ಬೇಕಿಲ್ಲ ಗೆಳತಿ ನಮಗೆ ಯಾರ ಭಿಕ್ಷೆ ಆತ್ಮವಿಶ್ವಾಸವೇ ನಮಗೆ ಶ್ರೀರಕ್ಷೆ ಇಲ್ಲಿ ನೀಲಿ ಬಾನಿಲ್ಲ ಮಿನುಗುವ ತಾರೆಗಳಿಲ್ಲ ……………… ……………… ಅದಿಲ್ಲ ಇದಿಲ್ಲ ಇಲ್...

ಗದ್ಯಕ್ಕೂ ಪದ್ಯಕ್ಕೂ ವ್ಯತ್ಯಾಸವೇನು? ಕನ್ನಡದ ಮೇಷ್ಟ್ರು ಸವಾಲು ಹಾಕಿದರು ಪಾಠದ ಮಧ್ಯೆ “ನನಗೆ ನೀರನ್ನು ಕೊಡು” ಎಂದರೆ ಗದ್ಯ “ಕೊಡು ನನಗೆ ನೀರನ್ನು” ಎಂದರೆ ಪದ್ಯ ಎಂದು ಉತ್ತರ ಕೊಟ್ಟ ನಮ್ಮ ತಿಮ್ಮ ಏನಾದ್ರಾಗಲೀ ಕ್...

ತಂಗಾಳಿ ಬೀರಿದೆ, ಬಿರುಗಾಳಿ ಬೀಸಿದೆ ಜಗವೆಲ್ಲ ನಲಿದಿದೆ, ಅಳುವಿನಲ್ಲಿ ಮುಳುಗಿದೆ ಗಗನ ಹೊಳೆದಿದೇ, ಮೇಘ ಮುತ್ತಿದೆ ಮೊಗವೊಂದು ಬಾಡಿದೆ, ಮತ್ತೊಂದು ಅರಳಿದೆ ಅತ್ತ ಮರಣ-ಇತ್ತ ಜನನ; ಇಳೆಯೊಳೆಲ್ಲೆಡೆ ಕತ್ತಲಂತೆ ಬೆಳಕಂತೆ ಎರಡು ಕೂಡಿವೆ ತುತ್ತೊಂದೆಡ...

ಹೊಸಿಲಲಿ ಬರೆದಿದೆ ಹೊಸ ಹಾರೈಕೆ ಹೂ ಬಿಸಿಲಿನ ಚಿತ್ತಾರದಲಿ, ನಿಜವಾಗಿಸು ಬಾ ನವವರ್ಷವೆ ನೀ ದಿನ ದಿನ ಪದ ವಿನ್ಯಾಸದಲಿ ಗಿಡಮರಬಳ್ಳಿಯ ಹೂಬಟ್ಟಲಲಿ ಭೃಂಗದ ಊಟದ ತಟ್ಟೆಯಲಿ ನಗುತಿದೆ ಚೆಲುವೇ ನಂದನದೊಲವೇ ಪರಿಮಳವಾಡುವ ತೊಟ್ಟಿಲಲಿ! ಬೇಸಿಗೆ ಮರಗಳ ಬೀಸ...

ಒಂಬತ್ತೂ ತಿಂಗಳು ಶಾಂತ-ಪ್ರಶಾಂತ ಮೇಘನಾ ಹತ್ತನೆಯ ತಿಂಗಳು ಯಾಕಿಷ್ಟೊಂದು ಮುಖ ಕಪ್ಪಿಟ್ಟಿತು ಬೇನೆ ಸುರುವಾಯಿತೆ ರಾಣಿ? ಸಮಾಧಾನಿಸಿಕೋ ಸಮಯ ಬರುತ್ತದೆಯಲ್ಲ ಹತ್ತಿರ ಮಡಿಲು ತುಂಬಲು ಕಾತರಿಸಿದ ಕುಡಿಗೆ ಮುದ್ದಿಡಲು ಎಷ್ಟೊಂದು ಬೆವರ ಹನಿಗಳು ಮುಖ ಮ...

ಬಯಕೆಯೊಂದದು ಮನದೊಳಂದುದು ಎನಿತೆನಿತೊ ತವಕದಿ ಮೂಡುತೆ, ಹಿತದ, ಹಿತಕೆ ನಿಸ್ಪೃಹದ ನೇರಕೆ ಇನಿಸು ತಪ್ಪದೆಡೆ ಮಾಡುತೆ | ಹೊಂಬೆಳಗಲ್ಲರಳಿ, ಸೌಗಂಧ ಸೂಸಿ ತನಿಗಾಳಿಯೋಳ್ ಬೆರೆತು ಮಕರಂದ ನೀಡೆ ಮಣ್ಣು – ಮುಗಿಲನೆ ಕಂಡು ದಿನವೆಲ್ಲ ಘಮಘಮಿಸಿ ನಸು...

ನಿನ್ನ ಮೌನದೊಳಗಿನ ಮಾತು ನೀಲಾಂಜನ ಉರಿದಂತೆ ಮನೆ ತುಂಬ ತಣ್ಣನೆಯ ಬೆಳಕು ಪಸರಿಸಿ ಸಂಜೆಯಲಿ ಮನೆ ಬೆಚ್ಚಗಾಯಿತು. ನಿನ್ನ ಮೌನದೊಳಗಿನ ನಡುಗೆ ಚಿಕ್ಕಿಗಳು ಆಕಾಶದಲಿ ಮಿನುಗಿದಂತೆ ತಣ್ಣನೆಯ ತಂಗಾಳಿ ತೀಡಿ ಹಾಸಿತು ಕಣ್ಣ ತುಂಬ ನಿದ್ದೆ ಗುಂಗು ಹರಡಿತು....

ಹಳೆಯ ವರ್ಷವಿಂದಳಿಯಿತು, ಗೆಳತಿ, ಅದರೊಡಲಿನ ಸುಖದುಃಖದ ಪ್ರಣತಿ ಆರಿತು, ಹೊಸ ವರ್ಷಕೆ ಆರತಿ ನೀಡಿ, ಸ್ವಾಗತಿಪ, ಬಾ, ಗೆಳತಿ. ಹೊಸ ವರ್ಷವು ಬಂದಿದೆ, ಗೆಳತಿ! ಯುಗ ಕಳೆಯಿತು, ಬಾಳೆದೆಯೊಳ ಪ್ರೀತಿ ಆಸೆ ಅಡಗಿದಭಿಲಾಷೆಯನೆಲ್ಲ ಮಣ್ಣು ಮಾಡುವುದೆ ಹೊಸದ...

1...89101112...73

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....