ಶಬರಿ – ೫

ಶಬರಿ – ೫

ಬೆಳಗ್ಗೆ ಎದ್ದಾಗ ಅವಳು ಮೂದಲು ನೋಡಿದ್ದು-ಸೂರ್ಯ ಮಲಗಿದ್ದ ಜಾಗ. ಸೂರ್ಯ ಇರಲಿಲ್ಲ. ಆದರೆ ಬಗಲು ಚೀಲವಿತ್ತು. ಗಾಬರಿಯಾಗಲಿಲ್ಲ. ಹೂರಗೆ ಬಂದು ನೋಡಿದರೆ, ಸೂರ್ಯ ಕಟ್ಟೆಯ ಮೇಲೆ ಕೂತಿದ್ದಾನೆ. ಜೂತಗೆ ಹುಚ್ಚೀರ ಮತ್ತು ಐದಾರು ಜನರಿದ್ದಾರೆ. ಅವರೊಂದಿಗೆ ನಗು ನಗುತ್ತಾ ಮಾತನಾಡುತ್ತಿದ್ದಾನೆ.

ಈ ಕಡೆ ಒಬ್ಬ ಚಿಕ್ಕ ಹುಡುಗ ಕಸದ ತಟ್ಟಿಯನ್ನು ಎತ್ತಲು ಕಷ್ಟಪಡುತ್ತಿರುವುದನ್ನು ನೋಡಿದ ಸೂರ್ಯ ತಾನೇ ಎದ್ದು ಹೋಗಿ ಹೊರೆಸುತ್ತಾನೆ. ಅಲ್ಲಿದ್ದ ಜನರಿಗೆ ಆಶ್ಚರ್ಯ. ಆಗ ಸೂರ್ಯ ಹೇಳುತ್ತಾನೆ- “ದೂಡ್ಡೋರು- ಚಿಕ್ಕೋರು ಅಂತ ಭಾವಿಸೋದ್ಯಾಕ್ರಪ್ಪ. ನೀವ್ ಚಿಕ್ಕೋರೂ ಅಲ್ಲ, ನಾನ್ ದೂಡ್ಡೋನೂ ಅಲ್ಲ. ನನ್‌ ಕಾಳಜಿ ಏನ್‌ ಗೊತ್ತ? ಓದೋ ವಯಸಿನ್ ಹುಡುಗ ಕಸ ಬಾಚ್ಕೊಂಡು ದನ ಕಾಯ್ಕೊಂಡು ಬಾಳ್ ಮಾಡಂಗ್‌ ಆಯ್ತಲ್ಲ. ಅದು ನನ್‌ ಚಿಂತೆ?

ಆಗ ಒಬ್ಬಾತ ಹೇಳಿದ- “ಒಡೇರ ಕೊಡ್ಸವ್ರೆ ದನಾನ. ಅವ್ರ್‌ ಒಲ್ದಾಗ್‌ ದುಡೀಬೇಕು, ತಿನ್‌ಬೇಕು.

ಅಷ್ಟರಲ್ಲಿ ಇನ್ನೂಬ್ಬ “ಒಂದು ಬೀಡಿ ಸೇದಂಗಾಯ್ತದೆ. ನಿಮ್‌ ಎದ್ರಿಗೇ ಒಂದ್‌ ದಮ್‌ ಒಡೀಲೇನಣ್ಣ” ಎಂದು ಕೇಳಿದ.

“ಇವ್ನ್ ಅಣೇಬರಾನೇ ಈಟು ನೋಡ್ರಿ ಮತ್ತೆ. ದಿನಕ್‌ ಒಂದ್‌ಕಟ್ ಬೀಡಿ ಸೇದ್ಲೇಬೇಕು. ಯಾರೆದ್ರಿಗಿದ್ರೂ ಚಟಾ ತಡ್ಯಾಕಿಲ್ಲ” ಎಂದ ಇನ್ನೊಬ್ಬ.

“ಊರ ಒಡೆಯರ ಎದ್ರುಗೂ ಚಟ ತಡ್ಯಾಕಿಲ್ವ?” ಸೂರ್ಯ ನಗುತ್ತ ಕೇಳಿದ.

“ಎಲ್ಲಾನ ಉಂಟಾ? ಅವ್ರ್ ನೆಪ್ತಿ ಬಂದ್ರೆನೆ ಎದೆ ಧಸಕ್ ಅಂಬ್ತೈತೆ.”

“ಮುಂದೊಂದ್‌ ದಿನ ನೀನು ಅವ್ರ್‌ ಎದ್ರಿಗೆ ಎದಿ ಸೆಟ್ಕಂಡ್‌ ನಿಲ್ತೀಯ ಅಂದ್ಕಂಡು ನಿನ್‌ ಬೀಡೀಗೆ ನಾನೇ ಬಂಕಿ ಕಡ್ಡಿ ಗೀರ್ತೀನಿ. ಎಲ್ಲ ಕೂಡು ಕಡ್ಡೀನ” ಎಂದು ಸೂರ್ಯ ಕೇಳಿದ.

ಆಗ ಅಲ್ಲಿದ್ದಾತನೊಬ್ಬ “ಇವ್ನ್‌ತಾವ ಬೆಂಕಿಪಟ್ಟಣ ಎಲ್ಲಿದ್ದಾತು” ಎಂದು ತಮಾಷೆ ಮಾಡಿ “ಲೇ ಅಮ್ಮಣ್ಣಿ, ಒಂದ್‌ ಕೊಳ್ಳಿ ತಗಂಡ್‌ ಬಾರವ್ವ” ಎಂದು ಕೂಗಿದ. ಗುಡಿಸಲೊಳಗಿಂದ ಒಬ್ಬ ಹುಡುಗಿ ಕೊಳ್ಳಿ ತಂದಳು. ಉರಿಯುವ ಒಲೆಯಿಂದ ತಂದ ಕೊಳ್ಳಿ. ಅದನ್ನು ತೆಗೆದುಕೊಂಡ ಸೂರ್ಯ, ಬೀಡಿಯ ತುದಿಗೆ ಅದನ್ನು ಇಡುತ್ತ ಹೇಳಿದ- “ಬಳಪ ಹಿಡೀಬೇಕಾಗಿರೊ ಈ ಹುಡುಗಿ ಕೈಯ್ನಾಗೆ ಬೀಡಿ ಹಚ್ಚಾಕ ಅಂತ ಕೊಳ್ಳಿ ತರುಸ್ತೀರಿ. ಪನ್ನು ಹಿಡೀಬೇಕಾಗಿರೂ ನಿಮ್ಮ ಕೈಯ್ನಾಗೆ ಬೀಡಿ ಹಿಡೀತೀರಿ. ಹ್ಞೂಂ…. ಸೇದಿ….. ಸೇದಿ”.

ತಕ್ಷಣ ಬೀಡಿಯನ್ನು ಬಾಯಿಯಲ್ಲಿಟ್ಟುಕೂಂಡಿದ್ದಾತ-ಸಣ್ಣೀರ- ಸಂಭಿತನಾಗಿ ನೋಡಿದ. ಬಾಯಿಂದ ಬೀಡಿ ತೆಗೆದ.

“ನಿಮ್ಮೆದ್ರಿಗಿನ್‌ ಸೇದಾಕಾಗಕಿಲ್ಲ ಬಿಡಣ್ಣ. ಆಮ್ಕಾಲ್ಯಾವಾಗಾನ ನಾನ್‌ ದಮ್ ಒಡ್ಕಂತೀನಿ” ಎಂದ.

“ಓ ಇವತ್‌ ಯಾವ್‌ ದಿಕ್ಕನಾಗುಟ್ಟವ್ನಪ್ಪ ಸೂರ್ಯ?” ಎಂದು ಒಬ್ಬಾತ ಗೇಲಿ ಮಾಡಿದ.

