ವಾಗ್ದೇವಿ – ೫

ವಾಗ್ದೇವಿ – ೫

ಭಾಗೀರಥಿಯು ಮಗಳ ಮೇಲೆ ಸಿಟ್ಟು ತಾಳಿದವಳಂತೆ ತೋರಿಸಿ ಕೊಂಡು, ಮಗಳನ್ನು ಚಿಕ್ಕ ಮನೆಯ ಒಳಗೆ ಕರಕೊಂಡು, ಅಲ್ಲಿ ಶಾನೆ ಹೊತ್ತು ವಾಗ್ದೇವಿಯ ಕೂಡೆ ಸಣ್ಣ ಸ್ವರದಿಂದ ಜಿಜ್ಞಾಸ ಮಾಡುವದರಲ್ಲಿ ಬಿದ್ದಳು. ಆವಳು ಠಕ್ಕು ಮಾಡುತ್ತಾಳೆಂಬ ಗುಟ್ಟು ವೆಂಕಟಪತಿ ಆಚಾರ್ಯಗೆ ತಿಳಿಯದೆ ತನ್ನ ಬುದ್ಧಿವಂತಿಕೆಗೆ ಯತಿಗಳು ಮೆಚ್ಚದಿರರೆಂದು ಅರ್ಧತಾಸಿನ ವರೆಗೂ ಹೊರಗೆ ಕೂತುಕೊಂಡನು. ಕೊನೆಗೆ ಪರ್ವತವು ಗರ್ಭತಾಳಿ ದಂತಾಯಿತು. “ನೀನು ಎಷ್ಟು ಬಡಕೊಂಡರೂ ಇದೊಂದು ವಿಷಯದಲ್ಲಿ ನನ್ನ ಛಲ ಸರ್ವಥಾ ಬಿಡಲಾರೆ” ಎಂದು ಗಟ್ಟಿಯಾಗಿ ವಾಗ್ದೇವಿಯು ಹೇಳು ವುದು ಆಚಾರ್ಯನ ಕಿವಿಗೆ ಬಿತ್ತು. “ಹಾಗೆಯೇ? ಇನ್ನು ನೀನು ನನ್ನ ಮಗಳೆಂದು ಸರ್ವಥಾ ಭಾವಿಸಲಾರೆ. ನೀನೂ ನಿನ್ನ ಗಂಡನೂ ಕ್ಷಣ ತಾಮಸ ಮಾಡದೆ ಬೇರೆ ಹೋಗಬೇಕು. ನಿನಗೆ ನಾನು ಅನ್ನ ಹಾಕಲಾರೆ! ದಿಂಡೆ! ನಡಿ!’ ಎಂದು ದೀರ್ಥಸ್ವರದಿಂದ ಗದರಿಸುವುದೂ ಕೇಳಿಸಿತು.

ಆಚಾರ್ಯನು ಕಣ್ಣೆತ್ತಿ ನೋಡುವಾಗ ಭಾಗೀರಥಿಯು ಮಗಳನ್ನು ದೂಡಿ ಕೊಂಡು ಕರಾಳವದನಳಾಗಿ ಹೊಡೆಯುವದಕ್ಕೆ ಚೀರಿಕೊಂಡು ಮಗಳ ಸಹಿತ ಕೋಣೆಯಿಂದ ಹೊರಗೆ ಬರುವುದೂ ಕಣ್ಣಿಗೆ ಬಿತ್ತು. ಆಹಾ! ಇನ್ನೆಂಥಾ ನಿಷ್ಟಲಂಕ ಮನಸು ಭಾಗೀರಧಿಗದೆ: ಮಗಳೆಂಬ ವಾತ್ಸಲ್ಯವಿಡದೆ ಸಿಟ್ಟಿನ ವಶವಾಗಿ ಹಟಮಾಡುವ ಮಗಳನ್ನು ತತ್ಕಾಲ ಶಿಕ್ಷಿಸುವ ಈ ಪುಣ್ಯ ತಾಯಿಯನ್ನು ಎಷ್ಟು ಹೊಗಳಬಹುದು. ಈಗ ತಾನು ಸುಮ್ಮಗಿದ್ದು ತಾಯಿ ಮಗಳಿಗೆ ವಿವೇಕ ಮಾಡದೆ ಇದ್ದರೆ ಶ್ರೀಪಾದಂಗಳವರ ಸಂಕಲ್ಪಸಿದ್ಧಿಗೆ ವಿಘ್ನ ಬರುವುದೆಂಬ ಭಯದಿಂದ ವೆಂಕಟಪತಿ ಆಚಾರ್ಯನು ಮಗಳಿಗೆ ಹೊಡೆಯುವ. ದಕ್ಕೆ ಸಿದ್ಧಳಾಗಿರುವ ಭಾಗೀರಧಿಯನ್ನು ಕರೆದು “ಸಾಕುಮಾಡು, ಕೈ ಮುಂದರಿಸಬೇಡ; ವಾಗ್ದೇವಿಯ ಹಟವನ್ನು ಪೂರೈಸಲಿಕ್ಕೆ ಅನುಕೂಲ ವಾಗುವ ಹಾಗೆ ಪ್ರಯತ್ನಮಾಡಲೇ ಬೇಕು. ಅವಳ ಮನಸ್ಸಿನಲ್ಲಿ ಅಹಿತ ಹುಟ್ಟುವಹಾಗಿನ ಕರ್ತವ್ಯವನ್ನು ಮಾಡುವದಕ್ಕೆ ಅವಳನ್ನು ಬಲತ್ಯರಿಸು . ವದು ನ್ಯಾಯವಲ್ಲ. ಬೇರೆ ಯಾವದೊಂದು ತರ್ಕವಿಲ್ಲವಷ್ಟೆ. ಇಲ್ಲಿ ನಡೆದ ಪ್ರಸ್ತಾಪವನ್ನು ವಿಸ್ತಾರವಾಗಿ. ಶ್ರೀಪಾದಂಗಳವರಿಗೆ ವಿಜ್ಞಾಪಿಸಿ ಅವರ ಆಜ್ಞೆಯನ್ನು ಕ್ಷಿಪ್ರ ತಿಳಿಸುವೆ” ಎಂದು. ಭಾಗೀರಥಿಗೆ ಹೇಳಿ ಮಠಕ್ಕೆ ಮರಳಿದನು.

