Month: March 2020

#ನಗೆ ಹನಿ

ನೀನೂ

0
ತೈರೊಳ್ಳಿ ಮಂಜುನಾಥ ಉಡುಪ
Latest posts by ತೈರೊಳ್ಳಿ ಮಂಜುನಾಥ ಉಡುಪ (see all)

ತಿಮ್ಮ ಊರಿಗೆ ಹೊರಟಾಗ ರಾತ್ರಿಯಾಗಿತ್ತು. ಯಾವುದೇ ಬಸ್ಸು ಇರದ ಕಾರಣ ಆಟೋ ಮಾಡಿಕೊಂಡು ಹೊರಟ, ಊರು ತಲುಪಿದ ನಂತರ ಛಾರ್ಜ ಎಷ್ಟು ಎಂದು ಕೇಳಿದಾಗ ಆಟೋದವನು “ನೂರು ರೂಪಾಯಿ” ಎಂದನು. ಆಟೋ ಡ್ರೈವರ್‌ಗೆ ತಿಮ್ಮ ಐವತ್ತು ರೂಪಾಯಿ ಕೊಟ್ಟನು. “ಇಷ್ಟು ಕಡಿಮೆ ಯಾಕೆ?” ಎಂದು ಆಟೋದವನು ಕೇಳಿದಾಗ ತಿಮ್ಮ ಹೇಳಿದ. “ನನ್ನನು ದಡ್ಡ ಅಂದುಕೊಂಡೆಯಾ ನನ್ನ […]

#ಹನಿ ಕಥೆ

ಗುಡುಗು ಮಿಂಚು

0
ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)

“ಏ! ಮಿಂಚೆ ಏಕೆ ವಕ್ರ ವಕ್ರ ವಾಗಿ ಕುಣಿಯುತಿರುವೆ?” ಎಂದು ಗುಡುಗು, ಗುಡಿಗಿ ಗದರಿಸಿತು. “ಮೋಡದ ಮರೆಯಲ್ಲಿ ಅಡಗಿ ಗುಡಗ ಬೇಡ. ಹೊರಗೆ ಬಂದು ನೋಡು, ಇದು ಮಿಂಚಿನ ಬೆಳಕಿನ ನೃತ್ಯ, ವಕ್ರ ನೃತ್ಯವಲ್ಲ.” ಎಂದಿತು ಮಿಂಚು, ಮಿಂಚಿನ ಮಾತಿನಲ್ಲಿ ಮರ್ಮವಿದೆ ಎಂದು ಅರಿತು, ಗುಡುಗು ತನ್ನ ಧ್ವನಿಯ ಧಾಟಿಯನ್ನು ಬದಲಿಸಿ ಕೊಂಡಿತು. *****

#ಹನಿಗವನ

ಗಳಿಗೆಬಟ್ಟಲ ತಿರುವುಗಳಲ್ಲಿ – ೬೧

0

ರೊಟ್ಟಿ ಹಸಿವಿಗೆ ಮುಖ್ಯವಾಗುವ ಕ್ಷಣ ಕ್ಷಣಿಕ ಹಸಿವಿನ ಅಪಾರ ಸಾಧ್ಯತೆಗಳ ಮುಂದೆ ಆದ್ಯತೆಗಳೂ ಬದಲಾಗುತ್ತದೆ. ಅಂತಿಮ ಕ್ಷಣದಲ್ಲಿ ರೊಟ್ಟಿಗೆ ತನ್ನ ಪಾತ್ರ ಮತ್ತು ಸ್ಥಾನದ ಅರಿವಾಗುತ್ತದೆ. *****

#ಕವಿತೆ

ಸಿಕ್ಕು

0
ಕಸ್ತೂರಿ ಬಾಯರಿ
Latest posts by ಕಸ್ತೂರಿ ಬಾಯರಿ (see all)