ಎಲ್ಲವನ್ನೂ ನೋಡುತ್ತ ನಿಂತಿದ್ದ ಶಬರಿ- “ನಿಮ್ಮದ್ರಿಗೇ ಉಟ್ಟಿಲ್ವ” ಎಂದಳು. ಕೂತಿದ್ದವರು ತಬ್ಬಿಬ್ಬಾಗಿ ನೋಡಿದರು. ಮತ್ತೆ ಶಬರಿ ಹೇಳಿದಳು- “ಯೇ ನಿಮೆದ್ರಿಗೇ ಸೂರ್ಯವಪ್ಪ ಕುಂತಿಲ್ವ?”

ಆಗ ಅವರಿಗೆಲ್ಲ ಅರಿವಾಗಿ “ಓ ಸರ್‌ಸರಿ” ಎಂದು ಸಂಭ್ರಮಿಸಿದರು.

“ಇನ್‌ಮ್ಯಾಕೆ ಸೂರ್ಯ ನಮ್‌ ಅಟ್ಟೀನಾಗೇ ಉಟ್ಟಾದು?”- ಶಬರಿ ಸಹಜವಾಗಿ ಹೇಳಿದರು

ಮುಖದಲ್ಲಿ ಮಿಂಚು!
ಬೆಚ್ಚನಯ ಬೆಳಕು.
ಎಲ್ಲರೂ ಸೂರ್ಯನ ಕಡೆ ನೋಡಿದರು.
ಸೂರ್ಯ ಮುಜುಗರದಿಂದ ಮೇಲೆದ್ದ.
ಶಬರಿ ಒಳಹೋದಳು.
* * * *

ರಾತ್ರಿ ಗುಡಿಸಲಿಗೆ ಬರುವಾಗ ತಿಮ್ಮರಾಯಿ ಕುಡಿದೇ ಬಂದಿದ್ದ.

“ಏನೂ ತಿಳ್ಕಾಬ್ಯಾಡ ಸೂರ್ಯಪ್ಪ, ಪೂಜಾರಪ್ಪ ಸಿಕ್ದ. ಒಸಿ ಆಕ್ಕಳಜ್ಜ ಅಂದ. ಪೂಜಾರಪ್ಪ ಯೇಳಿದ್‌ ಕೇಳ್ದಿದ್ರ ದ್ಯಾವ್ರಿಗ್ ಬ್ಯಾಸ್ರ ಆಗ್ತೈತೆ ಅಲ್ವ? ಆಕ್ಕಂಡ್‌ ಬಂದ್ ಬಿಟ್ಟೆ” ಎಂದು ಸಮಜಾಯಿಷಿ ನೀಡಿದ.

“ಇರ್‍ಲಿ ಬಿಡಜ್ಜ, ಆದ್ರೆ ಆರೋಗ್ಯ ಕೆಡಿಸ್ಕಳಂಗ್‌ ಕುಡೀಬಾರ್‍ದು. ನಿಂಗೂ ವಯಸ್ಸಾಯ್ತು ನೋಡು.”

“ವಯಸ್ನ ನಾವ್‌ ಇಡಕಂಡ್ರೆ ನಿಂತ್ಕಂಬ್ತೈತಾ? ಅದ್ರ್‌ ಪಾಡಿಗ್‌ ಅದು ಅರೀತಾನೇ ಇರ್ತೈತೆ ನದಿ ತರಾ.” ಎಂದು ನಿರಾಳವಾಗಿ ನುಡಿದ ತಿಮ್ಮರಾಯಿ. “ಅದ್ಸರಿ ಕಣಪ್ಪ, ನೀನು ಪೂಜಾರಪ್ಪಂತಾವೇನೂ ಮಾತಾಡಿಲ್ವಂತೆ” ಎಂದು ಕೇಳಿದ.

“ನಿಂಗ್‌ ಯಾರೇಳಿದ್ರಜ್ಜ?”

ಗಡಂಗಿಂತಾವ್‌ ಸಿಕ್ಕಿದ್ನಲ್ಲ; ಅವಾಗ ಅವ್ನೆ ಕೇಳ್ದ-ಎಲ್ಲಪ್ಪ ವೊಸಾಮನ್ಸ ಅಂದ. ಅವಾಗೊತ್ತಾತು ನೀನ್‌ ಅವ್ನಿಗೆ ಸಿಕ್ಕಿಲ ಅಂಬ್ತ.”

“ನೀನೇ ಹೇಳಂಗೆ ಯಾವುಕ್ಕೂ ಆತುರ ಮಾಡ್‌ಬಾರ್‍ದು ಅಲ್ವಾ? ಅವ್ನ್ ಹತ್ರ ಮಾತಾಡೋಕೆ ಮುಂಚೆ ನನ್ ಕೆಲ್ಸ ಬೇರೆ ಇದಿ.”

“ಅದೇನ್‌ ಕೆಲ್ಸಾನೊ ಏನ್ ಕತ್ಯೊ. ಎಲ್ಲಾ ಒಳ್ಳೇದಾದ್ರೆ ಆತು. ಆಟೇಯ” ಅಲ್ಲೀವರೆಗೆ ಸುಮ್ಮನಿದ್ದ ಶಬರಿ- “ದಿನಾ ಇಂಗ್‌ ಕುಡುದ್‌ಬಾ ಒಳ್ಳೇದಾಗ್ತೈತೆ” ಎಂದು ಬೀಸರದಿಂದ ಹೇಳಿದಳು.

“ನಾನ್ ಕುಡೀದೆ ಇದ್ರೆ ಒಳ್ಳೇದಾಗ್‌ ಬಿಡ್ತೈತಾ, ಯೇಳೆ ವುಚ್ಚವ್ವ? ನಿಂಗೆ ಅನ್ಬವ ಕಡ್ಮೆ, ಸುಮ್ಕೆ ಇರು” ಎಂದು ತಿಮ್ಮರಾಯಿ ಗದರಿದ.

ಸೂರ್ಯ ಶಬರಿಗೆ ಸನ್ನೆ ಮಾಡಿದ. ಆಕೆ ಸುಮ್ಮನಾದಳು. ಆದರೆ ಅಲ್ಲಿ ನಿಲ್ಲದೆ ಹೊರಗೆ ಬಂದಳು. ಸೂರ್ಯ ಹಿಂದೆಯೇ ಬಂದು ಹೇಳಿದ.

“ಕಬ್ಬಿಣ ಕಾದಾಗ ಬಡೀಬೇಕು ಶಬರಿ. ಬೇಜಾರ್‌ ಮಾಡ್ಕೊಬೇಡ.”

“ಇಲ್ಲ” ಎಂದ ಶಬರಿ, ಗೌರಿಯ ಬಳಿ ಹೋಗಿ ಬರುವುದಾಗಿ ಹೇಳಿ ಹೊರಟಳು.

ಇಡೀ ದಿನ ಗೌರಿಯ ಜೊತೆ ಮಾತನಾಡಲು ಆಗಿರಲಿಲ್ಲ. ಸೂರ್ಯ ಬಂದ ವಿಷಯದ ವಿವರಗಳನ್ನು ತಾನಾಗಿ ತಿಳಿಸಿರಲಿಲ್ಲ. ಇದರಿಂದ ಗಾಉರಿಗೆ ಬೇಸರವಾಗಿರುತ್ತದಯೆಂದು ಗೊತ್ತು. ಪೂಜಾರಪ್ಪ ಗಡಂಗಿನ ಬಳಿಯೇ ಇರುವುದು. ತಿಮ್ಮರಾಯಿಯಿಂದ ಗ್ಯಾರಂಟಿಯಾದ ಮೇಲೆ, ಗೌರಿ ಒಬ್ಬಳೇ ಇರುವುದರಿಂದ ಮಾತಾಡಲು ತಕ್ಕ ಸಮಯವೆಂದು ಭಾವಿಸಿ ಶಬರಿ ಬಂದಳು.

