ಹೇಗ ಬರೆಯಲೇ ಓಲೆ, ಹೇಗೆ ಬರೆಯಲೇ?
ಪ್ರಾಣಪ್ರಿಯನಿಗೆ ಓಲೆ ಹೇಗೆ ಬರೆಯಲೇ?
ಲೇಖಿನಿ ಹಿಡಿದೇ ನನ್ನ ಕೈನಡುಗುವುದೇ
ಪ್ರಿಯನ ನೆನೆದರೇ ಕಣ್ಣ ಧಾರೆ ಸುರಿವುದೇ
ಹೇಳಲಿರುವುದ ನಾ ಹೇಳಲಾರೆನೇ
ಕಂಪಿಸಿದೆ ಜೀವ ನಾ ತಾಳಲಾರೆನೇ
ನೀನೆ ಬಲ್ಲೆಯೇ ನನ್ನ ಎಲ್ಲ ಮಿತಿಯನು
ತಿಳಿಸು ನಲ್ಲಗೆ ನನ್ನ ದೀನ ಸ್ಥಿತಿಯನು
ಸೂರೆಹೋಯಿತೇ ಹರಿಗೆ ನನ್ನ ಪ್ರೇಮವು
ಅವನ ಪಾದ ಮೀರಾಗೆ ಪುಣ್ಯಧಾಮವು
******
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.