ತೆರೆದ ಮುಚ್ಚಿದ ಬಾಗಿಲುಗಳ ಸಂದಿಯಲಿ ಜೇಡ ನೇಯ್ದ ಬಲೆ ಮುಟ್ಟಿದೊಡನೆ ಕರಗಿ ಮತ್ತೆ ಕಟ್ಟುವ ಸಿಕ್ಕು ಕಳೆದು ಹೋದವು ದಿನಗಳ ನೇಯ್ಗೆಯ ಲಾಳಿಯಲಿ ಎಡೆಬಿಡದೇ ಕುಟ್ಟುವ ಮಗ್ಗದಲಿ. ನಾಡಿನ ದೇವರಿಗೆಲ್ಲಾ ಚೌಕಟ್ಟು ಪಡೆದು ಕುಂತ ಮಾಡಿನ ಸಂದಿಯಲ್ಲೂ ಮನಸ್ಸಿನ ಅಲೆ‌ಅಲೆಯ ಬಲೆ ಬಲೆಯ ಸಿಕ್ಕು ಆದಿ ಅನಾದಿ ನಾಡಿಗೆ ನಿಜ ಬಯಲು ಕಾವಲು ಹುಡುಕುತ ಹೊರಟಿದೆ […]

#ವಿಜ್ಞಾನ

ಜೇನು: ಆಹಾರ-ಔಷಧಿ

0

“ಜೇನು” ಎನ್ನುವ ಪದವೇ ಸರ್‍ವರ ಬಾಯಲ್ಲೂ ನೀರು ತರಿಸುವಂತಹದು. ಜೇನು ನಿಸರ್‍ಗದ ಸಿಹಿಯಾದ ಕೊಡುಗೆ. ಮಕರಂದದ ಸಂಗ್ರಹಿಸಿದ ಹೂವಿನ ಜಾತಿಯನ್ನು ಹೊಂದಿಕೊಂಡು ಜೇನಿಗೆ ಬಗೆಬಗೆಯ ರುಚಿ, ಸುವಾಸನೆ ಮತ್ತು ಬಣ್ಣ ಇರುತ್ತದೆ. ಬಿಳಿ ಬಣ್ಣದಿಂದ ಹಳದಿ ಮತ್ತು ಕಡು ಹಳದಿ ಬಣ್ಣಗಳವರೆಗೆ ಜೇನಿನಲ್ಲಿ ವರ್‍ಣವೈವಿಧ್ಯವುಂಟು. ಜೇನು ಆಹಾರವೂ ಹೌದು, ಔಷಧವೂ ಹೌದು. ಜೇನು ವೈದ್ಯಕೀಯ ಶಾಸ್ತ್ರದಲ್ಲಿ […]

#ಹನಿಗವನ

ಸಂಕೋಲೆಯೊಳಗಿಂದ

0
ಲತಾ ಗುತ್ತಿ
Latest posts by ಲತಾ ಗುತ್ತಿ (see all)

ಅಪ್ಸರೆಗಳಿಗೆ ಅಪ್ಪ ಸೆರೆಯಾದ ಗೆಳತಿ ದುಃಖಿಸಿದಳು ಅಳಬೇಡ ಮಗಳೆ ನನ್ನ ಸೆರೆ ಬಿಟ್ಟದ್ದು ಒಳ್ಳೆಯದೇ ಸೆರೆವಾಸಕ್ಕಿಂತ ಸರಳವಾಸಕ್ಕೆ ಹಾದಿ ಮಾಡಿಕೊಟ್ಟಿದ್ದಾನೆ – ಗೆಳತಿ ಕಕ್ಕಾಬಿಕ್ಕಿಯಾದಳು. *****

#ಹನಿಗವನ

ಪಕ್ವತೆ

0
ಜರಗನಹಳ್ಳಿ ಶಿವಶಂಕರ್‍
Latest posts by ಜರಗನಹಳ್ಳಿ ಶಿವಶಂಕರ್‍ (see all)

