ಬಾಳೆಹಣ್ಣಿನ ಸಿಪ್ಪೆಯನ್ನು ತುಳಿದು ಕಾಲು ಜಾರಿದ ಅನುಭವ ಬೇಕಾವಷ್ಟು ಜನಕ್ಕಿದೆ ಅಲ್ಲವೆ? ಇಂಥಹ ಬಾಳೆಹಣ್ಣಿನ ಸಿಪ್ಪೆಯು ತಾಜ್ಯ ವಸ್ತುವಾಗಿ ಅಲ್ಲಲ್ಲಿ ಬೀಳುತ್ತಲೇ ಇರುತ್ತದೆ. ನಮ್ಮಲ್ಲಿ ಸಾಮಾನ್ಯವಾಗಿ ನಿರುಪಯುಕ್ತ ವಸ್ತುವಾಗಿ ಕರಗಿ ಹೋಗುವ ಇಂಥಹ ಸಿಪ್ಪೆಯನ್ನು ಥಾಯ್ಲೆಂಡ್ ದೇಶದ ಜನ ಹಣ್ಣನ್ನು ತಿಂದು ಸಿಪ್ಪೆಯಿಂದಲೂ ಆಗಬಹುದಾದ ಉಪಯೋಗವನ್ನು ಕಂಡುಕೊಂಡಿದ್ದಾರೆ. ಏಕೆಂದರೆ ಇಲ್ಲಿ ಬಾಳೆ ಒಂದು ಪ್ರಮುಖವಾದ ಬೆಳೆ. ಇಲ್ಲಿ ಈ ಸಿಪ್ಪೆಯ ರಾಶಿ ರಾಶಿ ಬೀಳುತ್ತದೆ. ಇಂಥಹ ಸಿಪ್ಪೆಯನ್ನು ಬಳಸಿಕೊಂಡು ಜೈವಿಕ ಅನಿಲವನ್ನು ಉತ್ಪಾದಿಸುವ (Gas) ಸ್ಥಾವರವನ್ನು ಥಾಯ್ಲಾಂಡಿನ ನರಸುವಾನ್ ವಿಶ್ವವಿದ್ಯಾನಿಲಯದ ಸೌರಶಕ್ತಿತರಬೇತಿ ಕೇಂವ್ರದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಬಾಳೆಹಣ್ಣನ್ನು ಸಂಸ್ಕರಿಸುವ ಉದ್ಯಮಗಳು ಅಲ್ಲಿಯ ಗ್ರಾಮೀಣ ಪ್ರದೇಶದಲ್ಲಿ ಹೇರಳವಾಗಿವೆ. ಉಳಿದ ಸಿಪ್ಪೆಯಿಂದ ಇಂಧನ ಅನಿಲವನ್ನು ಉತ್ಪಾದಿಸಿದರೆ ಹೆಚ್ಚು ಪ್ರಯೋಜನಕಾರಿಯಾಗುತ್ತದೆ. ಜತೆಗೆ ಪರಿಸರ ಮಾಲಿನ್ಯವನ್ನು ಸಹ ತಡೆಗಟ್ಟಬಹುದು.

ದನ ಕರಗಳ ಸಗಣಿಯನ್ನು ಮತ್ತು ಗಿಡಗಳನ್ನು ಕೊಳೆಯಿಸಿ ಮಿಥೇನ್ ಅನಿಲವನ್ನು ಉತ್ಪಾದಿಸುವಂತೆ, ದನಗಳ ಸಗಣಿಯಿಂದ ಗೋಬರ್ ಗ್ಯಾಸನ್ನು ಬಳೆಸುವಂತೆ ಥಾಯ್ಲಾಂಡಿನಲ್ಲಿ ಬಾಳೆಹಣ್ಣಿನ ಸಿಪ್ಪೆಯಿಂದ ಇಂಧನ ಅನಿಲವನ್ನು ತಯಾರಿಸುವ ತಂತ್ರಜ್ಞಾನ ಬೆಳಕಿಗೆ ಬಂದಿದೆ. ಥಾಯ್ಲಾಂಡಿನ ಬಂಗ್‌ಕ್ರಾತುಮ್ ಎಂಬ ಜಿಲ್ಲೆಯಲ್ಲಿ ನಡೆಯಿಸಿದ ಸಮೀಕ್ಷೆಯಿಂದ ಅಲ್ಲಿ ವರ್ಷಕ್ಕೆ 10 ಸಾವಿರ ಟನ್‌ಗಳಷ್ಟು ಬಾಳೆಹಣ್ಣುಗಳನ್ನು ಒಣಗಿಸಲಾಗುತ್ತದೆ. ಮತ್ತು ಇದರಿಂದ ಎರಡುವರೇ ಸಾವಿರ ಟನ್‌ಗಳಷ್ಟು ಸಿಪ್ಪೆ ಉಳಿಯುತ್ತದೆಂದು ತಿಳಿದು ಬಂದಿದೆ. ಇಂಥ ರಾಶಿ ರಾಶಿ ಬೀಳುವ ಸಿಪ್ಪೆಯಿಂದ  ಅನಾಯಾಸವಾಗಿ ಇಂಧನದ ಅನಿಲವನ್ನು ಉತ್ಪಾದಿಸುವ ಘಟಕಗಳು ನಡೆಯುತ್ತದೆ.

ಈ ಯೋಜನೆಯ ಅನುಷ್ಠಾನಕ್ಕಾಗಿ ಜರ್ಮನಿಯ ತಾಂತ್ರಿಕ ಸಲಹಾ ಏಜೆನ್ಸಿಯು ಆರ್ಥಿಕ ಬೆಂಬಲ ನೀಡಿದೆ. 1995ರಲ್ಲಿ ಬಾಳೆಹಣ್ಣಿನ ಸಿಪ್ಪೆ ಆಧಾರಿತ ಇಂಧನ ಅನಿಲ ಸ್ಥಾವರ ಸ್ಥಾಪನೆಗೊಂಡಿದೆ. ಆರ್ಥಿಕವಾಗಿ ಬಾಳೆಹಣ್ಣು ಬೆಳೆಯುವ ಭಾರತದ ಪ್ರದೇಶಗಳಲಿ ನಿರುಪಯುಕ್ತವಾಗುವ ಬಾಳೆಹಣ್ಣಿನ ಸಿಪ್ಪೆಯಿಂದ ಇಂಥಹ ಅನಿಲವನ್ನು ಉತ್ಪಾದಿಸುವ
ಯೋಜನೆ ಬಂದರೆ ಇಂಧನದ ಸಮಸ್ಯೆ  ಒಂದಿಷ್ಟು ತೀರಿತು.

****