Month: November 2017

#ಕವಿತೆ

ಹೂ ನಗು

0
Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)

ಒಂದು ಹೂ ನಗು ಬೇಕೆಂದರೂ ಕೊಡಬೇಕು ಕಾಸು ಬರೀ ಒಣ ಮಾತಿಗೂ ಲೆಕ್ಕ ರೊಕ್ಕ ತಾಸು ತಾಸು ಸೇವೆ ಕರ್ತವ್ಯಗಳ ಮಾತು ದೂರ ಬರೀ ಸಂಬಳ ಕೇವಲ ಸಿಂಬಳ ಮಾಡುವ ಕೆಲಸಕ್ಕೂ ಅದರ ಬೆಲೆಗೂ ಎಂದೂ ತಾಳೆಯಾಗುತ್ತಿಲ್ಲ *****

#ವಿಜ್ಞಾನ

ಮಹಾಮಾರಿ ರೋಗ – ಏಡ್ಸ್

0

ಏಡ್ಸ್ ವೈರಸ್ ಏಡ್ಸ್ ಪಸರಿಸಿ ವರ್ಷಗಳೇ ಸಂದರೂ ಅದಕ್ಕೆ ಕಾರಣವಾದ ವೈರಸ್ಸ್ ಬಗ್ಗೆ ತಿಳಿದಿದ್ದಿಲ್ಲ.  ಅಥವಾ ಏ ಆರ ಯು ಮುಂತಾದ ವೈರಸ್‌ಗಳು ಏಡ್ಸ್‌ಗೆ ಕಾರಣವೆಂದು ತಿಳಿಯಲಾಗಿತ್ತು.  ಆದರೆ ಪ್ಯಾಶ್ಚರ್‍ ಇನ್ಸ್‌ಟಿಟ್ಯೂಟ ಪ್ಯಾರಿಸ್‌ನ ತಜ್ಞರಾದ ಪ್ರೊ. ಎಲ್. ಮೊಂಟೆಗ್ನೇರ್‍ ಮತ್ತು ಸಹಪಾಠಿಗಳು ೧೯೮೩ ರಲ್ಲಿ ಏಡ್ಸ್‌ಗೆ ಕಾರಣವೆಂದು ತೋರಿಸಿಕೊಟ್ಟರು.  ಎಚ್.ಅಯ್.ವಿ ಯಲ್ಲಿ ಎಚ್.ಅಯ್.ವಿ-೨ ಎಂದು ಎರಡು […]

#ಹನಿಗವನ

ಇಣಕು ನೋಟ

0
ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)

ಸೂರ್ಯನಂತೆ ಬೆಳಗಬೇಕೆಂದು ನಕ್ಷತ್ರದಂತೆ ಮಿನುಗುತ್ತೇವೆ ಪೂರ್ಣತೆ ಪಡೆಯಲು ಬಾಳನ್ನು ಓಣಿಯಲ್ಲಿ ಇಣಕಿ ನೋಡುತ್ತೇವೆ! *****

#ಕವಿತೆ

ತಾಯೇ ನಿನ್ನ ಪ್ರೀತಿಯ ಬಾಗಿನ

0
ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)

ತಾಯೇ ನಿನ್ನ ಪ್ರೀತಿಯ ಬಾಗಿನ ಎಲ್ಲಕು ಮೀರಿದ್ದೆ, ಗಾಳಿ, ನೀರು, ಅನ್ನದ ರಕ್ಷೆ ಮಾತಿಗೆ ನಿಲುಕದ್ದೆ. ಕನ್ನಡದಂಥ ಕಂಪಾಡುವ ನುಡಿ ನಾಲಿಗೆಗೇರಿದ್ದು, ಪಂಪ ಕುವೆಂಪು ಕುಮಾರವ್ಯಾಸ ಬಂಧುಗಳಾದದ್ದು, ಸಾಮಾನ್ಯವೆ ಶ್ರೀ ಪುರಂದರ ಬಸವ ಜಕಣರು ಕಡೆದದ್ದು, ಕನ್ನಂಬಾಡಿಯ ಬಣ್ಣದ ಬೆಡಗು ಲೋಕವ ಮಣಿಸಿದ್ದು ಭಾರಿ ಅರಳಿಮರ, ನಡುವೆ ಪುಟ್ಟ ಎಲೆ ಎಲೆಗೆ ಎಂಥ ಬೆರಗು! ನಿನ್ನ […]

#ಕವಿತೆ

ಸುಮ್ಮನಿದ್ದದ್ದು ಸಾಕು

0

ಗೊತ್ತಿರಲೇ ಇಲ್ಲ ಫಲವತ್ತಾದ ಕಪ್ಪು ನೆಲವೆಂದು ನೀನು ಬಂದು ಬೇರೂರಿ ಆಕಾಶದೆತ್ತರ ಬೆಳೆದು ನಿಲ್ಲುವವರೆಗೂ ಯಾರು ತಂದು ಬಿಸುಟರು ನಿನ್ನ ನನ್ನ ಎದೆಯಾಳದಲಿ? ಹುಲ್ಲಿನ ಜೊತೆ ಹುಲ್ಲಿನಂತೆ ಬೆಳೆದು ಹುಲ್ಲಾಗಿ ಒಣಗಿ ಹೋಗದೆ ಮರವಾಗಿ ಬೆಳೆದು ನಿಂತುಬಿಟ್ಟೆ ನನ್ನೆದೆ ಬರೀ ಹುಲ್ಲು ಬೆಳೆಯುವ ಬಂಜರು ಎಂದವರ ಸುಳ್ಳಾಗಿಸಿದ್ದು ಒಂದು ಸೋಜಿಗ ನೋವು ತಿಳಿಯಲಿಲ್ಲ ಬಿರುಕು ಹುಡುಕಿ […]