ದನವನ್ನು ಹುಡುಕಿ ತರುವುದಕ್ಕೆ ಹೋದ ತಮ್ಮಣ್ಣ ಭಟ್ಟನು ದನ ವನ್ನು ಅಟ್ಟಿಕೊಂಡು ಬಂದು, ಹಟ್ಟಿಯಲ್ಲಿ ಕೂಡಿಸುವಾಗ ಮನೆಯೊಳಗೆ ತನ್ನ ಪತ್ನಿಗೂ ವೆಂಕಟಪತಿ ಅಚಾರ್ಯಗೂ ನಡೆಯುತ್ತಿರುವ ಸಂಭಾಷಣೆ ಯನ್ನು ಕೇಳುತ್ತ, ಹೊರಗೆಯೇ ನಿಂತು ಕೊಂಡನು. ವೆಂಕಟಪತಿ ಆಚಾ . ರ್ಯನು ಹೊರಟು ಹೋದಾಕ್ಷಣ ತಮ್ಮಣ್ಣ ಭಟ್ಟನು ಬಾಗಿಲು ದೂಡಿ ಒಳಗೆ ಬಂದು, “ಇಷ್ಟು ಹೊತ್ತಾಯಿತು. ದನ ಹ್ಯಾಗಾದರೂ ಸಿಕ್ಕಿದಂತಾಯಿತು? ಎಂದು ದಣು ಆರಿಸುವುದಕ್ಕೆ ಗೋಡೆಗೆ ಎರಗಿ ಕೂತುಕೊಂಡನು. ವಾಗ್ದೇವಿಯ ಗಂಡ ಆಬಾಚಾರ್ಯನು ಮನೆಯ ಹಿಂಬದಿ ಜಗಲಿಯಲ್ಲಿ ಬಿದ್ದು ಕೊಂಡು ನಿದ್ರಿಗೈಯುತ್ತಿರುವಾಗ ಭಾಗೀರಧಿಯೂ ವೆಂಕಟಪತಿ ಆಚಾರ್ಯರೂ ಮಾಡುವ ಸಂವಾದವನ್ನು ಕೊಂಚ ಕೊಂಚ ಕೇಳಿ ಇನ್ನು ಮುಂದೆ ಮಠದಲ್ಲಿ ನಮಗೆ ಭೋಜನವಾದರೂ ಪರಿಷ್ಠಾರವಾದೀತಷ್ಟೇ. ವಾಗ್ದೇವಿಯು ಯಾವಲ್ಲಿದ್ದರೂ ತನಗೇನೆಂದು ಸಂತೋಷಚಿತ್ತನಾಗಿ ಸುಮ್ಮಗಿದ್ದನು.