ನಿರೀಕ್ಷಿಸಿದಂತ- “ಏನಮ್ಮ ಇವಾಗ ನಮ್ಮಂತಾರೆಲ್ಲ ಕಣ್ಣಿಗ್ ಬೀಳಲ್ವ? ಪ್ಯಾಟೆ ಜನ ಬಂದ್‌ಮ್ಯಾಗೆ ನಮ್ಮನ್‌ ಮಾತಾಡ್ಸಾಕೇನ್ ತೀಟೇನ ನಿಂಗೆ?”- ಎಂದು ಖಾರವಾಗಿ ಅಂದಳು- ಗೌರಿ.

ಶಬರಿಗೆ ತಡಯಲಾಗಲಿಲ್ಲ. ಕಣ್ಣಲ್ಲಿ ನೀರು ತುಂಬಿತು.

ಆಗ ಗೌರಿಯೆ “ನಗ್ಸಾರಕ್ ಅಂಗಂದೆ ಸುಮ್ಕಿರು” ಎಂದು ಸಮಾಧಾನ ಮಾಡಿದಳು. ಅನಂತರ ಇಬ್ಬರೂ ಕೂತು ಮಾತಾಡಿದರು. ಶಬರಿಯು ಏನನ್ನೂ ಮುಚ್ಚಿಡದೆ ಸೂರ್ಯ ಬಂದಾಗಿನಿಂದ ನಡೆದದ್ದನ್ನು ವಿವರವಾಗಿ ಹೇಳಿದಳು. ಗೌರಿ “ನಾವೆಲ್ಲ ಅವ್ರ್‌ ತರಾನೀ ಪುಸ್ಕ ಓದಂಗಾದ್ರೆ ಏಟ್ ಚಂದಾಗಿರ್‍ತೈತೆ ಅಲ್ವ” ಎಂದಳು. ಶಬರಿ “ಹ್ಞೂ ಮತ್ತೆ” ಎಂದು ದನಿಗೂಡಿಸಿದಳು.

ಸೂರ್ಯ ಗುಡಿಸಲ ಹೂರಗೇ ಇದ್ದ. ಶಬರಿ, ಗೌರಿಯನ್ನು ಕರೆತಂದು ಪರಿಚಯಿಸಿದಳು. “ನಿಮ್ ತಂದೆ ಹತ್ರ ಮಾತಾಡ್ಬೇಕು. ಸಮಯ ಕಾಯ್ತಾ ಇದ್ದೀನಿ” ಎಂದ.

ಆದರೆ ಸೂರ್ಯ ಬೇಕಾಗಿಯೇ ರಾತ್ರಿ ಶಾಲೆಯ ವಿಷಯವನ್ನು ಪೂಜಾರಪ್ಪನ ಬಳಿ ಪ್ರಸ್ತಾಪಿಸಲಿಲ್ಲ. ಪೂಜಾರಪ್ಪನ ಜೊತೆ ಅದು ಇದೂ ಲೋಕಾಭಿರಾಮವಾಗಿ ಮಾತನಾಡುತ್ತಿದ್ದ. ವಿದ್ಯೆ ಕಲಿಸುವ ಬಗ್ಗೆ, ಬುಡಕಟ್ಟು ಜನರ ಒಳಿತಿನ ಬಗ್ಗೆ ಆತನ ಬಳಿ ಪ್ರಸ್ತಾಪ ಮಾಡಲಿಲ್ಲ. ಶಬರಿ, ತಿಮ್ಮರಾಯಿ ಕೇಳಿದಾಗ “ಕೇಳ್ತೀನಿ, ಕೇಳ್ತೀನಿ” ಎಂದು ಕಾಲ ತಳ್ಳುತ್ತಿದ್ದ. ಹೆಚ್ಚು ಒತ್ತಾಯ ಮಾಡಿದರೆ “ಶಬರಿ ಥರಾ ಕಾಯ್ತಿದ್ದೀನಜ್ಜ” ಎಂದು ಬಾಯಿ ಮುಚ್ಚಿಸುತ್ತಿದ್ದ.

ಮೊದಲ ದಿನವೇ ಅಷ್ಟೆಲ್ಲ ಹೇಳಿದಾತ ಇಷ್ಟು ದಿನ ಸುಮ್ಮನೆ ಯಾಕಿದ್ದಾನೆ ಎಂಬ ಅನುಮಾನ ಬರಹತ್ತಿತು- ತಿಮ್ಮರಾಯಿಗೆ. ಹಾಗಾದರೆ ಈತ ಬಂದ ಉದ್ದೇಶ ಏನು?

ಸೂರ್ಯ, ಹುಚ್ಚೀರನ ಜೊತೆ ಹೆಚ್ಚು ಸುತ್ತುತ್ತಿದ್ದ. ಹೂಲದಲ್ಲಿ ಕೆಲಸ ಮಾಡುವವರನ್ನು ಮಾತಾಡಿಸುತ್ತಿದ್ದ. ಸಣ್ಣೀರ ಹೂಲದಲ್ಲ ನೇಗಿಲು ಹೊಡೆಯುತ್ತಿದ್ದಾಗ “ಇಲ್‌ ಕೊಡು ನಾನೂ ಹೂಡೀತೀನಿ” ಎಂದ. ಆತ “ಎಲ್ಲಾನ ಉಂಟೇನಣ್ಣ” ಎಂದು ಹಿಂಜರಿದರೂ ಕೇಳದೆ ಒತ್ತಾಯದಿಂದ ನೇಗಿಲ ಮೇಣಿ ಹಿಡಿದು ನೂರಾರು ಸಾಲು ಹೊಡೆದ. ಸಣ್ಣೀರ, ಹುಚ್ಚೀರನ ಜೊತೆ ಸಂಭ್ರಮಿಸಿದ.

ಸಾದಿ ಆಯುತ್ತಿದ್ದ ಬುಡಕಟ್ಟಿನ ಹೆಂಗಸರ ಹತ್ತಿರ ಬಂದು “ನಾನೂ ಕಡ್ಡಿ ಆಯ್ಕೊಡ್ತೀನಿ” ಎಂದು ಸಹಾಯ ಮಾಡಿದ. ಒಣಗಿದ ಕತ್ತಾಳೆ ಮಟ್ಟೆಗಳನ್ನು ಕಿತ್ತುಕೊಟ್ಟ. ಹೀಗೆ ಅವರೊಳಗೊಬ್ಬನಾಗುತ್ತ ಬಂದ.

ಕಪಿಲೆ ಹೂಡಯುತ್ತಿದ್ದವರ ಬಳಿ ಹೋದ. ಹೂಲದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಬುಡಕಟ್ಟಿನ ಜನರು ಸೂರ್ಯನ ಬಗ್ಗೆ ಒಡಯರ ಆಳುಗಳಿಗೆ ಹೇಳಿದರು. ಕಪಿಲೆ ಹೂಡಯಿತ್ತಿದ್ದ ಈ ಆಳುಗಳು ಸೂರ್ಯನ ಅಪೇಕ್ಷೆ ಮೇರೆಗೆ ಈತನಿಗೆ ಸ್ವಲ್ಪ ಹೊತ್ತು ಬಿಟ್ಟುಕೊಟ್ಟರು. ಈತ ಕಪಿಲೆ ಹೂಡೆದದ್ದು ನೋಡಿ ಅಚ್ಚರಿಗೊಂಡರು.