#ಕವಿತೆ

ನನ್ನ ಮನದಾಳಕ್ಕೆ

0
ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)

ನನ್ನ ಮನದಾಳಕ್ಕೆ ನೀನು ಇಳಿದುದೆ ಚಂದ ಸುಳಿದಂತೆ ಮಲೆನಾಡ ಗಾಳಿ ಗಂಧ ಎಳೆಗರಿಕೆ ಮೇಲೇಳುವಂತೆ ಸುಡು ನೆಲದಿಂದ ಸಂಜೆ ಹಣ್ಣಾದಂತೆ ಬಾನ ತುಂಬ ನೀ ಸುಳಿವ ಗಳಿಗೆ ಪ್ರೀತಿಯ ಹೊಳೆಗೆ ನೆರೆಬಂತು ಬಣ್ಣ ಬದಲಾಗಿತ್ತು ಪೂರ ಇಳೆಗೆ ಮಣ್ಣು ಹೊನ್ನಾಗಿತ್ತು, ಮೌನ ಹೂಬಿಡುತ್ತಿತ್ತು ಕಣ್ಣಾಟವಾಡಿತ್ತು ಚಿಕ್ಕೆ ಜೊತೆಗೆ ಜೀವ ಜಡ ಎನಿಸಿದ್ದ ಕೋಟಿ ಮಣಿಗಳು ಕೂಡಿ […]

#ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೪೯

0

ಎಲ್ಲ ತಿಳುವಳಿಕೆ ಒಂದು ಬಗೆಯ ಅರೆವಳಿಕೆ!! *****

#ಕಾದಂಬರಿ

ಇಳಾ – ೧೧

0

ಸ್ಫೂರ್ತಿ ಊರಿಂದ ಬಂದ ಮೇಲೆ ಮತ್ತೆ ಊರಿಗೆ ಹೋಗಬಾರದೆಂದು ನಿರ್ಧರಿಸಿದ್ದಳು. ತನ್ನದಿನ್ನು ಓದು ಮುಗಿದಿಲ್ಲ-ಆಗಲೇ ಅಪ್ಪ ಮದುವೆ ಮಾಡುವ ಪ್ರಯತ್ನ ನಡೆಸಿದ್ದು ಅವಳಿಗೆ ತುಂಬಾ ನೋವಾಗಿತ್ತು. ಯಾಕಾಗಿ ಅಪ್ಪ ಇಷ್ಟು ಅವಸರಿಸಿದ್ದು ಎಂದೇ ತಿಳಿಯಲಿಲ್ಲ. ಓದಿನಲ್ಲಿ ತೊಡಗಿಸಿಕೊಳ್ಳಬೇಕು ಆ ವಿಚಾರಗಳಿಗೆಲ್ಲ ತಲೆ ಕೆಡಿಸಿಕೊಳ್ಳಬಾರದೆಂದು ಮನಸ್ಸಿನಿಂದ ಗಂಡು ಬಂದಿದ್ದು. ತನ್ನನ್ನು ನೋಡಿದ್ದು. ಎಲ್ಲವನ್ನು ಕಿತ್ತುಹಾಕಲು ಪ್ರಯತ್ನಿಸಿದಳು. ಆದರೆ […]

#ಕವಿತೆ

ಅಪೂರ್ವ ಸಂಧ್ಯಾಚಿತ್ರ

0

ನಾಗರಿಕ ಜೀವನದ ಗರ್ಭದೊಳಗಡೆ ಸಿಲುಕಿ ಕತ್ತಲೆಯೆ ಬೆಳಕೆನಿಸಿ, ಬೆಳಗು ಬೈಗುಗಳೆಂಬ ಭೇದ ಬರಿ ನೆನಪಾಗಿ, ಗಾಣದೆತ್ತಿನ ದುಡಿತ ಹವಣಿಸುವ ಬೇಸರದ ಜೊತೆಗೆ, ನಿತ್ಯವು ಹೊಟ್ಟೆ ಬಟ್ಟೆಗಳ ಹಂಚಿಕೆಯ ಹೊಂಚಿಕೆಯ ಹುಸಿ ಬಾಳ ಲಂಚ ಪ್ರಪಂಚದಲಿ ಸತ್ಯನಿಷ್ಠನ ಸಾವು- ಬದುಕಿನಾ ಧಗೆಯ ಬಿರು ಹೊಯ್ಲಿನಲಿ, ಭಾರತದ ಯಾವುದೋ ಮೂಲೆಯಲಿ ಹೊತ್ತಿ ಹಬ್ಬಿದ ಮತ- ದ್ವೇಷದನಿರೀಕ್ಷಿತದ ಕಾಳ್ಕಿಚ್ಚಿನಿಂದೊಗೆದ ಹೊಗೆಯ […]