ಅಣ್ಣಾ ನಿನಗೆ ಬೇಡವೊ ನೀನು ತಂದಿಯ ಮಧುರ ಮಗನೊ ಚರ್ಮ ಚಟಗಳು ಯಾತಕೊ ಸುಟ್ಟು […]