Month: August 2016

#ವ್ಯಕ್ತಿ

ಚೆಂಬೆಳಕಿನ ಹೂಕವಿತೆಗಳ ಕ(ಣ)ವಿ

0

‘ಆಯ್ಕೆ ಸಮಿತಿಯಿಲ್ಲಿ ನೀವಿದ್ದರೆ ರಾಷ್ಟ್ರಕವಿ ಗೌರವಕ್ಕೆ ಯಾರನ್ನು ಸೂಚಿಸುತ್ತಿದ್ದಿರಿ?’ ಕವಿ ಜಿ.ಎಸ್. ಶಿವರುದ್ರಪ್ಪ ಅವರಿಗೆ ಕವಿ ಗೌರವ ದೊರೆತಹೊಸತದು. ಸಂವಾದ ಕಾರ್ಯಕ್ರಮವೊಂದರಲ್ಲಿ ಸಹೃದಯರೊಬ್ಬರು ಮೇಲಿನ ಪ್ರಶ್ನೆ ಕೇಳಿದಾಗ ಇಡೀ ಸಭಾಂಗಣ ಮೈಯೆಲ್ಲ ಕಿವಿಯಾಗಿತ್ತು. ಜಿ‌ಎಸ್‌ಎಸ್ ತಣ್ಣಗೆ ಹೇಳಿದರು: ರಾಷ್ಟಕವಿ ಆಯ್ಕೆ ಸಮಿತಿಯಲ್ಲಿ ನಾನಿದ್ದಿದ್ದರೆ ಚಂದ್ರಶೇಖರ ಕಂಬಾರ ಮತ್ತು ಚೆನ್ನವೀರ ಕಣವಿಯವರ ಹೆಸರು ಸೂಚಿಸುತ್ತಿದ್ದೆ. ಆ ಸಭೆಯಲ್ಲಿ […]

#ಹನಿಗವನ

ಪರಿಣಾಮ

0
ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)

ನಗು ಆರೋಗ್ಯಕ್ಕೆ ಟಾನಿಕ್ ಹೊಟ್ಟೆ ಹುಣ್ಣಾಗುವಂತೆ ನಕ್ಕರೆ ಪ್ಯಾನಿಕ್ ನಗುವು ಪಕ್ಕದವರಿಗೆ ಕ್ರಾನಿಕ್ ಹೊಟ್ಟೆ ಹೋಳಾಗುವಂತೆ ನಕ್ಕರೆ ಬಾಳು ಟೈಟಾನಿಕ್! *****

#ಹನಿಗವನ

ಸಂಚು

0
ಲತಾ ಗುತ್ತಿ
Latest posts by ಲತಾ ಗುತ್ತಿ (see all)

ಕಟುಕರನೂ ಕರಗಿಸುವ ಹೂ ನಗು, ಹಾಲು ಕೆನ್ನೆ ಪುಟ್ಟ ಹೆಜ್ಜೆಯ ಬೆಳದಿಂಗಳ ಮಗು: ನಕತ್ರದ ಮಿಂಚು, ಸಾಕ್ಷಾತ್ ದೇವರ ಸಂಚು. *****