ಹೀಗೆ ದುಡಿಮೆಗಾರರ ಜೊತೆ ಓಡಾಡ್ತ ಕಾಲ ತಳ್ಳಿದ ಸೂರ್ಯ ಆಗಾಗ್ಗೆ ವಿದ್ಯೆಬುದ್ಧಿಯ ಬಗ್ಗೆ ಪ್ರಸ್ತಾಪಿಸುತ್ತಿದ್ದ. ಒಮ್ಮೆ ಗಂಡಸರು ಮತ್ತು ಹಂಗಸರು ತೋಪಿನಲ್ಲಿ ಕೂತು ಹಿಟ್ಟು ತಿನ್ನುತ್ತಿದ್ದಾಗ ತಾನೂ ಸೇರಿಕೂಂಡ- “ಹಿಟ್ಟು ಕೊಡಿ” ಎಂದ. “ಇದು ತಂಗಳಿಟ್ಟು ಕಣಣ್ಣ” ಎಂದು ಹೆಂಗಸರು ಹಿಂಜರಿದರೂ ಒತ್ತಾಯದಿಂದ ಈಸಿಕೊಂಡ. ಎಲ್ಲರಿಗೂ-ಸೂರ್ಯ ಒಂದು ವಿಸ್ಮಯವಾಗಿದ್ದ.

ತೋಪಿನಲ್ಲಿ ಹಿಟ್ಟು ತಿನ್ನುತ್ತ ವಿದ್ಯೆಯ ಮಹತ್ವ ಹೇಳಿದ. ತಾನು, ತನ್ನ ಗೆಳೆಯರು ಸೇರಿ ವಿದ್ಯೆ ಕಲಿಸುವುದಾಗಿ ವಿವರಿಸಿದ. “ನಾವೇ ಸೇರಿ ಒಂದು ಜಾಗದಲ್ಲಿ ಶಾಲೆಗೇಂತ ಗುಡಿಸ್ಲು ಕಟ್ಟೋಣ” ಎಂದು ಹುರಿದುಂಬಿಸಿದ. “ಪೂಜಾರಪ್ಪನ್‌ ಕೇಳ್‌ಬೇಕಲ್ಲ” ಎಂದು ಸಣ್ಣೀರನೂಂದಿಗೆ ಎಲ್ಲರೂ ಹೇಳಿದಾಗ “ಅದನ್ನ ನಾನ್‌ ಕೇಳೋದಲ್ಲ. ನಿಮಿಗ್‌ ನಿಜವಾಗೂ ಅನ್ನಿಸಿದ್ರೆ ನೀವೇ ಕೇಳ್ಬೇಕು. ಆಗ ಇಲ್ಲ ಅನ್ನೋಕಾಗಲ್ಲ” ಎಂದು ಸೂರ್ಯ ಸಷ್ಟಪಡಿಸಿದಾಗ ಸ್ವಲ್ಪ ಕಾಲ ಮೌನ ಆವರಿಸಿತು. ಆಗ ಹುಚ್ಚೀರ “ಯಾಕೆ ಕೇಳಬಾರದು, ನಾನೇ ಕೇಳ್ತೀನಿ?” ಎಂದು ಆಂಗಿಕ ಸಂಜ್ಞೆಗಳಿಂದ ತಿಳಿಸಿದ. ಸಣ್ಣೀರ ಉತ್ತೇಜಿತನಾದ. “ನಾವೇನು ಕುಡ್ಯಾಕೆ ಗಡಂಗ್‌ ಬೇಕು ಅಂಬ್ತ ಕೇಳ್ತೀವ? ಅಕ್ಷರ ಕಲ್ಯಾಕೆ ಇಂದೆ ಮುಂದೆ ಯಾಕ್‌ ನೋಡ್‌ಬೇಕು? ಇವತ್ತು ಕೇಳೇ ಬಿಡಾವ” ಎಂದು ಘೋಷಿಸಿದಾಗ ಎಲ್ಲರೂ “ಅಂಗೇ ಆಗ್ಲಿ” ಎಂದರು.

ಕೆಲವರಂತೂ ಕೂತಲ್ಲೇ ಪುಸ್ತಕ ಪೆನ್ನು ಹಿಡಿದ ಚಿತ್ರವನ್ನು ಕಲ್ಪಿಸಿಕೂಂಡು ಸಂಭ್ರಮಿಸಿದರು.

ತೋಪಿನಲ್ಲಿ ಹೂಸ ಚೈತನ್ಯ ಸಂಚರಿಸಿದ ಅನುಭವ. ಅಲ್ಲಿ ಕೂತು ಹಿಟ್ಟು ತಿನ್ನುತ್ತಿದ್ದವರಿಗೆ ಹೊಸ ಗಾಳಿಯತಂಪು ಸೋಂಕಿದ ಪುಳಕ. ಹಿಟ್ಟು ತಿಂದು ಎದ್ದರು. ಹೋಗುವಾಗ ಒಬ್ಬೊಬ್ಬರೂ ಒಂದೊಂದು ಮರದ ಬಳಿಗೆ ಹೋಗಿ ಅಪ್ಪಿಕೂಂಡರು; ಕೈಯಿಂದ ಮುಟ್ಟಿ ಕಣ್ಣಿಗೆ ಒತ್ತಿಕೊಂಡರು.

ಬುಡಕಟ್ಟಿನ ಜನರು ತೋಪಿನಲ್ಲಿದ್ದ ಹೂಂಗೆ, ಹುಣಿಸೆ ಮರಗಳನ್ನು ಅಪ್ಪಿಕೊಳ್ಳುವುದು, ಕಣ್ಣಿಗೆ ಒತ್ತಿಕೊಳ್ಳುವುದು ಸೂರ್ಯನಿಗೆ ಕುತೂಹಲಕರವಾಗಿ ಕಾಣಿಸಿತು. ಸಣ್ಣೀರನಲ್ಲಿ ವಿಚಾರಿಸಿದ.

“ಯಾಕ್ ಎಲ್ರೂ ಹೀಗ್ ಮಾಡ್ತಿದ್ದೀರಿ?”

“ಅದಂಗೇ ಸೂರ್ಯಪ್ಪ, ನಮ್ಗೆ ಮರಗಳು ಅಂದ್ರೆ ದ್ಯಾವ್ರಿದ್ದಂಗೆ; ಮರ್‍ದಾಗೆ ಏನೋ ಸಕ್ತಿ ಇರ್‍ತೈತೆ ಅಂಬ್ತ ಲಾಗಾಯ್ತಿಂದ ನಂಬ್ಕಂಡ್‌ ಬಂದಿದ್ದೀವಿ. ಅದ್ಕೆ ನಮಿಗ್‌ ಮನ್ಸಾದಾಗೆಲ್ಲ ಅಪ್ಕಂಡು ನಮ್ನೂ ಸಕ್ತಿ ಬರ್‍ಲಿ ಅಂಬ್ತ ಕೇಳ್ಕಂಬ್ತೀವಿ. ಕಣ್ಣಿಗ್‌ ಒತ್ಕಂಡು ಅದನ್ನೇ ಪೂಜೆ ಅದ್ಕಂಬ್ತೀವಿ. ಅಬ್ಬಗಿಬ್ಬ ಮಾಡ್ವಾಗಂತು ಎಲ್ಲಾರೂ ತೋಪಿಗ್‌ ಬಂದು ಒಬ್ಬೊಬ್ರು ಮರ ಅಪ್ಕಂಡು, ಕೈಮುಗೀತೀವಿ.”

“ಓ ಹಾಗಾದ್ರೆ ಇದನ್ನ ಒಂದು ಆಚರಣೆ ಥರಾ ಮಾಡ್ತೀರಿ.”

“ಆವಾಗ್ಗೆ ಹೇಳಿದ್ನಲ್ಲ. ನಂಬ್ಕಂಡ್‌ ಬಂದಿದ್ದೀವಿ; ಮಾಡ್ತೀವಿ. ನನಿಗ್ ಗೊತ್ತಿರಾದ್‌ ಆಟೇಯ.”

