ಜೇನು: ಆಹಾರ-ಔಷಧಿ

ಜೇನು: ಆಹಾರ-ಔಷಧಿ

“ಜೇನು” ಎನ್ನುವ ಪದವೇ ಸರ್‍ವರ ಬಾಯಲ್ಲೂ ನೀರು ತರಿಸುವಂತಹದು. ಜೇನು ನಿಸರ್‍ಗದ ಸಿಹಿಯಾದ ಕೊಡುಗೆ. ಮಕರಂದದ ಸಂಗ್ರಹಿಸಿದ ಹೂವಿನ ಜಾತಿಯನ್ನು ಹೊಂದಿಕೊಂಡು ಜೇನಿಗೆ ಬಗೆಬಗೆಯ ರುಚಿ, ಸುವಾಸನೆ ಮತ್ತು ಬಣ್ಣ ಇರುತ್ತದೆ. ಬಿಳಿ ಬಣ್ಣದಿಂದ ಹಳದಿ ಮತ್ತು ಕಡು ಹಳದಿ ಬಣ್ಣಗಳವರೆಗೆ ಜೇನಿನಲ್ಲಿ ವರ್‍ಣವೈವಿಧ್ಯವುಂಟು. ಜೇನು ಆಹಾರವೂ ಹೌದು, ಔಷಧವೂ ಹೌದು.

ಜೇನು ವೈದ್ಯಕೀಯ ಶಾಸ್ತ್ರದಲ್ಲಿ ಮತ್ತು ಆಯುರ್‍ವೇದ ಪದ್ಧತಿಯಲ್ಲಿ ಮಹತ್ವದ ಸ್ಥಾನ ಪಡೆದಿದೆ. ಜೇನು ಹಾಲಿಗಿಂತಲೂ ಆರು ಪಟ್ಟು ಪೌಷ್ಟಿಕತೆ ಹೊಂದಿದೆ. ಬಿಳಿ ಬಣ್ಣದ ಜೇನು ತುಪ್ಪಕ್ಕಿಂದ ಕಂದು ಬಣ್ಣದ ಜೇನಿನಲ್ಲಿ ಪೌಷ್ಟಿಕ ಪ್ರಮಾಣ ಹೆಚ್ಚಾಗಿರುತ್ತದೆ. ಶಕ್ತಿಯನ್ನು ಒದಗಿಸುವಲ್ಲಿ ಜೇನಿಗೇ ಮೊದಲನೆ ಸ್ಥಾನ. ೧೦ ಟೇಬಲ್ ಚಮಚ (೨೦೦ ಗ್ರಾಂ)ದಷ್ಟು ಜೇನು, ೩೩೦ ಗ್ರಾಂ ಮಾಂಸ ಅಥವಾ ೧೦ ಕೋಳಿಮೊಟ್ಟೆ ಅಥವಾ ೮ ಕಿತ್ತಳೆಹಣ್ಣು ಅಥವಾ ೧ ಲೀಟರ್‍ ಹಾಲು ಒದಗಿಸುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪೌಷ್ಟಿಕಾಂಶವನ್ನು ಒದಗಿಸುತ್ತದೆಯೆಂದಾಗ ಅದರ ಶಕ್ತಿಯ ಅರಿವಾಗದಿರದು. ಸುಮಾರು ೨೧ ಗ್ರಾಂ ಜೇನುತುಪ್ಪ ಸುಮಾರು ೬೭ ಕ್ಯಾಲೋರಿಗಳಷ್ಟು ಶಕ್ತಿಯನ್ನು ಒದಗಿಸಬಲ್ಲದು.

ಮುಖ್ಯವಾಗಿ ಜೇನಿನಲ್ಲಿ ಲೆವ್ಯೂಲೋಸ್ ಮತ್ತು ಡೆಕ್ಸ್‌ಟ್ರೋಸ್ ಎಂಬ ಸಕ್ಕರೆಗಳು ಇರುತ್ತವಾದರೂ, ಅದರಲ್ಲಿ ದೇಹಾರೋಗ್ಯಕ್ಕೆ ಅಗತ್ಯವಿರುವ ಹೆಚ್ಚು ಕಡಿಮೆ ಎಲ್ಲಾ ಖನಿಜ-ಲವಣಾಂಶಗಳು ಮತ್ತು ವಿಟಾಮಿನ್‌ಗಳು ಸಾಕಷ್ಟಿವೆ. ಜೇನುತುಪ್ಪದಲ್ಲಿರುವ ಕಬ್ಬಿಣ ಮತ್ತು ತಾಮ್ರದ ಅಂಶಗಳು ನೇರವಾಗಿ ಸಂಪೂರ್‍ಣವಾಗಿ ದೇಹದಲ್ಲಿ ಅರಗಿಕೊಂಡು ಬರುತ್ತವೆ. ಇದರ ಜೊತೆಗೆ ಇತರ ಪದಾರ್‍ಥಗಳು ಕೂಡ ಇದರ ಸಾನಿಧ್ಯದಲ್ಲಿ ಹೆಚ್ಚು ಪ್ರಮಾಣದಲ್ಲಿ ಕರಗಿ ಹೆಚ್ಚು ಗುಣಗಳನ್ನು ಶೀಘ್ರವಾಗಿ ಕೊಡುತ್ತವೆ.

