
ಹಸಿವು ಗಡಿಯಾರದ ನಿಮಿಷದ ಮುಳ್ಳು. ರೊಟ್ಟಿ ಗಂಟೆಯ ಮುಳ್ಳು. ಅರವತ್ತು ನಿಮಿಷಗಳು ಸುತ್ತಿ ಬಂದರೂ ಹಸಿವು ಒಂದೇ ಗಂಟೆಯಾಗಿ ಮೆಲ್ಲಗೆ ತವಳುತ್ತದೆ ರೊಟ್ಟಿ....
ಒಂದನ್ನೊಂದು ಅಣಕಿಸುವಂತಿವೆ ಅವು! ಅದೇ ಮೈ ಅದೇ ಬಣ್ಣ ಅದೇ ನಿಲುವು ಅದೇ ಬಾಲದ ಅದೇ ಡೊಂಕು ಕಣ್ಣುಗಳಲ್ಲೂ ಅದೇ ಕವಿದ ಮಂಕು ಆದರೆ-ತಿಂಗಳು ನೆತ್ತಿಯ ಮೇಲೆ ಎದ್ದು ತೆಂಗಿನ ಸೋಗೆಗಳಲ್ಲಿ ಆದಾಗ ಸದ್ದು ಒ೦ದು ಭಯದಿಂದ ಹುಯ್ಯಲಿಡುತ್ತದೆ ಇನ್ನೊಂದು ಮಾತ...
ದೂರದಲ್ಲೆಲ್ಲೋ ಇದ್ದದ್ದು ಹತ್ತಿರಕ್ಕೆ ಹತ್ತಿರದಲ್ಲಿದೆಯೆಂದುಕೊಂಡದ್ದು ದೂರಕ್ಕೆ ಈ ದೂರ ಹತ್ತಿರ, ಅಮಾವಸ್ಯೆ ಹುಣ್ಣಿಮೆ ಇದ್ಯಾವುದೂ ನಿಜವಲ್ಲ; ಎಲ್ಲ ಮನಸೊಳಗೆ ಕನಸುಗಳ ತನ್ನಷ್ಟಕ್ಕೆ ಹೆಣೆವ, ಕ್ಯಾಮರಾದ ಝೂಮ್ ಲೆನ್ಸ್ಗಳ ಮಹಿಮೆ. *****...














