ನುಡಿಯದಿದ್ದರೇನು ನೀನು? ನಿನ್ನ ಮೌನವನ್ನೆ ನಾನು ಹೃದಯದಲ್ಲಿ ತುಂಬಿ, ವಿರಹದಲ್ಲಿ ಬೇಯುತಿರುವೆ ಅಲುಗದೆಯೇ ಕಾಯುತಿರುವ ನಿನ್ನನ್ನೇ ನಂಬಿ. ಚುಕ್ಕಿಗಣ್ಣ ಬಿಚ್ಚಿ ಇರುಳು ತಲೆ ತಗ್ಗಿಸಿ ತಾಳಿ ಕಾಯುವಂತೆ ಬಾಳುತಿರುವೆ ನನ್ನ ನೋವ ಹೂಳಿ ಬೆಳಗು ಬಂದೆ ...

ಮಧ್ಯರಾತ್ರಿ ಸರಿದುಹೋದ ಸಮಯ ನಗರ ನಿದ್ರಿಸಿರಲೇಬೇಕೆಂದು ಕಿಡಕಿಯಿಂದಲೇ ಹಣಿಕಿಕ್ಕಿ ನೋಡಿದೆ ಝಗಮಗಿಸಿ ಹರಿದೋಡುವ ಲೈಟುಗಳು ನಡುರಾತ್ರಿಯ ಏನೇನೊ ಕಾರುಬಾರುಗಳು ಅದೇಕೆ ಮಲಗೀತು ಹಾಲೆಂಡ್ ಗಹಗಹಿಸಿ ನಕ್ಕಿತು ನಿದ್ದೆಗೇಡಿ ನಗರಗಳಲ್ಲಿದೂ ಒಂದು ಕಣ್ಮು...

ಪತಿತನೇಕಾಗುವೆಯೋ? ನೀ ಪ್ರಯತ ನಾಗುತ ನಡೆಯೋ | ಪತ್ತುವಳಿಗ ನಾಗುತಲಿ, ಧನಿಕನಾದರುಽ ಏನು? ಪಥ್ಯ ಮರೆತಽ ನಡೆಯು, ರುಜೆಯ ಪಥವೆ ತಾನು? ಪತ್ತು ವಿಡುತಲಿ ನಿನ್ನಯ ಪತ್ತಳೆಯನುಣ ಬಡಿಸಿ, ಪತಂಗದಾ ತೆರದಿ ಕಿಡಿ- ಗಾಹುತಿಯಾಗುವೆ ಏನು? | ಪತಿತ ಪಾವನ ನೀ-...

ನಿನ್ನ ಬರುವಿಕೆಗಾಗಿ ಕುಳಿತಿರುವೆ ಏಕಾಂಗಿಯಾಗಿ ನೀಲಬಾನತುಂಬ ಹಳದಿ ಹರಡಿ ದಕ್ಕಲಾಗದ ಭಾವಗಳ ಚಿಕ್ಕೆಗಳು ಮೂಡಿದವು. ಅಂತರಾಳ ತೆರೆದುಕೊಳ್ಳುವುದಿಲ್ಲ ಸುಲಭದಲಿ ಎರಡು ಮನೆಗಳ ಬಾಗಿಲುದಾಟಿ ಸಪ್ನಗಳು ದಿಕ್ಕೀ ಹೊಡೆಯುವ ಕ್ಷಣ ಚಂದ್ರ ತೇಲಿದ. ಹರಡಿ ಹಾ...

ತಾಯ್ ಕನ್ನಡ, ನಡೆ ಕನ್ನಡ , ನುಡಿ ಕನ್ನಡ – ಬಾಳ್ ಕನ್ನಡ ! ಕನ್ನಡಿಗನೆಲ್ಲಿದ್ದೊಡಲ್ಲಿ ಕನ್ನಡ ನಾಡ ಕೀರ್ತಿ ಧ್ವಜ ! ಕನ್ನಡಿಗ ನಿಂತಿರ್ದ ನೆಲಮೆ ಕನ್ನಡ ನುಡಿಯ ಸ್ಫೂರ್ತಿ ಧ್ವಜ ! ಕನ್ನಡದ ನೆಲದ ನೆಲೆ ಬಿಟ್ಟು ಬೇರೆಡೆ ನಡೆದು ಕಾಲ ದೂಡುವ...

ಮುಂಗೋಳಿ… ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ… ವಂದೇ ಸಮ್ನೆ ಅಳುತ್ತಾ, ವುರೀಲೋ… ಬ್ಯಾಡೋ… ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ ಕಡ್ದೆಂಗೆ,...

ಯೌವನಕ್ಕೆ ಬಂದ ಯುವತಿಯೇ ನನ್ನನ್ನು ಕಂಡು ಎಷ್ಟೊಂದು ಹಲುಬುತಿದಿ ನನ್ನ ದೃಷ್ಟಿಯನ್ನಿಯುವಲ್ಲಿ ನೀನಿರುವೇ ನಾನಿದ್ದಲಿಗೆ ತಾನಾಗಿಯೇ ಓಡೋಡಿ ಬರುವೆ. ಪ್ರೇಮವೆಂಬ ರೋಗವನ್ನು ಬೆನ್ನಟ್ಟಿದಿ ಮುಂದೆ ಬಂದಾಗ ಏನಾದರೂ ಹೇಳಲು ಬಯಸತ್ತಿದೆ ದಿಕ್ಕೂ ತೋಚಲಾರ...

ಈ ಸೆಲ್ಲಿನೊಳಗಿಂದ ನೋಟವೇ ಬೇರೆ-ಮೇಲಕ್ಕೆ ತೆರೆದ ಅವಕಾಶದಲ್ಲಿ ಕತ್ತಲಾಗಿರಬಹುದು ಬೆಳಕಾಗಿರಬಹುದು ಮೋಡ ಹಾಯುತ್ತಿರಬಹುದು ನಕ್ಷತ್ರಗಳ ಬೆಳಕು ಬೀಳುತ್ತಿರಬಹುದು ಮುಖಗಳು ಮೂಡುತ್ತಿರಬಹುದು ನೆನಪು ಹಣಿಕುತ್ತಿರಬಹುದು ರಾತ್ರಿಯ ತಣ್ಣನೆ ಗಾಳಿ ಮಣ್ಣಿ...

ಯಾರು ಕೊಟ್ಟಿದ್ದೆ ಶಾಪ? ಬರಿತಾಪ, ಪರಿತಾಪ ಧರ್ಮ ಕರ್ಮದ ಗೆರೆ ಎಳೆದವರಲ್ಲವೇ ಅನುಕೂಲ ಸಿಂಧು ಶಾಸ್ತ್ರಸಮ್ಮತ ಅವರಿಗವರದೆ ಒಮ್ಮತ ಅಜ್ಜ ಹಾಕಿದ ಆಲದ ಮರಕ್ಕೆ ನೇಣು ಒಡ್ಡಬೇಡ ಗೋಣು ಯಾರ ಕೈಲಿದೆ ಪರತಂತ್ರ ಶಕ್ತಮನಸ್ಸಿನೊಡತಿ ಮತ್ತೇಕೆ ಹೊಯ್ದಾಟ ನಡೆ...

1...2829303132...73

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...