ಜೇನಿನಲ್ಲಿ ಬಹು ಸರಳ ರೂಪದ ಸಕ್ಕರೆಯಿರುವುದೇ ಅದರ ಹಿರಿಮೆಗೆ ಕಾರಣ. ಸುಲಭವಾಗಿ ಜೀರ್‍ಣವಾಗುವ ಶಕ್ತಿದಾಯಕವಾದ ಸರಳ ಸಕ್ಕರೆಯಿಂದಾಗಿ ಅಸ್ವಸ್ಥತೆಯಲ್ಲಾಗಲೀ, ಆರೋಗ್ಯದಲ್ಲಾಗಲೀ ಜೇನನ್ನು ನಿರಾತಂಕವಾಗಿ ಎಲ್ಲರೂ ಸೇವಿಸಬಹುದು.

ರೋಗ ನಿವಾರಕ

ಜೇನುತುಪ್ಪ ಪ್ರಬಲ ರೋಗ ನಿರೋಧಕ. ಕೆಂಪು ರಕ್ತಕಣಗಳ ಅಭಿವೃದ್ಧಿಗೆ ಸಹಕಾರಿಯಾಗಿದೆ. ಇದು ಕೆಮ್ಮು, ಶೀತ ಮತ್ತು ಜ್ವರದ ವಿರುದ್ಧ ತಡೆಯಾಗಿಯೂ ಕೆಲಸ ಮಾಡುತ್ತದೆ. ಇದು ರಕ್ತ ಶುದ್ಧಿಕಾರಿಯಾಗಿಯೂ, ಕಣ್ಣಿನ ವ್ರಣ, ನಾಲಿಗೆ ವ್ರಣ, ಗಂಟಲು ಹುಣ್ಣು ಮತ್ತು ಸುಟ್ಟ ಗಾಯಗಳಿಗೆ ಬಹಳಷ್ಟು ಗುಣಕಾರಿಯಾಗಿದೆ.

ಮುಖದ ಮೇಲೆ ಮೊಡವೆಗಳುಳ್ಳವರು ಸ್ವಲ್ಪ ನಿಂಬೆರಸದೊಡನೆ ಜೇನನ್ನು ಬೆರಸಿ ಹಚ್ಚಿಕೊಳ್ಳುವುದರಿಂದ ಮೊಡವೆಗಳು ಮಾಯವಾಗುವುದಲ್ಲದೆ ಚರ್‍ಮವೂ ಶುದ್ಧಿಯಾಗುತ್ತದೆ.

ದುಡಿತದಿಂದ ತುಂಬಾ ಬಳಲಿದವರು ಒಂದುವರೆ ಟೇಬಲ್ ಚಮಚ ಜೇನನ್ನು, ಚಳಿಗಾಲದಲ್ಲಾದರೆ ೧ ಗ್ಲಾಸ್ ಬಿಸಿ ನೀರಿನಲ್ಲಿ, ಬೇಸಿಗೆಯಲ್ಲಾದರೆ ತಣ್ಣಿರಿನಲ್ಲಿ ಸೇವಿಸಿದರೆ ತನ್ನ ಕಳೆದುಹೋದ ಶಕ್ತಿಯನ್ನು ಪುನಃ ಪಡೆಯುತ್ತಾರೆ.

ಕಂದುಬಣ್ಣದ ಜೇನುತುಪ್ಪದಲ್ಲಿ ಕಬ್ಬಿಣ, ಮ್ಯಾಂಗನೀಸ್ ಮತ್ತು ತಾಮ್ರದ ಪ್ರಮಾಣ ಹೆಚ್ಚಾಗಿರುವುದರಿಂದ ಇದರ ಸೇವನೆಯಿಂದ ಅನಿಮಿಯಾ ರೋಗವು ಕ್ರಮೇಣ ಗುಣ ಹೊಂದುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂಕೋಲೆಯೊಳಗಿಂದ
Next post ಸಿಕ್ಕು

ಸಣ್ಣ ಕತೆ

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…