ಹೊಲಸು ನೀರು ಹರಿವ ಕಡೆ
ಹಲಸು ಹಣ್ಣಾಗಿ
ಊರಿಗೆ ತುಂಬಿತು ಪರಿಮಳ
ಗಂಗೆ ತುಂಗೆ ಕಾವೇರಿ
ಮಿಂದು ಬಂದರು
ಕಳೆದು ಹೋಗಲಿಲ್ಲ
ಮನದ ಮಡಿ ಮೈಲಿಗೆ
ಆಚಾರ ವಿಚಾರ
*****

ಜರಗನಹಳ್ಳಿ ಶಿವಶಂಕರ್‍
Latest posts by ಜರಗನಹಳ್ಳಿ ಶಿವಶಂಕರ್‍ (see all)