ಸಣ್ಣೀರನ ಮಾತುಗಳಿಂದ ಈ ಜನಕ್ಕೂ ತೋಪಿಗೂ ಇರುವ ಸಂಬಂಧ ಸ್ಪಷ್ಟವಾಗಿತ್ತು. ಮರಗಿಡಗಳಲ್ಲಿ ಅವರು ಚೈತನ್ಯವನ್ನು ಕಾಣುತ್ತಿದ್ದಾರೆಂದು ಸೂರ್ಯ ಅರ್ಥಮಾಡಿಕೂಂಡ. ಎಷ್ಟೋ ಹಳ್ಳಿಗಳಲ್ಲಿ ಅಲ್ಲಿನ ಜನರು ಅರಳೀಮರ ಮತ್ತು ಬೇವಿನ ಮರಗಳನ್ನು ಅಕ್ಕಪಕ್ಕದಲ್ಲಿ ಬೆಳಸಿ ಮದುವೆ ಮಾಡುವುದನ್ನು ನೋಡಿದ್ದ. ಸಸ್ಯರಾಸಿಯಲ್ಲಿ ಚೈತನ್ಯದ ಕಾಣ್ಕೆ; ಜನರ ನಂಬಿಕೆ. ಈಗ ತನ್ನಿಂದ ಅವರಿಗೆ ಅಕ್ಷರ ಚೈತನ್ಯದ ತಿಳುವಳಿಕೆ. ಮನುಷ್ಯ, ಮರ, ಅಕ್ಷರ-ಎಲ್ಲವೂ ಚೈತನ್ಯ; ಅನುಭವ ಅನನ್ಯ;- ಸೂರ್ಯನ ಚಿಂತನೆ ತನ್ನಾರಕ್ಕೆ ತಾನು ಬೆಳಯುತ್ತಿತ್ತು.

ಶಾಲೆಗೆಂದು ಗುಡಿಸಲು ಕಟಲು ತೋಪಿನಲ್ಲಿ ತಗೆದುಕೂಂಡ ತೀರ್ಮಾನ ಸಂತೋಷ ತಂದಿತ್ತು; ಮುಂದಿನ ಹೆಜ್ಜೆಗೆ ಚೈತನ್ಯ ನೀಡಿತ್ತು.

ಇಲ್ಲಿ ನಡೆದ ಘಟನೆ ಶಬರಿಗಾಗಲಿ, ತಿಮ್ಮರಾಯಿಗಾಗಲಿ ಗೊತ್ತಿರಲಿಲ್ಲ. ಸೂರ್ಯನಿಗೆ ಅವರಲ್ಲಿ ತಿಳುವಳಿಕೆ ಮೂಡಿಸಬೇಕಾದ ಅಗತ್ಯವಿರಲಿಲ್ಲ. ಅವರಲ್ಲಿ ಅಕ್ಷರ ಕಲಿಕೆ ಬಗ್ಗೆ ಆಸಕ್ತಿ ಬಂದಾಗಿತ್ತು. ಆದ್ದರಿಂದ ಅವರನ್ನು ಹೊರತುಪಡಿಸಿ ಉಳಿದ ಅನೇಕರ ವಿಶ್ವಾಸ ಗಳಿಸುವ ಪ್ರಯತ್ನದಲ್ಲಿ ನಿರತನಾಗಿ ಯಶಸ್ವಿಯೂ ಆಗಿದ್ದ.

ರಾತ್ರಿ, ಪೂಜಾರಪ್ಪ ಕಟ್ಟೆಯ ಮೇಲೆ ಕೂತಾಗ ಸಣ್ಣೀರನಾದಿಯಾಗಿ ಅನೇಕ ಗಂಡಸರು ಬಂದು ನಿಂತರು. ಹೆಂಗಸರು ಕೆಲವರು ಗುಡಸಲುಗಳ ಮುಂದೆ ಕೂತರು. ಶಬರಿ ಇದನ್ನು ಗಮನಿಸಿ ತಾನೂ ಹೊರಬಂದಳು. ಯಾಕೆ ಹೀಗೆ ಕಲೆಯುತ್ತಿದ್ದಾರೆಂದು ಆಕೆಗೆ ಆರಂಭದಲ್ಲಿ ಅರ್ಥವಾಗಲಿಲ್ಲ. ಹೊರ ಬಂದ ಗೌರಿಯನ್ನು ಕರೆದಳು. “ಯಾಕೆ ಯಾವ್ದಾನ ಅಬ್ಬಗಿಬ್ಬ ಬಂದೈತಾ? ಎಲ್ರೂ ನಿಮ್ಮಪನ್ ಸುತ್ತ ಸೇರ್‍ತಾ ಅವ್ರೆ” ಎಂದು ಕೇಳಿದಳು. ಗೊರಿಗೂ ಗೊತ್ತಿರಲಿಲ್ಲ. “ಅಬ್ಬಗಿಬ್ಬ ಬಂದೈತೊ ಇಲ್ಲ ಯಾರ್‍ದಾನ ಮದ್ವೆಗಿದ್ವೆ ವಿಸ್ಯ ಮಾತಾಡಾದೈತೊ ಯಾರಿಗ್ಗೊತ್ತು” ಎಂದ ಗೌರಿ, ಶಬರಿಯ ಜೊತೆಯಲ್ಲೇ ನಿಂತಳು.

ಪೂಜಾರಪ್ಪ, ತನ್ನ ಹತ್ತಿರ ಬಂದು ನಿಂತವರನ್ನು ನೋಡಿದ.

ಕೈಯ್ಯಲ್ಲಿದ್ದ ಬಂಗಿಸೂಪ್ಪಿನ ಕೊಳವೆಯನ್ನು ಬಾಯಿಗಿಟ್ಟುಕೊಂಡು ಸರಿಯಾಗಿ ಒಂದು ದಮ್ಮೆಳೆದ.

ಆಮೇಲೆ “ಏನ್ರೊ ಬಂದಿದ್ದು? ಯಾವ್ದನ ಹಸ ಅದುರಿಗ್‌ ಬಂದೈತ? ಪೂಜೆ ಗೀಜೆ ಮಾಡಿ ಹೋರಿ ಆರುಸ್ಬೇಕಾ ಎಂಗೆ” ಎಂದು ಗತ್ತಿನಿಂದ ಕೇಳಿದ.

“ನಿಂಗೊತ್ತಿಲ್ದೆ ಯಾವ್ ಅಸ ಅದುರಿಗ್ ಬತ್ತೈತೆ ಪೂಜಾರಪ್ಪ” ಎಂದ ಸಣ್ಣೀರ.

“ಅದ್ಸರಿ ಬಿಡು. ಅಂಗಾರ್ ಯಾವ್ದಾನ ಹುಡ್ಗಿ ಹೂಸ್ದಾಗ್ ಹೊರೀಕಾಗವ್ಳೇನು?”- ಪೂಜಾರಪ್ಪ ಮತ್ತೆ ಕೇಳಿದ.

‘ಒಳ್ಳೆ ಪೂಜಾರಪ್ಪನ ಕತೆಯಾತಲ್ಲ. ಬರೀ ಇಂತವೇ ಕೇಳ್ತಾ ಅವ್ನೆ’ ಎಂದು ಅಲ್ಲಿದ್ದವರಿಗೆಲ್ಲ ಅನ್ನಿಸಿದರೂ ಯಾರೂ ಬಾಯಿ ಬಿಡಲಿಲ್ಲ.

ಸಣ್ಣೀರನೇ ಗಂಟಲು ಸರಿಮಾಡಿಕೊಂಡು ಹೇಳತೊಡಗಿದ.

“ನೋಡ್ ಪೂಜಾರಪ್ಪ, ಯಾವ್ ಅಸಾನೂ ಅದುರಿಗ್‌ ಬಂದಿಲ್ಲ. ಯಾವ್ ಉಡ್ಗೀನೂ ಮೈನೆರ್‍ದಿಲ್ಲ. ನಾವೇ ಒಸಿ ಅದಿರಿಗ್‌ ಬಂದಂಗ್‌ ಆಡಾನ ಅಂಬ್ತಿದ್ದೀವಿ….”

