ಹಸಿವು ಗಡಿಯಾರದ
ನಿಮಿಷದ ಮುಳ್ಳು.
ರೊಟ್ಟಿ ಗಂಟೆಯ ಮುಳ್ಳು.
ಅರವತ್ತು ನಿಮಿಷಗಳು
ಸುತ್ತಿ ಬಂದರೂ ಹಸಿವು
ಒಂದೇ ಗಂಟೆಯಾಗಿ
ಮೆಲ್ಲಗೆ ತವಳುತ್ತದೆ ರೊಟ್ಟಿ.

*****