
ಓ ಈಡಿಪಸ್ ನಿನ್ನೆದೆಂತಹ ಬದುಕು ಅಮಾನುಷ ವಿಧಿಬರಹಕೆ ಈಡಾಗಿ ಅರಿಯದೆ ಹಿಂದೆಂದೂ ನಡೆಯದಿದ್ದ ಮುಂದೆಂದೂ ನಡೆಯದಿರುವ ಘನಘೋರ ದುರಂತಕ್ಕೆ ಬಲಿಯಾದೆ ನವಮಾಸಗಳು ತನ್ನೊಡಲಲಿ ನಿನ್ನನಿರಿಸಿಕೊಂಡ ಹೆತ್ತವಳಿಗೆ ಮಾಲೆ ಹಾಕಿ ಅವಳೊಡೆಯನಾದೆ ಅವಳ ನಗ್ನತೆಯಲಿ...
ಎಲ್ಲಿ ಹೋದರೂ ಚಿನ್ನಾರಿ ಪೇಪರಿನಲಿ ಜೋಪಾನ ಮಾಡಿ ಎತ್ತೊಯ್ಯುತ್ತಾಳೆ ತನ್ನ ಪ್ರೀತಿಯ ಸೂಜಿಯನ್ನೂ! ಸೂಜಿಯೊಂದಿಗೇ ರೀಲುಗಟ್ಟಲೆ ಗಟ್ಟಿದಾರ ಹೊತ್ತು ಸಾಗಿ ಪಿಸುಗಿಹೋದ ಎಲ್ಲ ಎಲ್ಲವನ್ನೂ ಹೊಲಿಯುತ್ತಾಳೆ ಹರಕುಗಳು ಕಾಣದಂತೆ ಮುಚ್ಚುತ್ತಾಳೆ! ಹೋದ ಬಂದ...
ವಧುವಿನಂತೆ ಕಾದಿದೆ ವರಣಮಾಲೆ ನೇದಿದೆ ನಿನ್ನ ವರಿಸಲೆಂದು ಲೋಕ ಕಾತರದಲಿ ಕಾದಿದೆ, ಬಾ ಬಾ ಹೊಸ ಕಾಲವೆ ಹೊಸ ಹಾಡಿಗೆ ತಾಳವೆ ಬಾಳ ಕುಣಿಸುವಂಥ ಗರವ ಬೀಳಿಸುವಾ ದಾಳವೆ! ಬಾ ಬಾ ಹೊಸವರ್ಷವೆ ವಧುಗೆ ವರನ ಸ್ಪರ್ಶವೆ, ಬೆಂದ ಮನಕೆ ಅನಂದವ ತಾ ಅಶಾವೃಷ್ಟಿಯ...