ಪೂಜಾರಪ್ಪ ನಡುವೆಯೇ ತಡೆದು “ಅದೇನ್ಲ ಅಂತಾದ್ದಾಗೈತೆ ನಿಮ್ಗೆ ಅದುರಿಗ್ ಬರಾ ಅಂತಾದ್ದು” ಎಂದು ಕೇಳಿದ.

“ನೀನ್ ಅಂಗ್ ಕೇಳಿದ್ದಕ್ಕೆ ಅಂಗಂದೆ ಕಣಪ್ಪೊ. ನಾವೂ ಒಸಿ ಮೈ ಕೊಡವಿಕಳ್ಳಾನ ಅಂಬಾದ್ನ ಅಂಗಂದೆ ಆಟೇಯ. ಇವಾಗ ನಾವೆಲ್ಲ ಅಕ್ಸರ ಕಲ್ಯಾನ ಅಂಬ್ತ ಅಂದ್ಕಂಡಿದ್ದೀವಿ. ನಮ್ಗೂ ಓದು ಬರಾ ಬಂದ್ರೆ ಊರ್‌ನೋರ್‌ತಾವ ಮಾನ ಮರ್‍ವಾದೆ ಬತೈತೆ. ನೀನೇನೊ ಕಲ್ತು ಅವ್ರ್‌ತಾವ ವ್ಯವಾರ ಮಾಡ್ತೀಯ. ನಾವು ಎಲ್ರಂಗಾಗ್ ಬೇಕೊ ಇಲ್ವೊ ಯೇಳು ಮತ್ತೆ. ನಾವೊಂತರಾ ಅವ್ರೊಂತರಾ ಇರಾದ್ನ ದ್ಯಾವ್ರ್ ಮೆಚ್ತಾನ; ನೀನೇ ಯೇಳು. ಅದುಕ್ಕೆ ನಾವು ಒಂದು ರಾತ್ರಿ ಸ್ಯಾಲೆ ಮಾಡ್ಕಂಡು ಓದು ಬರಾ ಕಲ್ಯಾನ ಅಂಬ್ತಿದ್ದೀವಿ. ನಿನ್ನೊಂದ್ ಮಾತ್ ಕೇಳ್ದೆ ಮುಂದುವರೀಬಾರ್‍ದು ಅಂಬ್ತ ಕೇಳ್ತಾ ಇದ್ದೀವಿ.”

-ಸಣ್ಣೀರ ಉರು ಹೊಡೆದಂತೆ ಒಂದೇ ಉಸಿರಿಗೆ ಹೇಳಿದಾಗ ಪೂಜಾರಪ್ಪ ಅಷ್ಟೇ ಅಲ್ಲ, ಉಳಿದವರೂ ದಂಗಾದರು. ಈತ ಹೀಗೆ ಹೇಳುತ್ತಾನೆಂದು ಅವರೂ ನಿರೀಕಿಸಿರಲಿಲ್ಲ.

ಪೂಜಾರಪ್ಪ ಸಾವರಿಸಿಕೂಂಡು ಕೇಳಿದ-

“ಇವಾಗ್ ಇದ್ದೆ ಬುದ್ದಿ ಕಲ್ತು ಏನೋ ಮಾಡ್ತೀರ? ನೀವೇನ್ ದುಪ್ಟಿ ಕಮೀಸನರ್ ಆಗ್ತೀರಾ?”

“ಓದು ಬರಾ ಕಲುತ್ರೆ ನಾವು ನಾಕ್ ಜನ್ರೆದ್ರಿಗೆ ತಲೆ ಎತ್ ನಡೀಬವ್ದು” ಎಂದು ಮೊದಲೇ ಯೋಚಿಸಿದವನಂತೆ ಉತ್ತರಿಸಿದ-ಸಣ್ಣೀರ.

ಅಪ್ಪರಲ್ಲಿ ಮತ್ತೊಬ್ಬ “ನಮ್ ಮಕ್ಕಳು ಅಗಲೆಲ್ಲ ಕೂಲಿ ಮಾಡ್ತಾವೆ. ಅವೂ ಎಲ್ಡಕ್ಸರ ಕಲೀಲಿ ಬಿಡು ಪೂಜಾರಪ್ಪ” ಎಂದು ನಿರ್ಧಾರಕವಾಗಿ ನೋಡಿದ.

ಆಗ ಹೆಂಗಸರ ಗುಂಪಿಂದ ಎರಡು ಮೂರು ದನಿಗಳು ಕೇಳಿಸಿದವು- “ಅಕ್ಸರ ಅದಂಗಿರ್‍ತೈತೊ ನಾವು ಒಸಿ ನೋಡ್ತೀವಪ್ಪ.”

ಪೂಜಾರಪ್ಪನಿಗೆ ಮೊದಲ ಬಾರಿಗೆ ಬುಡಕಟ್ಟಿನ ಒಗ್ಗಟ್ಟು ಎದುರಾಗಿತ್ತು. ಯೋಚಿಸಿದ. ಈಗ ಇವರ ದನಿಯ ಹಿಂದಿನ ದಿಟ್ಟತೆಯನ್ನು ಎದುರು ಹಾಕಿಕೊಳ್ಳಬಾರದು ಎಂದುಕೂಂಡ.

“ಆಯ್ತಪ್ಪ, ಯಾರ್‌ ಕಲುಸ್ತಾರೆ ನಿಮ್ಗೆ. ನಂಗಂತೂ ಗೊತ್ತಿರಾ ಎಲ್ಡಕ್ಸರ ದ್ಯಾವ್ರ್ ಪೂಜೆಲೆ ವೊಲ್ಟೋಗ್ತವೆ” ಎಂದು ಪೂಜಾರಪ್ಪ ಕೇಳಿದಾಗ ಸಣ್ಣೀರ “ನೀನ್ ಹ್ಞೂ ಅಂದ್ರೆ ಕಲ್ಸಾರ್ ಇದ್ದೇ ಇರ್‍ತಾರೆ. ಯಾಕಿವಾಗ ಸೂರ್ಯಪ್ಪ ಅಂಬ್ತ ಬಂದಿಲ್ವ ಆಯಪ್ಪನೇ ಕಲುಸ್ತಾರೆ” ಎಂದು ಹೇಳುವ ವೇಳೆಗೆ ಒಳಗಿಂದ ಬಂದ ಸೂರ್ಯ “ಎಲ್ರೂ ಆಸೆ ಪಡ್ತಿರ್‍ವಾಗ ಇಲ್ಲ ಅನ್ನಬಾರದು ಪೂಜಾರಪ್ಪ. ಜನ್ರೆಲ್ಲ ಒಪ್ಪಿದ್ರೆ ನಾನು ರಾತ್ರಿ ಶಾಲೆ ನಡಿಸ್ಕೊಡ್ತೀನಿ. ಆದ್ರೆ ತೀರ್ಮಾನ ಜನಗಳ್ದೇ ಆಗಿರ್ಬೇಕು” ಎಂದು ಹೇಳಿದ.

ಪೂಜಾರಪ್ಪನಿಗೆ ಸನ್ನಿವೇಶ ಅರ್ಥವಾಯಿತು.

ಎಷ್ಟಾದರೂ ಪೂಜಾರಪ್ಪ ಅಲ್ಲವೆ?

“ನೀವೆಲ್ಲ ತೀರ್ಮಾನಕ್‌ ಬಂದ ಮ್ಯಾಗೆ ನಾನ್‌ ಕೊಚ್ಚನ್‌ ಮಾಡಾದೇನೈತೆ? ಆದ್ರೆ ಊರ ಒಡೇರು ನನ್‌ ಸುಮ್ಕೆ ಬಿಡ್ತಾರ? ಕೊಚ್ಚನ್‌ ಮಾಡ್ತಾರ್ರಪ್ಪ ಕೊಚ್ಚನ್ ಮಾಡ್ತಾರೆ”- ಎಂದ ಪೂಜಾರಪ್ಪ.