ರಾತ್ರೆ ಫಲಾಹಾರಕ್ಕೆ ಕಡಬು ಕಾಯಿಹಾಲು ಮಾಡಿತ್ತು. ಅದನ್ನು ಮನೆಯವರೆಲ್ಲರೂ ಬೇಕಾದಷ್ಟು ತಕ್ಕೊಂಡು ನಿದ್ರೆಗೈಯುವುದಕ್ಕೆ ಹೋದಾಗ ಭಾಗೀರಥಿಯು ತನ್ನ ಪತಿಯ ಕೂಡೆ ವೆಂಕಟಪತಿ ಆಚಾರ್ಯನು ಬಂದ ಉದ್ದೇಶವನ್ನೂ ತನಗೂ ಆತಗೂ ನಡೆದ ಮಾತುಗಳನ್ನೂ ವಾಗ್ದೇವಿಯೂ ತಾನೂ ಮಾಡಿದ ಯುಕ್ತಿಯ ಅಂದವನ್ನೂ ತಿಳಿಸಿ ನೆಗಾಡಿದಳು. ನಡೆದ ಪ್ರಸ್ತಾಪವು ತನಗೆ ಸ್ನಲ್ಪವಾದರೂ ಅಹಿತವಲ್ಲವೆಂದು ಗಂಡನು ಪ್ರತ್ಯುತ್ತರ ಕೊಟ್ಟನು. ಆದರೆ ಮಠದಲ್ಲಿ ತನಗೆ ಸಣ್ಣ ಕೆಲಸ ಯಾವದಾದರೂ ಕೊಟ್ಟರೆ ಒಡಂಬಡುವವನಲ್ಲ. ತನ್ನ ಗೌರವಕ್ಕೆ ಯೋಗ್ಯವಾದ ಅಧಿಕಾರವಿರುವ ಉದ್ಯೋಗ ಸಿಕ್ಕುವ ಹಾಗೆ ವೆಂಕಟಪತಿ ಆಚಾರ್ಯಗೆ ತಿಳಿಸಬೇಕಾಗಿ ಪತ್ನಿ ಯನ್ನು ಅಪೇಕ್ಷಿಸಿದನು. “ಅದರ ಬಿಸಾತೇನು? ಇನ್ನು ಮಠವೇ ನಮ್ಮ ದಾಗುವದಾಯಿತಲ್ಲ. ವೆಂಕಟಪತಿಯು ಹೆಸರಿಗೆ ಮಾತ್ರ ಪಾರುಪತ್ಯಗಾರ ನಾಗಿರಬೇಕಲ್ಲದೆ ಯಾವದೊಂದು ಆದಾಯ ವೆಚ್ಚವಾದರೂ ತಮ್ಮ ಕೈ ಮಿಕ್ಕಿ ಹೋಗುವದುಂಟೇ?” ಎಂದು ಭಾಗೀರಥಿಯು ಹೇಳೋಣ, ತಮ್ಮಣ್ಣ ಭಟ್ಟನು ಹೆಂಡತಿಯ ಚಾತುರ್ಯಕ್ಕೆ ಮೆಚ್ಚಿ ಶಹಬಾಸ್‌ ಎಂದನು.

ಇನ್ನು ಮುಂದೆ ಊಟಕ್ಕನಕ ಏನೂ ತತ್ವಾರವಿರದು. ಮಠದಲ್ಲಿ ಒಂದು ಉದ್ಯೋಗವು ಪ್ರಾಪ್ತವಾಗುವುದು. ತನ್ನಷ್ಟಕ್ಕೆ ತಾನು ಇದ್ದರೆ ನಾಲ್ಕು ಕಾಸು ಗಂಟಿಗೆ ಬಿದ್ದೀತು. ಮರ್ಯಾದೆಯಿಂದ ಕಾಲಕ್ಷೇಪಕ್ಕೆ ಒಂದು ಮಾರ್ಗವನ್ನು ಜೀವರು ತೋರಿಸಿ ಕೊಟ್ಟಂತಾಯಿತು ಎಂಬ ಹರುಷದಿಂದ ಆಚಾರ್ಯನು ಅರ್ಧರಾತ್ರಿ ಪರಿಯಂತರ ನಿದ್ರೆ ಬಾರದೆ ಭವಿಷ್ಯತ್‌ ಕಾಲ ದಲ್ಲಿ ತನ್ನ ಪತ್ನಿಯು ಯತಿಗಳ ಪ್ರಸಾದದಿಂದ ಏನೇನು ಮಹತ್ಕಾರ್ಯ ಗಳನ್ನು ಮಾಡುವಳೋ ನೋಡಲಿಕ್ಕಿದ್ದೀತೆಂದು ಹಿಗ್ಗಿದನು. ವಾಗ್ದೇವಿಯು ತಿಪ್ಪಾಶಾಸ್ತ್ರಿಯ ಪ್ರವಾದನೆಯು ಈಡೇರುವ ಸಮಯವು ಒದಗಿತೆಂಬ ಉಲ್ಲಾಸ ದಿಂದ ಇಡೀರಾತ್ರೆ ಮನೋಹರವಾದ ಕನಸುಗಳನ್ನು ಕಂಡಳು. ಐಶ್ವರ್ಯದ ರಾಶಿಯೇ ತಮ್ಮ ಕೈವಶವಾಗುವದೆಂಬ ಕೋರಿಕೆಯಿಂದ ಭಾಗೀರಥಿಯೂ ತಮ್ಮಣ್ಣ ಭಟ್ಟನೂ ಇಡೀರಾತ್ರೆ ಅನೇಕ ವಿಷಯಗಳಲ್ಲಿ ಶುಷ್ಕವಾದ ಮಾಡುತ್ತಾ ನಿದ್ರೆಯ ಗೊಡವೆಯಿಲ್ಲದೆ ಸಮಯ ಕಳೆದರು.

