ಬೆಳಗ್ಗೆ ಎದ್ದಾಗ ಅವಳು ಮೂದಲು ನೋಡಿದ್ದು-ಸೂರ್ಯ ಮಲಗಿದ್ದ ಜಾಗ. ಸೂರ್ಯ ಇರಲಿಲ್ಲ. ಆದರೆ ಬಗಲು ಚೀಲವಿತ್ತು. ಗಾಬರಿಯಾಗಲಿಲ್ಲ. ಹೂರಗೆ ಬಂದು ನೋಡಿದರೆ, ಸೂರ್ಯ ಕಟ್ಟೆಯ ಮೇಲೆ ಕೂತಿದ್ದಾನೆ. ಜೂತಗೆ ಹುಚ್ಚೀರ ಮತ್ತು ಐದಾರು ಜನರಿದ್ದಾರೆ. ಅವರೊಂದಿ...

ಸೃಷ್ಟಿಯಾ ಕುಶಲತೆಗೆ ದೃಷ್ಟಿಯಾ ಪರಿಣತಿಯೂ ಬುವಿಭಾನು ಖಗಮಿಗದ ಅಖಂಡ ಕುಟೀರ. ಹೊಳೆಯೂರ ರಹದಾರಿ ಹರಿಯುವಳು ಕರಿಕಾಳಿ ಇಕ್ಕೆಲದ ವೃಕ್ಷನೆಲೆ ಮುಂಗಟ್ಟೆ ಪಕ್ಷಿಕಾಶಿ. ಮಲೆನಾಡ ವಿಪಿನದೊಳು ಒಕ್ಕೊರಲ ಗಟ್ಟಿದನಿ ಕಪ್ಪು ಬಿಳಿ ಕೆಂಪು ಬೂದು ಬಗೆಬಗೆಯ ವರ...

ಒಣ ನದಿಯ ದಂಡೆಯಲಿ ನಡೆದಿರ ನೀವು ಹೀಗೆಷ್ಟು ಸಾವಿರ ವರುಷ? ಹಗಲಿಗೆ ದಹಿಸುವ ಸೂರ್ಯನ ಕಾವು ತಿಂಗಳ ಬೆಳಕಿಗೆ ಆಗಿ ಅನಿಮಿಷ ಸಿಕ್ಕಿದರು ಸಿಗದಂಥ ಪರ್ವತ ಶಿಖರ ಹತ್ತಿ ನಿಂತಾದ ಅದೆಷ್ಟು ಹೊತ್ತು? ನೋಡಬೇಕೆಂದುದನು ನೋಡಿದಿರ ನೆನಪಿದೆಯೆ ಏನದರ ಸುತ್ತು...

ಪ್ರೀತಿಯ ಗೆಳೆಯಾ, ಮಳೆ ಬಂದಿಲ್ಲ. ಬಾಂಬೆಯಲ್ಲಿ ಭಾರಿ ಮಳೆ ಅಂತೆ. ಘಟ್ಟದ ಮೇಲೆ ಘಟ್ಟದ ಕೆಳಗೆ ಕರಾವಳಿಯಲ್ಲಿ ಭಾರಿಮಳೆ ಅಂತ ಚಿಕ್ಕಿ ಕಾಗದ ಹಾಕಿದ್ದಾಳೆ. ಕಪ್ಪಾದ ಪಡುಕೋಣೆಯಲ್ಲಿ ಭೋರೆಂದು ಸುರಿಯುವ ಮಳೆಯಲ್ಲಿ ಚಿಕ್ಕಿಯರು ಹಲಸಿನ ಹಣ್ಣು ಸುಲಿಯುವ...

