ಅಕ್ಷರ ಎಂದರೆ
ಬರಿ ಆಚಾರ ವಿಚಾರ
ವ್ಯವಹಾರ
ಭಾಷೆ ಬರೆವ ವ್ಯಾಪಾರ
ಅಲ್ಲ
ವ್ಯಾಸ, ವಾಲ್ಮೀಕಿ
ದಾಸರ, ಶರಣರ
ಮುಕ್ತಿಯ ಸೂತ್ರ
ಭಕ್ತಿಯ ಸಾರ
ಬಿಚ್ಚಿಟ್ಟ ಭಂಡಾರ
ಬಚ್ಚಿಟ್ಟ ಸಾಗರ
*****