ಸೂರ್‍ಯ ಪ್ರತಿದಿನ ಕಡಲಲ್ಲಿ
ಹನ್ನೆರಡು ತಾಸಿನ ಈಜಿನ
ಅಭ್ಯಾಸ ನಡೆಸಿದ್ದಾನೆ.
ಚಂದ್ರ ಮೈಲಿಗಟ್ಟಲೆ ಓಡಿದರೂ
ದಣಿಯದೆ ನಸುನಗುತ್ತಾನೆ.
ಕೋಟಿ ವರುಷಗಳಿಂದ
ಈಜು ಮತ್ತು ಓಟದ ದಾಖಲೆಗಳು
ಸೂರ್‍ಯಚಂದ್ರರ ಹೆಸರಿನಲ್ಲೆ ಇವೆ.
ಇಬ್ಬರೂ ಸೇರಿ ಸಂಪಾದಿಸಿದ
ಪದಕಗಳು ಆಕಾಶದ
ಗೋಡೆಗಳನ್ನು ಅಲಂಕರಿಸಿವೆ.

ಸ್ಯೂಲ್ ಪದ್ಯಗಳು – ೧೯೮೮ರಲ್ಲಿ ಸ್ಯೋಲ್‌ನಲ್ಲಿ ನಡೆದ ಒಲಂಪಿಕ್ಸ್ ಕ್ರೀಡಾಕೂಟದ ನೆನಪಿನಲ್ಲಿ ಬರೆದ ಕವನಗಳು
*****

ಸವಿತಾ ನಾಗಭೂಷಣ
Latest posts by ಸವಿತಾ ನಾಗಭೂಷಣ (see all)