ಇರುವೆಗಳು ಸಾಲು ಸಾಲಾಗಿ ಧಾನ್ಯ ಹಿಡಿದು ಹೋಗುತ್ತಿದ್ದವು. ಒಂದು ತುಂಟ ಇರುವೆ ಸಾಲಿನಿಂದ ಮುಂದೆ ಹೋಗಲು ಯತ್ನಿಸಿತು. ನಾಯಕ ಇರುವೆ ದಂಡಿಸಿ ಹೇಳಿತು "ನೀನು ಮನುಷ್ಯರಂತೆ ನಿಯಮ ಬಾಹಿರವಾಗ ಬೇಡ. ಅವರಂತು ನಮ್ಮಿಂದ ಶಿಸ್ತಿನ...
ದಟ್ಟ ಮೆಳೆಯ ಬದುವಿನಲಿ ಅಂಡಲೆಯುತ್ತಿದ್ದ ಗೆಳತಿಗೆ ಎಲ್ಲೋ ಮರದ ತುದಿಯಲಿ ಪಕ್ಕನೆ ಕೈಸಿಕ್ಕ ಕೆಂಪು ಹಸುರಿನ ಬೋರಂಗಿ ಸಾಹಸದಿಂದ ಹಿಡಿದು ತಂದ ಮದರಂಗಿ. ಅದು ಪುರ್ರನೆ ಹಾರಿ ಮೈಯಲ್ಲಾ ರೋಮಾಂಚನ ಪುಟ್ಟ ಅಂಗೈತುಂಬ ಚೆಲುವಿನ...
ಅಧ್ಯಾಯ - ೬ ನಾನು ಕಪ್ಪಗಿದ್ದೇನೆ, ನನ್ನ ತೆಂಗಿಯರೆಲ್ಲ ಬೆಳ್ಳಗಿದ್ದಾರೆ. ಬೇರೆಯವರು ಇರಲಿ ನನ್ನ ಅಪ್ಪ ಅಮ್ಮನೇ ನನ್ನನ್ನು ತಿರಸ್ಕಾರದಿಂದ ನೋಡುತ್ತಾರೆ. ನಾನು ಉಳಿದವರಿಗಿಂತ ಹೆಚ್ಚು ಕೆಲಸ ಮಾಡಿಕೊಡುತ್ತೇನೆ, ಆಟೋಟಗಳಲ್ಲಿ ಪ್ರೈಜ್‌ಗಳನ್ನು ತೆಗೆದುಕೊಂಡಿದ್ದೇನೆ. ಒಳ್ಳೆಯ...
ದೊಡ್ಡ ದೊಡ್ಡ ಮರಗಳು ನೀಡುವ ಹಣ್ಣುಗಳು ಹಲಸು ಮಾವು ಉಳಿಯಲಾರವು ಒಂದೆರಡು ವಾರಗಳು ಸಣ್ಣ ಸಣ್ಣ ಪೈರುಗಳು ನೀಡುವ ಕಾಳುಗಳು ರಾಗಿ ಜೋಳ ಧಾನ್ಯಗಳು ಉಳಿಯುತ್ತವೆ ಹತ್ತಾರು ವರ್‍ಷಗಳು *****
ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ ಇದು ನಿಜವಾಗಿಯೂ ನನ್ನೆದೆಯ ಭಯಾನಕತೆಯೇ, ಇಲ್ಲ.......