ಹಸಿವೆಂಬೋ ಕಡಲಿಗೆ ಬಿದ್ದು
ಈಜುತ್ತದೆ ತೇಲುತ್ತದೆ,
ಮುಳುಗುತ್ತದೆ. ಕಡೆಗೆ ನಿಧಾನಕ್ಕೆ…
ಕರಗಿ ಉಪ್ಪಾಗಿ ಹೋಗುತ್ತದೆ ರೊಟ್ಟಿ.
ಕಾಣದಿದ್ದರೂ ಇರುತ್ತದೆ.
ರುಚಿ ನೀಡುತ್ತದೆ.
*****