ಹಣಿಸೆ ಮಾವು ಹುಳಿಯಿಂದಲೆ ಹುಟ್ಟುತ್ತವೆ ಮುದಿಯಾದರು ಹುಣಿಸೆ ಹಾಗೆ ಉಳಿಸಿಕೊಳ್ಳುತ್ತೆ ಹುಳಿಯನ್ನು ಮಾವು ಹಣ್ಣಾಗುತ್ತ ಕಳೆದು ಕೊಳ್ಳುತ್ತೆ ಹುಳಿಯನ್ನು *****

#ಅನುವಾದ

ಭೂಮಿ ಕೊಟ್ಟರು

0
ನಾಗಭೂಷಣಸ್ವಾಮಿ ಓ ಎಲ್
Latest posts by ನಾಗಭೂಷಣಸ್ವಾಮಿ ಓ ಎಲ್ (see all)

ಒಂದೇ ಒಂದು ಮರದ ನೆರಳನ್ನಾಗಲೀ, ಬೀಜವನ್ನಾಗಲೀ, ಬೇರನ್ನಾಗಲೀ ಕಾಣದೆ ಇಷ್ಟು ಹೊತ್ತು ನಡೆದುಕೊಂಡು ಬಂದ ಮೇಲೆ ನಾಯಿ ಬೊಗಳುವುದು ಕೇಳುತ್ತಿದೆ. ರಸ್ತೆಯಲ್ಲದ ರಸ್ತೆಯಲ್ಲಿ ಅರ್ಧ ದೂರ ನಡೆದ ಮೇಲೆ-ಇದರಾಚೆಗೆ ಇನ್ನೇನೂ ಇಲ್ಲ, ಹಳ್ಳ, ಕೊರಕಲು, ಬತ್ತಿದ ನದಿ ಪಾತ್ರಗಳ ಈ ಬಯಲಾಚೆಗೆ ಇನ್ನೇನೇನೂ ಇಲ್ಲ ಅಂತ ಆಗಾಗ ಅನ್ಕಿಸುತಿತ್ತು. ಆದರೂ ಏನೋ ಇದ್ದ ಹಾಗಿದೆ. ಹಳ್ಳಿ […]

#ಹನಿಗವನ

ಅಲಂಕರಿಸಿವೆ

0
ಸವಿತಾ ನಾಗಭೂಷಣ
Latest posts by ಸವಿತಾ ನಾಗಭೂಷಣ (see all)

ಸೂರ್‍ಯ ಪ್ರತಿದಿನ ಕಡಲಲ್ಲಿ ಹನ್ನೆರಡು ತಾಸಿನ ಈಜಿನ ಅಭ್ಯಾಸ ನಡೆಸಿದ್ದಾನೆ. ಚಂದ್ರ ಮೈಲಿಗಟ್ಟಲೆ ಓಡಿದರೂ ದಣಿಯದೆ ನಸುನಗುತ್ತಾನೆ. ಕೋಟಿ ವರುಷಗಳಿಂದ ಈಜು ಮತ್ತು ಓಟದ ದಾಖಲೆಗಳು ಸೂರ್‍ಯಚಂದ್ರರ ಹೆಸರಿನಲ್ಲೆ ಇವೆ. ಇಬ್ಬರೂ ಸೇರಿ ಸಂಪಾದಿಸಿದ ಪದಕಗಳು ಆಕಾಶದ ಗೋಡೆಗಳನ್ನು ಅಲಂಕರಿಸಿವೆ. ಸ್ಯೂಲ್ ಪದ್ಯಗಳು – ೧೯೮೮ರಲ್ಲಿ ಸ್ಯೋಲ್‌ನಲ್ಲಿ ನಡೆದ ಒಲಂಪಿಕ್ಸ್ ಕ್ರೀಡಾಕೂಟದ ನೆನಪಿನಲ್ಲಿ ಬರೆದ ಕವನಗಳು […]