ಮರುದಿವಸ ದ್ವಾದಶಿಯಷ್ಟೆ. ಸಕಾಲದಲ್ಲಿ ಪಾರಣೆಯಾಗುವುದಕ್ಕೆ ಭಾಗೀರಥಿಯು ಬಹುಬೇಗ ಎದ್ದು ವಾಗ್ದೇವಿಯನ್ನು ಎಬ್ಬಿಸಿ ಚಲೋದಾದ ಭೋಜನವಾಗುವಂತೆ ಶೀಘ್ರ ಅಡಿಗೆ ಮಾಡಿ ಬಿಟ್ಟು, ಗಂಡಸರನ್ನು ಅವಸರ ದಿಂದೆಚ್ಚರಿಸಿ ಸ್ನಾನಕ್ಕೆ ಹೋಗಹೇಳಿದಳು. ಆದರೆ ಆಬಾಚಾರ್ಯನು ನಿದ್ರಾಲಸ್ಯದಲ್ಲಿಯೇ ಇರುವದನ್ನು ನೋಡಿ ವಾಗ್ದೇವಿಯು ಪತಿಯನ್ನು ಅನುಪಮಪ್ರೇಮದಿಂದ ಮೈತಟ್ಟ ಎಬ್ಬಿಸಿ ಕುಂಡ್ರಿಸಿ ತರುವಾಯ ಸರಸೋ ಕ್ತಿಗಳಿಂದ ಅವನ ಆಲಸ್ಯವನ್ನು ಪರಿಹರಿಸಿ ಬೇಗ ಮುಖಪ್ರಕ್ಷಾಳನ ಸ್ನಾನಾದಿಗಳನ್ನು ತೀರಿಸಿ ಭೋಜನಕ್ಕೆ ಸಿದ್ಧವಾಗಿರಬೇಕೆಂದು ಹೇಳಿದಳು. ಸಣ್ಣಕರುವು ಕಿವಿಗೆ ಗಾಳಿ ಹೊಗುತ್ತಲೇ ಕುಣಿದಾಡುವಂತೆ ಆಬಾಚಾರ್ಯನು ಆನಂದಮಯನಾಗಿ ಇದೇ ಸುದಿನ ಇನ್ನು ಉದಾಸೀನ ಮಾಡಲಾಗದೆಂದು ಪತ್ನಿಯ ಅನುಜ್ಞೆಯಂತೆ ನಡಕೊಂಡು ಭೋಜನಕ್ಕೆ ಅನುವಾದನು. ಸೂರ್ಯೋದಯವಾಗಬೇಕಾದರೆ ದ್ವಾದಶಿ ವ್ರತವೂ ಸಂಪೂರ್ಣವಾಯಿತು.

ವೆಂಕಟಪತಿ ಆಚಾರ್ಯನು ಮುಂಚಿನ ರಾತ್ರಿ ಮಾಡಿದ ಪ್ರಸ್ತಾಪವೆಲ್ಲ ಸ್ವಪ್ನದಲ್ಲಿ ಪಲ್ಲಕ್ಕಿ ಏರಿದಂತಾಗುವದೋ ಎಂಬ ಅನುಮಾನದಿಂದ ವಾಗ್ದೇ ವಿಯು ಆಗಾಗ್ಗೆ ಬಾಗಿಲ ಕಡೆಗೆ ದೃಷ್ಟಿಹಾಕುತ್ತಾ ಇನ್ನೂ ವೆಂಕಟಪತಿ ಆಚಾರ್ಯ ಕಣ್ಣಿಗೆ ಬೀಳುವದಿಲ್ಲವಲ್ಲಾ, ಅವನು ಯತಿಗಳ ಮನಸ್ಸನ್ನು ತಿರು ಗಿಸಿ ಮೋಸ ಕೊಟ್ಟು ಬಿಟ್ಟಿರೆ ಮಾಡೋದೇನೆಂಬ ಯೋಚನೆಯಲ್ಲಿ ಬಿದ್ದಳು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಂಡಾರ
Next post ದೇಶವೆಂದರೆ

ಸಣ್ಣ ಕತೆ

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

cheap jordans|wholesale air max|wholesale jordans|wholesale jewelry|wholesale jerseys