#ಕವಿತೆ

ಗೊಬ್ಬರದ ಹುಳಗಳು

0
ಕಾಸರಗೋಡಿನ ಕಾರಡ್ಕ ಎಂಬಲ್ಲಿ ೧೯೪೦ ರಲ್ಲಿ ಜನನ. ಕಾಸರಗೋಡು, ತಿರುವನಂತಪುರ, ಹೈದರಾಬಾದುಗಳಲ್ಲಿ ವಿದ್ಯಾಭ್ಯಾಸ. ಇಂಗ್ಲೀಷ್ ಸಾಹಿತ್ಯದಲ್ಲಿ ಎಂ. ಎ.; ಭಾಷಾಶಾಸ್ತ್ರದಲ್ಲಿ ಪಿಎಚ್.ಡಿ. ಕೇರಳದ ಹಲವೆಡೆ ಇಂಗ್ಲೀಷ್ ಅಧ್ಯಾಪಕರಾಗಿ ವೃತ್ತಿಜೀವನ ಆರಂಭ; ಆನಂತರ ಹೈದರಾಬಾದಿನ ಉನ್ನತ ಶಿಕ್ಷಣ ಸಂಸ್ಥೆ ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಇಂಗ್ಲಿಷ್ ಎಂಡ್ ಫಾರಿನ್ ಲಾಂಗ್ವೇಜಸ್‌ನಲ್ಲಿ ಪ್ರಾಧ್ಯಾಪಕ.೨೦೦೨ರಲ್ಲಿ ನಿವೃತ್ತಿ.ಅಮೇಲೆ ಅಮೆರಿಕ, ಯೆಮೆನ್ ದೇಶಗಳಲ್ಲಿ ಅಧ್ಯಾಪನ. ಸದ್ಯ ಹೈದರಾಬಾದಿನಲ್ಲಿ ವಾಸ್ತವ್ಯ. ‘ಮುಖಾಮುಖಿ’ ಕವನಸಂಕಲನಕ್ಕೆ ಕೇರಳದ ಕುಮಾರನ್ ಆಶಾನ್ ಅವಾರ್ಡ್ ಮತ್ತು ಕಾಂತಾವರದ ವರ್ಧಮಾನ ಪ್ರಶಸ್ತಿ; ‘ಅವಧ’ ಕವನ ಸಂಕಲನಕ್ಕೆ ಮತ್ತು ‘ಸಮ್ಮುಖ’ ಲೇಖನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ‘ಅಕ್ಷಯ ಕಾವ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೧೫ರ ಸಾಲಿನ ಪ್ರಶಸ್ತಿ ಲಭಿಸಿದೆ. ಅಲ್ಲದೆ, ಪುತ್ತೂರು ಕರ್ನಾಟಕ ಸಂಘದ ನಿರಂಜನ ಪ್ರಶಸ್ತಿ, ಮತ್ತು ಶಿವಮೊಗ್ಗ ಕರ್ನಾಟಕ ಸಂಘದ ಹಾ.ಮಾ.ನಾ. ಪ್ರಶಸ್ತಿಗಳೂ ದೊರಕಿವೆ.ಕರ್ನಾಟಕ ಸಹಿತ್ಯ ಅಕಾಡೆಮಿಯ ಗೌರವ ಸಾಹಿತ್ಯ ಪ್ರಶಸ್ತಿಗೂ ಇವರು ಪಾತ್ರರಾಗಿದ್ದಾರೆ. ತಿರುಮಲೇಶ್ ಇಂಗ್ಲೀಷ್‌ನಲ್ಲೂ ಹಲವಾರು ಲೇಖನಗಳನ್ನು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ.
*****
ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)

ದುಂಡಗೆ ಬಿಳಿಯಾಗಿ ಮುದ್ದುಮುದ್ದಾದ ಗೊಬ್ಬರದ ಹುಳಗಳನ್ನು ನೋಡದವರು ಯಾರು! ಇವು ಹಟ್ಟಿಗೊಬ್ಬರದಲ್ಲಿ ಹುಟ್ಟಿ ಅಲ್ಲೆ ಬೆಳೆಯುತ್ತವೆ. ಕೆಲವೊಮ್ಮೆ ಹಳೆಹುಲ್ಲು ಛಾವಣಿಯಲ್ಲೂ ಕಾಣಿಸುವುದುಂಟು. ಟಪ್ಪನೆ ಕೆಳಕ್ಕೆ ಬಿದ್ದು ವದ್ದಾಡುತ್ತವೆ. ಹೊರಕ್ಕೆ ಬಿಸಾಡಿದರೆ ಕಾಗೆಗಳು ಆತುರದಿಂದ ಎತ್ತಿಕೊಂಡು ಹೋಗುತ್ತವೆ.  ಸಮೀಪದ ಹಲಸಿ ಮರದ ಟೊಂಗೆಯಲ್ಲಿ ಕುಳಿತು ಕುಕ್ಕಿ ತಿನ್ನುತ್ತವೆ.  ಮನುಷ್ಯರಿಗೆ ತಾಳೆಹಣ್ಣುಗಳು ಹೇಗೋ ಹಾಗೆ ಕಾಗೆಗಳಿಗೆ ಈ ಗೊಬ್ಬರದ […]