“ಅವ್ರಿಗ್ ನೀನೇ ಒಂದ್‌ ಮಾತ್‌ ಯೇಳ್ಬೇಕಪ್ಪ. ನಾವೇನ್‌ ಅವ್ರ್‌ ಆಸ್ತಿ ಬರ್‍ಕೊಡಿ ಅಂಬ್ತ ಕೇಳ್ತೀವ?”- ಸಣ್ಣೀರ ಕೇಳಿದ.

ಪೂಜಾರಪ್ಪನಿಗೆ ಆಶ್ಚರ್ಯವಾಯಿತು. ಎಂಥ ಪ್ರಶ್ನೆ? ಇಂಥ ಪ್ರಶ್ನೇನ ಚಂದ್ರ ಹಾಕ್ತಿದ್ದ. ಈಗ ಅಷ್ಟು ಧೈರ್ಯ ಮಾಡೋರು ಹುಟ್ತಾ ಇದಾರಲ್ಲ! ಒಂದು ಕಣ್ಣಿಟ್ಟಿರಬೇಕು- ಎಂದು ಚಿಂತಿಸಿದ್ದ.

“ನಾನೇನೊ ಯೇಳ್ತೀನ್ರಪ್ಪ; ಆದ್ರೆ ನೋಡ್ರಿ, ನಾವಿವಾಗ್ಲೆ ತಪ್ ಮಾಡಿದ್ದೀವಿ. ಹಟ್ಟೀಗ್ ಹೊಸ ಮನ್ಸ ಬಂದಾಗ ಒಡೇರ್‍ಗೆ ಒಂದ್ ಮಾತು ಯೇಳ್ಬೇಕಿತ್ತು. ಏನೋ ಇಂಗ್‌ ಬಂದ್‌ ಅಂಗ್‌ ವೋಗ್ತಾನ್‌ ಈಯಪ್ಪ ಅಂಬ್ತ ಸುಮ್ಕಿದ್ದೆ. ಇವಾಗೇಳ್ಲೇ ಬೇಕು. ಅದುಕ್ಕೆ ಈ ಸೂರ್ಯಾನೇ ಒಡೇರ್‍ತಾವ್ ಬರ್‍ಬೇಕು.” ಎಂದು ಪೂಜಾರಪ್ಪ ಷರತ್ತು ಹಾಕಿದ.

ಜನರ ಮಧ್ಯೆ ಗುಸು ಗುಸು ಶುರುವಾಯಿತು.

ಇದನ್ನು ಗಮನಿಸಿದ ಸೂರ್ಯ ತಾನೇ ಮುಂದ ಬಂದು ಹೇಳಿದ-

“ನೋಡಿ ಪೂಜಾರಪ್ಪ, ನಂಗೇನ್‌ ನಿಮ್‌ ಒಡಯರ ಹತ್ರ ಬರಬಾರ್‍ದು ಅಂತಿಲ್ಲ. ಆದ್ರೆ ಅಕ್ಸರ ಕಲ್ಸೋದ್ಕು ಅವ್ರ್‌ ಅಪ್ಪಣೆ ಕೇಳೋದು ನನ್ನಂತೋನ್ಗೆ ಕಷ್ಟ ಆಗುತ್ತೆ.”

“ಅದ್ಕೆ ಕಣಪ್ಪ ನೀನ್ ಬರ್‍ಬೇಕು ಅನ್ನಾದು. ನಾಳೆ ಏನಾರ ವೆತ್ತಾಸ ಆದ್ರೆ ಎಲ್ಲಾ ನನ್ ತಲೇಗ್ ಬತ್ತೈತೆ. ಈಗ್ಲೇ ಕಷ್ಟ ಅಂಬಾನು ಆಮ್ಯಾಕ್ ಸುಮ್ಕೆ ಇರ್‍ತೀಯ?”- ಪೂಜಾರಪ್ಪ ದೃಢವಾಗಿ ಹೇಳಿದ.

“ಹಾಗಾದ್ರೆ ಬರ್‍ತೀನಿ. ಆದ್ರೆ ಅವರು ನನಗೆ ಅವ್ಮಾನ ಆಗೋಹಾಗ್ ನಡ್ಕೋಬಾರದು”

“ನೀನೂ ಆಟೇಯ-ಮಾನ-ಅವ್ಮಾನ ಅಂದ್ರೆ ಏನೂಂಬ್ತ ತಿಳ್ಕಂಡು ಅವ್ರ್ ತಾವ ಉಸಾರಾಗ್‌ ನಡ್ಕಬೇಕು. ನಡ ಬಗ್ಸಿದ್ರೆ ಬಡವರು ಬದುಕ್ತಾರೆ ಗೊತ್ತೇನಪ್ಪ”

“ಅದೆಲ್ಲ ಆಮೇಲೆ ಗೊತ್ತಾಗುತ್ತೆ ಈಗ ಮೊದ್ಲು ನೀನು ಊರ ಒಡೇರ್‍ನ ಸಿದ್ಧಮಾಡು. ಆಮೇಲೆ ನಾನ್ ಬರ್‍ತೀನಿ” ಎಂದು ಸೂರ್ಯ ಹೇಳಿದಾಗ ಉಳಿದವರು ಒಪ್ಪಿದರು. ಅಷ್ಟೇ ಅಲ್ಲ- “ನಮ್ಗೆ ಒಳ್ಳೇದ್ ಮಾಡಾಕ್ ಬಂದೋರ್‍ಗೆ ಅವ್ಮಾನ ಆಗ್‍ಬಾರ್‍ದು ಪೂಜಾರಪ್ಪ” ಎಂದು ಕಿವಿಮಾತು ಹೇಳಿದರು. ಪೂಜಾರಪ್ಪನಿಗೆ ಎಲ್ಲಾ ಹೂಸದಾಗಿತ್ತು.

“ನಂಗಾಟೂ ಗೊತ್ತಾಗಲ್ವೇನ್ರೊ” ಎಂದು ಹೇಳಿದ ಅತ ಸೂರ್ಯನ ಕಡೆ ತಿರುಗಿ “ಅಲ್ಲ, ಈಟೆಲ್ಲಾ ಮಾಡ್ತೀಯಲ್ಲ, ಸರ್ಕಾರದೋರು ನಿಂಗೇನಾರ ಕೊಡ್ತಾರ? ಅಂಗೇನಾರ ಇದ್ರೆ ಒಡೇರ್‍ನೂ ನಮ್ಮನ್ನೂ ಒಸಿ ನೋಡ್ಕಳಪ್ಪ” ಎಂದು ಕೇಲಿದ.

“ಇದಕ್ಕೆ ಸರ್ಕಾರದಿಂದ ನಾನೇನು ತಗೊಳ್ಳಲ್ಲ ಪೂಜಾರಪ್ಪ. ಇದು ನನ್ನ ಸಂತೋಷಕ್ ಮಾಡೊ ಕೆಲ್ಸ. ಇಲ್ಲಿಗೆ ನಾನು ಸರ್ಕಾರದ್ ಕೆಲ್ಸ ಮಾಡಾಕ್ ಬಂದಿಲ್ಲ. ಈ ಸಮುದಾಯದ್ ಕೆಲ್ಸಾ ಮಾಡಾಕ್‌ ಬಂದಿದ್ದೀನಿ”- ಸೂರ್ಯ
ನಿಖರವಾಗಿ ಹೇಳಿದ.

“ಏನೋ ನಂಗೆಲ್ಲ ವೊಸಾ ತರಾ ಕಾಣುಸ್ತಾ ಐತಪ್ಪ. ನಿನ್ತರಾನೂ ವುಚ್ರು ಇರ್‍ತಾರೆ ಅಂದಂಗಾತು. ಅಂಗಾರೆ ನೀನ್ ವೊಟ್ಟೆ ಪಾಡಿಗೇನ್‌ ಮಾಡ್ತೀಯ, ಇಲ್ಲದ್ಕಂಡು?”- ಪೂಜಾರಪ್ಪ ಸಹಜವಾಗೇ ಕೇಳಿದ.

