ಹಣಿಸೆ ಮಾವು
ಹುಳಿಯಿಂದಲೆ ಹುಟ್ಟುತ್ತವೆ
ಮುದಿಯಾದರು ಹುಣಿಸೆ
ಹಾಗೆ ಉಳಿಸಿಕೊಳ್ಳುತ್ತೆ ಹುಳಿಯನ್ನು
ಮಾವು ಹಣ್ಣಾಗುತ್ತ
ಕಳೆದು ಕೊಳ್ಳುತ್ತೆ ಹುಳಿಯನ್ನು
*****