ಪರದೇಶಿ ಸಾಗಿಹಳು ಸಂತೆಗಾಡಿಯೊಳು ಹರಹರಾ ಎಂದೆನುತ ಶಿರಬಾಗಿಸಿದಳು ಸಂತೆ ಮಾಡಿದ ಯಾವ ಲಕ್ಷಣಗಳಿಲ್ಲ ಚಿಂತೆ ಮಾಡುತ ಜನರ ಮಧ್ಯೆ ಕುಳಿತಿಹಳು ತಕ್ಕಡಿ ಸೇರಿಲ್ಲ ಹೊಗೆಪುಡಿಯು ಇಲ್ಲ ಪಕ್ಕದೊಳು ಕಾಳಿನ ಚೀಲಗಳು ಇಲ್ಲ ಎಣ್ಣೆ ಡಬ್ಬಗಳಿಲ್ಲ ಗೆಡ್ಡೆ ಗೆಣಸ...

ಅಮ್ಮಾ ನಿನ್ನ ಪುಣ್ಯಚರಣದ ಸಣ್ಣ ಧೂಳಿಯು ನಾನು ಅಮ್ಮಾ ನಿನ್ನ ಕಣ್ಣ ಕಾಂತಿಯ ಸಣ್ಣ ಕಿರಣವು ನಾನು ಎಂಥ ಹೆಮ್ಮೆಯೆ ಅಮ್ಮ ನಿನ್ನ ಕಂದ ನಾನಾಗಿರುವುದು ಸಾಟಿ ಇಲ್ಲದ ಭುವನಮಾತೆ ನನ್ನ ತಾಯಾಗಿರುವುದು ಇತಿಹಾಸಕೇ ನಿಲುಕದ ಕಾಲಕೂ ನೀ ಪೂರ್ವಳು ಉಪನಿಷತ್ತ...

ತ್ರಾಸ ಇಲ್ಲದೆ ಪ್ರಾಸವ ಪ್ರಸವಿಸಿ ಪ್ರಾಸಗಳನ್ನು ತ್ರಾಸಲಿ ಲಾಲಿಸಿ ಪೆನ್ನು ಹಿಡಿದರೆ Punನ್ನೀರನೆ ಹಾರಿಸಿ ಚಿಟಿಕೆಗೊಂದು ಚುಟುಕವ ರಚಿಸಿ ಖಂಡಿಗಟ್ಟಲೆ ಬರೆದೂ ಬರೆದು ಬಂಡಿ ತುಂಬುವವನೆ ವಿಶೇಷ ಪುರವಣಿ ಸಂತೆಗಳಲ್ಲಿ ತುಂಬಿ ತುಳುಕುವವನೆ ಪ್ರಾಸಾಂ...

ಪಶ್ಚಿಮದಿಂದೆದ್ದ ಹೊಸ ಬಿರುಗಾಳಿ ಪೂರ್ವವನ್ನೆಲ್ಲ ಹಾರಿಸಿ ಧೂಳಿಪಟ ಮಾಡಿದೆ ಕಾಣುತ್ತಿಲ್ಲ ಅಶ್ವಿನಿ ಭರಣಿ ಕೃತ್ತಿಕೆಯರು ಮಾಯವಾಗಿವೆ ಧ್ರುವ ನಕ್ಷತ್ರ ಸಪ್ತರ್ಷಿಮಂಡಲ ಋತವ ಸಾರಿದ ವೇದ ಉಷನಿಷತ್ತುಗಳು ಕಣ್ಮರೆಯಾದವು ಸದ್ದುಗದ್ದಲದಲ್ಲಿ ಏಕಪತ್ನೀವ...

ಅಪ್ಪನಿಗೆ ಹುಷಾರಿಲ್ಲ ಎನ್ನುವ ದೂರವಾಣಿ ಕರೆಯ ಬೆನ್ನೇರಿ ಆಸ್ಪತ್ರೆ ತಲುಪುವ ವೇಳೆಗಾಗಲೇ ಅಪ್ಪ ಮಾತನಾಡುವ ಶಕ್ತಿ ಕಳೆದುಕೊಂಡಿದ್ದರು. ಅದಾದ ಮೂರೇ ದಿನಗಳಲ್ಲಿ ನಮ್ಮ ಪಾಲಿಗೆ ನೆನಪಾಗಿಹೋದರು. ಅಪ್ಪನ ಅಂತ್ಯಕ್ರಿಯೆ ಸಂದರ್ಭದಲ್ಲಿ ಎದೆಯನ್ನು ಯಾರೋ...

ಮುಗಿಲ ತೂರಿ ಮೇಲೆ ಎದ್ದ ಗಿರಿಯ ನೆತ್ತಿಯಲ್ಲಿ, ಕರುಳ ಕೊರೆವ ಹಿಮಗಾಳಿಯ ಕಲ್ಲಭಿತ್ತಿಯಲ್ಲಿ, ಎವೆ ಬಡಿಯದ ಎಚ್ಚರದಲಿ ಹೊತ್ತಿ ಉರಿವ ಕೆಚ್ಚಿನಲ್ಲಿ ದೇಶ ನನ್ನ ದೈವ ಎಂದು ಹೋರಾಡುವ ಧೀರರೇ, ನಿಮ್ಮೊಡನಿದೆ ನಮ್ಮ ಹೃದಯ ಇದೋ ನಿಮಗೆ ವಂದನೆ ತಿನ್ನಲಿರದ...

ಎಲ್ಲ ಪ್ರೀತಿಯ ಮನಸ್ಸುಗಳೇ ನನ್ನದೊಂದು ಮಾತು ಸಾವಧಾನವಿರಲಿ ಬೇಡಲು ಬಂದಿಲ್ಲ ನಿಮ್ಮ ಅನ್ನ ಬಟ್ಟೆ ಬರೆ ಕೇಳುವುದಿಲ್ಲ ನಿಮ್ಮ ಹಣ ಒಡವೆ ವಸ್ತು ಲಪಟಾಯಿಸಲಾರೆ ನಿಮ್ಮ ಆಸ್ತಿ ಅಂತಸ್ತು ಅಹಮಿಕೆ ವಂಚಿಸುವುದೇ ಇಲ್ಲ ನಿಮ್ಮ ಹೆಂಡತಿ ಮಕ್ಕಳು ನಿಮ್ಮನ್ನ...

1234...6

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....