#ಕವಿತೆ

ಕೆಂಪುಮೂತಿ ಸಾಹೇಬ

0
ಶ್ರೀನಿವಾಸ ಕೆ ಎಚ್
Latest posts by ಶ್ರೀನಿವಾಸ ಕೆ ಎಚ್ (see all)

ಇವನು ಆಕಾಶದಾಗೆ ಇರೋ ಅಷ್ಟು ಹೊತ್ತು ಜನರೆಲ್ಲ ಇವನ ತೊತ್ತು ಬೆವರ್‍ ಸುರಿಸುತ್ತಲೇ ಇರ್‍ಬೇಕು ಎಷ್ಟು ಸುರಿಸಿದರೂ ಇನ್ನಷ್ಟು ಮತ್ತಷ್ಟು ಹಿಂಡಿ ಹೀರುವ ಇವನೊಬ್ಬ ಬೆಂಕಿ ನವಾಬ ಯಾವುದೋ ಗುಲಾಮಗಿರಿ ಕಾಲದ ಕೆಂಪು ಮೂತಿ ಸಾಹೇಬ *****

#ಸಣ್ಣ ಕಥೆ

ಗೆದ್ದವರು……….

0
Latest posts by ಪ್ರತಿಮಾ ಪನತ್ತಿಲ (see all)

ಅದು ಊರನ್ನು ದಂಗುಬಡಿಸುವ ವಿಷಯವಾಗಿತ್ತು. ಆಶಾ ಮತ್ತು ರಮೇಶ ಮದುವೆ ಮಾಡಿಕೊಂಡರಂತೆ ಎಂಬ ಸುದ್ದಿ ಅದು. ಅಕ್ಕಪಕ್ಕದ ಮನೆಯ ಆಶಾ ಮತ್ತು ರಮೇಶ ಒಟ್ಟಿಗೆ ಬೆಳೆದವರು. ವೈದಿಕರ ಮನೆಯ ರಮೇಶ ಮಾಂಸ ಮಡ್ಡಿ ತಿನ್ನುವ ಗೀತಾಳ ಮನೆಯಲ್ಲಿ ಗಂಟೆಗಟ್ಟಲೆ ಸಮಯ ಕಳೆಯುವಾಗ ಅವನಪ್ಪ ಹೆದರಿದ್ದರು, ಎಲ್ಲಿ ಹುಡುಗ ಮಾಂಸ ಮಡ್ಡಿ ತಿನ್ನುತ್ತಾನೆಂದು ಹೆದರಿಕೆ ಯಲ್ಲಿ. ಆಶಾ […]

#ಕವಿತೆ

ಒಳ್ಳೇ ನಡತೆ ಬುದ್ಧಿಗಿಂತ ದೊಡ್ದು

0
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು.ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.
ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)

ಗುಂಡ ತುಂಬ ಸಾಧು ಹುಡುಗ ಹಸುವಿನಂತೆ ಸದಾ ಒಳ್ಳೇ ಮಾತು ಆಡಿದೋರ್‍ಗೆ ಸಾಕಿದ್ನಾಯಿ ಥರಾ! ಸ್ಕೂಲು ಚೀಲ ಭಾರ ಅಂದ್ರೆ ತಾನೇ ಅದನ್ನ ತರ್‍ತಾನೆ! ಸುಸ್ತು ಅಂದ್ರೆ ಹೆಗಲ ಮೇಲೆ ಹೊತ್ತು ತಂದು ಬಿಡ್ತಾನೆ! ಭಾರೀ ಡಬ್ಬಿ ತುಂಬ ತಂದ ತನ್ನ ತಿಂಡಿ ತೆಗೆದು ತಿನ್ರೊ ಅಂತ ಬೊಗಸೆ ಬೊಗಸೆ ಕೊಟ್ಬಿಡ್ತಾನೆ ಕರೆದು ಆದ್ರೆ ಜೋಕೆ, […]

