ಮಂಗನಿಂದ ಮಾನವನಾದ, ಎಂಬ ವಾದವನ್ನು ಪ್ರಾಕೈತಿಹಾಸಿಕ ಹಿನ್ನೆಲೆಯಿಂದ ಅರಿಯುತ್ತೇವೆ. ಮನುಷ್ಯರಂತೆ ಸೂಕ್ಷ್ಮಮತಿಯಾದ, ಈಗಾಗಲೇ ಮನುಷ್ಯರ ಕೆಲಸಗಳನ್ನು ನಿಭಾಯಿಸುತ್ತಿರುವ ಚಿಂಪಾಂಜಿಯು ಮಾನವನ ಗುಣಗಳಿಗೆ ಹತ್ತಿರವಾಗಿದೆ. ಇದನ್ನು ನೋಡಿದ ವಿಜ್ಞಾನಿಗಳು ಚಿಂಪಾಂಜಿಯನ್ನು ಮಾನವನನ್ನಾಗಿ ಪರಿವರ್ತಿಸಬಾರದೇಕೆ? ಎಂಬ ಶೋಧನೆಯನ್ನು ನಡೆಸಿದ್ದಾರೆ. ಚಿಂಪಾಂಜಿಯಲ್ಲಿ ಇರದ ಮನುಷ್ಯರಲ್ಲಿ ಇರುವ ವಂಶವಾಹಿನಿಗಳಿಂದ ಶೋಧನೆ ನಡೆದಿದೆ. ಈ ಎರಡೂ ಜೀವಿಗಳಲ್ಲಿರುವ DNA ಸರಿಸುಮಾರು ಶೇ. ೯೮- ೪ ಒಂದೇ ಆಗಿರುತ್ತದೆ. ಅಂದರೆ ಮನುಷ್ಯ ಚಿಂಪಾಂಜಿಯ ನಡುವಿನ ಅಂತರಕ್ಕೆ ಕಾರಣ ಕೇವಲ ಶೇ. ೧೬ ವಂಶವಾಹಿನಿಗಳು ಅಂದರೆ ೫೦ ವಂಶವಾಹಿನಿಗಳು ಮಾತ್ರ ವ್ಯತ್ಯಾಸದಲ್ಲಿದೆ. ಈ ೫೦ ರಲ್ಲಿ ಮಾತ್ರ ಮಾನವತೆಯ ಗುಟ್ಟು ಅಡಗಿದೆ. ಈ ೫೦ ವಂಶವಾಹಿನಿಯನ್ನು ಗುರುತಿಸಿ ಅವುಗಳ ಆಮೂಲಾಗ್ರ ಕಾರ್ಯವೈಖರಿಯನ್ನು ಅರಿಯಬೇಕಿದೆ. ಈ ೫೦ ನ್ನು ಬೇರ್ಪಡಿಸಿ ಚಿಂಪಾಂಜಿಯ ಕ್ರೋಮೋ ಸೋಮುಗಳಲ್ಲಿ ‘ಹೊಲಿದು’ ಬಿಟ್ಟರೆ ಇವುಗಳನ್ನು ಮನುಷ್ಯರನ್ನಾಗಿ ಪರಿವರ್ತಿಸಬಹುದೆಂದು ವಿಜ್ಞಾನಿಗಳ ಲೆಕ್ಕಚಾರವಾಗಿದೆ. ಎಂದಾದರೊಂದು ದಿನ ಈ ಮನುಷ್ಯರ ಕೆಲವು ನಡುವಳಿಕೆಯನ್ನು ಹೊಂದಿದ ಚಿಂಪಾಂಜಿ ಮನುಷ್ಯನಾಗಬಹುದೆಂದರೆ ನಂಬಲು ಅಸಾಧ್ಯವೆ? ವೈಜ್ಞಾನಿಕವಾಗಿ ಅಸಾಧ್ಯವೆಲ್ಲ ಸಾಧ್ಯವಾಗುತ್ತಲೇ ಇದೆಯಲ್ಲ.
*****