ಕವಿಯೆಂದರೆ ಪದ್ಯಗಳನ್ನು ಬರೆಯುವವನು, ಪದ್ಯಗಳನ್ನು ಬರೆಯದವನು. ಬಂಧನವನ್ನು ಮುರಿದವನು, ತನ್ನನ್ನೆ ಬಂಧಿಸಿಕೊಂಡವನು. ನಂಬುವವನು, ನಂಬಲಾರದವನು. ಸುಳ್ಳು ಹೇಳಿದವನು, ಸುಳ್ಳಿಗೆ ಗುರಿಯಾದವನು. ಜಾರ-ಬಲ್ಲವನು, ಮತ್ತೆ ಮತ್ತೆ ಎದ್ದು ನಿಲ್ಲಬಲ್ಲವನು...

ಎದೆಯ ಗುಡಿಯಲಿ ದೀಪವಾರಿದೆ ಸತ್ಯ ದೀಪವ ಹೊತ್ತಿಸು || ಬೇಕು ಬೇಕಿನ ಜೀಕು ಜೀಕಿನ ಕಾಯ ಕಾಮನೆ ತಿರುಗುಣಿ ನಾನು ನನ್ನದು ನನಗೆ ಎಂಬುವ ಮಮತೆ ಮರುಕದ ಸರಪಣಿ ಇರದೆ ಇರುವಾ ಇದ್ದು ಬೆರೆವಾ ಸಹಜ ಕಲೆಯೆ ಜೀವನಾ ಇತ್ತ ಚೇತನ ಅತ್ತ ಚಿಂತನ ರಾಜಯೋಗದ ಪಾವನಾ...

ಬಯಲ ಹೆಡೆಯಾಗಿ ನೆರಳ ಕೊಡೆಯಾಗಿ ಫಲ ಸುರಿಸಲು ಬಯಸಿ, ಮೊಳಕೆ ಒಡೆಯುತಿರುವಾಗಲೆ ಯಾವುದೊ ನಂಜು ಗಾಳಿ ಬೀಸಿ, ತೊಟ್ಟ ವಸ್ತ್ರವೇ ಜಗುಳಿ ಬಿದ್ದಂತೆ ಎಲೆಯುದುರಿವೆ ಕೆಳಗೆ; ಪ್ರಾಯದ ಗಿಡ ಆಯ ತಪ್ಪಿದಂತಿದೆ ಈ ರೂಪವೆ ಇದಕೆ? ಮೂಳೆಗೈಯಾಗಿ ಮುಗಿಲಿಗೆ ಚಾಚ...

ತಡೆಯದಿರೆ ಮನವ ಮನದಾ ಭಾವನೆಯಾ ಭಾವದೆಳೆಯ ಬೆರೆತ ನೋವು ಕಣ್ಣ ನೀರಂಚಲಿ ಸೆರೆಯಾಗಿದೆ|| ಬೆರೆತಂಥ ಸ್ಪಂದನ ಜೀವನದಿಯಾಗಿ ಸೇರುತಲಿ ದೋಣಿಯ ಕಾಣದೆ ದಡವ ಸೇರದೆ ಇನಿಯಾ ಕಾದಿಹೆ|| ಮನದಾಸೆ ಮಾಗಿ ಋತುರಂಗಿನ ಬಾನಾಡಿಯಾಗಿ ಬಾನಲ್ಲಿ ಹಾರುತ ದೂರ ಕೂಗಿ ಕರ...

‘ಚಿಕವೀರರಾಜೇಂದ್ರ’ ಮಾಸ್ತಿಯವರ ಎರಡನೆಯ ಮತ್ತು ಕೊನೆಯ ಚಾರಿತ್ರಿಕ ಕಾದಂಬರಿ. ‘ಚಿಕವೀರರಾಜೇಂದ್ರ’ ಕೆಲವು ಕಾರಣಗಳಿಂದ ವಿಶಿಷ್ಟವೂ, ಬಹುಚರ್ಚಿತವೂ ಆಗಿದೆ. ಜ್ಞಾನಪೀಠ ಪ್ರಶಸ್ತಿ ಬಂದ ಕಾರಣಕ್ಕಾಗಿಯೆ ಈ ಕಾದಂಬರಿಯ ಪರಿಶೀಲನೆ ಅರ್ಥಪೂರ್ಣವೆನಿಸುವು...

1...7071727374...110

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...