#ನಗೆ ಹನಿ

ನಗೆ ಡಂಗುರ – ೧೯೬

0
ಪಟ್ಟಾಭಿ ಎ ಕೆ
Latest posts by ಪಟ್ಟಾಭಿ ಎ ಕೆ (see all)

ಅದೊಂದು ಸರ್ಕಾರಿ ಕಛೇರಿ- ಹೊಸದಾಗಿ ಇಂಗ್ಲಿಷ್ ಅಧಿಕಾರಿ ಬಂದು ಚಾರ್ಜು ತೆಗೆದುಕೊಂಡರು- ಪ್ರಾರಂಭದಲ್ಲಿ ಮೊದಲನೇ ಟೇಬಲ್ ಗುಮಾಸ್ತನನ್ನು “ನೀನು ಏನು ಕೆಲಸ ಮಾಡುತ್ತೀ ?” ಕೇಳಿದರು. ‘ಏನೂ ಇಲ್ಲ’ ಅಂದ. ನಂತರ ಎರಡನೇ ಟೇಬಲ್ ಗುಮಾಸ್ತನನ್ನು ಕೇಳಿದಾಗ ಅವನೂ ‘ಏನೂ ಇಲ್ಲ’ ಅಂದ. ಮೂರನೆಯ ಟೇಬಲ್‍ನವನಿಂದ ‘ಏನೂ ಇಲ್ಲ’ ಎಂಬ ಉತ್ತರನೇ ಬಂತು. “ಏನು ಒಂದೇ […]

#ವಚನ

ಲಿಂಗಮ್ಮನ ವಚನಗಳು – ೭೬

0

ಸಾಸಿರ ದಳಕಮಲವೆಂದರೆ, ಸೂಸಿಕೊಂಡಿರುವ ಮನ. ಪವನವೆಂದರೆ, ಎಲ್ಲೆಡೆಯಲ್ಲಿ ಸೂಸಿ ಆಡುವಂಥಾದ್ದು. ಬಿಂದುವೆಂದರೆ, ಆಗುಮಾಡುವಂಥಾದ್ದು. ಈ ಮನಪವನಬಿಂದು, ಮೂರನು ಒಡಗೂಡಿ ನೋಡಲು ಪರಂಜ್ಯೋತಿ ಪ್ರಕಾಶವಾದಂಥ ಬೆಳಗೆ ನೆನ್ ಕಂಗಳ ಮುಂದೆ ನಿಂದಿತ್ತು. ಆ ಮಹಾ ಬೆಳಗನೆ ಕಂಗಳಲ್ಲಿ ಹೆರೆ ಹಿಂಗದೆ ನೋಡಿದರೆ, ಎನ್ನಂಗದ ಹವಣ ಹೊರಗೆ ಪರಿಪೂರ್ಣವಾಗಿದ್ದಿತ್ತು ಕಾಣಾ ಅಪ್ಪಣಪ್ರಿಯ ಚನ್ನಬಸವಣ್ಣಾ ನಿಮ್ಮ ಪಾದ ಕರುಣದಿಂದ. *****

#ಕವಿತೆ

ದ್ವಂದ್ವ

0
Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)

ಒಂದು ಹೂವು ಇನ್ನೊಂದು ಮುಳ್ಳು ಒಂದು ಬಾನು ಇನ್ನೊಂದು ಭೂಮಿ ಒಂದು ಹಾಲು ಇನ್ನೊಂದು ಹಾಲಾಹಲ ಒಂದು ಹುಲ್ಲು ಇನ್ನೊಂದು ಕಲ್ಲು ಒಂದು ಅಮರಗಾನ ಇನ್ನೊಂದು ಘೋಷಣ ಒಂದು ರಸಜೇನು ಇನ್ನೊಂದು ಒಣಕಾನು ಒಂದು ತಿಳಿನೀರು ಇನ್ನೊಂದು ಗೊಡಗು ಕೆಸರು ಒಂದು ಕೂಸು ಇನ್ನೊಂದು ರಕ್ಕಸ ಒಂದು ಚೆಂದುಟಿ ಇನ್ನೊಂದು ಕಡಿವ ಹಲ್ಲು ಒಂದು ಗರ್ಭಮೂರ್ತಿ […]