“ಯಾಕೆ, ನಾವೆಲ್ಲ ಸತ್ತೋಗಿದ್ದೀವ?”- ಶಬರಿ ಥಟ್ಟನೆ ಹೇಳಿದಳು.

ಪೂಜಾರಪ್ಪ ತಡವರಿಸಿಕೊಳ್ಳುತ್ತಿರುವಂತೆ ಜನರೆಲ್ಲ “ಅವ್ದವ್ದು” ಎಂದರು.

ಒಬ್ಬ ಹೆಂಗಸು- ‘ಒಬ್ಬೊಬ್ರು ಮನ್ಯಾಗೊಂದೂಂದ್ ದಿನ ಉಂಬಾಕಿಕ್ಕಿದ್ರಾತಪ್ಪ. ಆಯಪ್ಪೇನ್ ಬ್ಯಾರೇನ” ಎಂದು ಹೇಳಿದಾಗ ಸೂರ್ಯ ಕ್ಷಣಕಾಲ ಭಾವುಕನಾದ.

ಬಗ್ಗಡವಿಲ್ಲದ ಭಾವಪೂರ.
ಸುಗ್ಗಿ ತುಂಬಿದ ಸರೋವರ.

ಪೂಜಾರಪ್ಪ ಎದ್ದು ನಿಂತ. “ನಾಳೀಕೆ ಒಡೇರ್‌ತಾವ್‌ ಮಾತಾಡ್ತೀನಿ. ಆಮ್ಯಾಕ್‌ ಸೂರ್ಯಪ್ಪನ್‌ ಜತ್ಯಾಗೆ ಐದಾರ್‌ ಜನ ಬರ್ರಿ. ಈಟೆಲ್ಲ ಯಾಕೇಳ್ತೀನಪ್ಪ ಅಂದ್ರೆ, ನಿಮ್ಮನ್‌ ಬಿಟ್ಟು ನಾನಿರಾಕಾಯ್ತದ? ಏನಪ್ಪ, ಸೂರ್ಯಪ್ಪ ಏನಂಬ್ತೀಯ” ಎಂದ.

“ಜನರಿಲ್ದೆ ಯಾರು ಇಲ್ಲ ಬಿಡು ಪೂಜಾರಪ್ಪ” ಎಂದು ಹೇಳಿದ ಸೂರ್ಯ “ರಾತ್ರಿ ಶಾಲೆ ಶುರುವಾಗ್ಲಿ ಆಮೇಲೆ ಅಕ್ಷರಶಕ್ತಿ ಅಷ್ಟೆ‌ಅಲ್ಲ, ಜನರಶಕ್ತಿ ಏನೂ ಅಂತ ಗೊತ್ತಾಗುತ್ತೆ” ಎಂದು ತನ್ನೊಳಗೇ ಹೇಳಿಕೊಂಡ.

ಇಲ್ಲಿ ನಡೆದ ಘಟನೆಯಿಂದ ಸ್ಪತಃ ಶಬರಿಗೆ ವಿಸ್ಮಯವಾಗಿತ್ತು.

ಸೂರ್ಯ ಪೂಜಾರಪ್ಪನ ಬಳಿ ಏನೂ ಮಾತಾಡದೆ ಓಡಾಡುತ್ತಿರುವುದನ್ನು ತಿಮ್ಮರಾಯಿ ಮತ್ತು ಶಬರಿ ಕೂಡಿಯೇ ಗಮನಿಸಿದ್ದರು. ಈತ ಯಾಕೆ ಹೀಗೆ ಓಡಾಡುತ್ತಾನೆಂದು ತಿಮ್ಮರಾಯಿಗೆ ಅನುಮಾನವೂ ಬಂದಿತ್ತು. ಇಂದಿನ ಘಟನೆ ಅನೇಕ ವಿಷಯಗಳನ್ನು ಅನಾವರಣಗೊಳಿಸಿತ್ತು.

“ನಮ್ ಅಟ್ಟಿ ಜನ್ರೆಲ್ಲ ಇಂಗ್‌ ಒಟ್ಗೇ ಕೇಳಿದ್‌ ಕಂಡು ನಂಗಂತೂ ಏಟೊಂದ್‌ ಸಂತೋಷ ಆತು ಗೊತ್ತ?” ಎಂದಳು ಶಬರಿ.

ಸೂರ್ಯ ನಸುನಕ್ಕ.

“ನೀವು ಈ ಜನ್ರ್ ಇಂದೆ ಮುಂದೆ ಯಾಕ್ ಸುತ್ತಾಡ್ತಿದ್ರಿ ಅಂಬ್ತ ಇವತ್ತು ಗೊತ್ತಾತು”- ಮತ್ತೆ ಹೇಳಿದಳು ಶಬರಿ.

“ಹೌದು ಶಬರಿ; ಯಾವ ಜನ್ರು ಜಾಗೃತರಾಗ್ಬೇಕೊ ಅವ್ರಲ್ಲೇ ಆಸಕ್ತಿ ಮೂಡುಸ್ಬೇಕು. ಅವ್ರೇ ಮಾತಾಡೊ ಹಾಗೆ ಮಾಡ್ಬೇಕು. ಹಾಗೆ ಆಗ್ಬೇಕು ಅನ್ನೋದಾದ್ರೆ ಮೊದ್ಲು ಅವ್ರಿಗೆ ನಮ್‌ ಮೇಲೆ ನಂಬಿಕೆ ಬರ್‍ಬೇಕು. ಅದುಕ್ಕಾಗಿ ನಾವು ಅವ್ರಲ್ಲಿ ಅವ್ರೇ ಆಗಿ ಬೆರೀಬೇಕು; ವಿಶ್ವಾಸ ಗಳುಸ್ಬೇಕು. ನಾನ್‌ ಮಾಡಿದ್ದು ಇದೇ ಕೆಲ್ಸ. ಅವರ ಜೊತ ನೇಗಿಲು ಹೂಡ್ದೆ; ಸೌದೆ ತಂದೆ; ಕಳೆ ಕಿತ್ತೆ, ತಂಗಳು ತಿಂದೆ. ಅವ್ರಲ್‌ ಒಬ್ಬ ಆದೆ. ಹಾಗೇ ವಿಚಾರ ತಿಳುಸ್ತಾಬಂದೆ. ಅವರಿಗೇ ಅರ್ಥ ಆಯ್ತು. ಧೈರ್ಯ ಬಂತು. ಪೂಜಾರಪ್ಪನ ಎದುರಿಗೆ ಮಾತು ಬಂತು. ಮುಂದೊಂದು ದಿನ ಒಡೆಯರ ಎದುರಿಗೂ ಮಾತು ಬರುತ್ತೆ”

-ಸೂರ್ಯ ಮೊದಲ ಹಂತದ ಯಶಸಿನಲ್ಲಿ ಆಡಿದ ಮಾತು ಶಬರಿಯ ಮನಸ್ಸನ್ನು ಅಲುಗಾಡಿಸಿತು.

ಬತ್ತಿದ ಕರೆಗೆ ನೀರು ನುಗ್ಗಿ ಬಂದ ಅನುಭವ.
ಕಣ್ಣಲ್ಲಿ ಹೆಮ್ಮೆಯ ಹನಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುಂಗಟ್ಟೆ
Next post ಚಂದ್ರನನ್ನು ಕರೆಯಿರಿ ಭೂಮಿಗೆ

ಸಣ್ಣ ಕತೆ

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

cheap jordans|wholesale air max|wholesale jordans|wholesale jewelry|wholesale jerseys