ಸಾಸಿರ ದಳಕಮಲವೆಂದರೆ, ಸೂಸಿಕೊಂಡಿರುವ ಮನ.
ಪವನವೆಂದರೆ, ಎಲ್ಲೆಡೆಯಲ್ಲಿ ಸೂಸಿ ಆಡುವಂಥಾದ್ದು.
ಬಿಂದುವೆಂದರೆ, ಆಗುಮಾಡುವಂಥಾದ್ದು.
ಈ ಮನಪವನಬಿಂದು, ಮೂರನು ಒಡಗೂಡಿ
ನೋಡಲು ಪರಂಜ್ಯೋತಿ ಪ್ರಕಾಶವಾದಂಥ
ಬೆಳಗೆ ನೆನ್ ಕಂಗಳ ಮುಂದೆ ನಿಂದಿತ್ತು.
ಆ ಮಹಾ ಬೆಳಗನೆ ಕಂಗಳಲ್ಲಿ
ಹೆರೆ ಹಿಂಗದೆ ನೋಡಿದರೆ,
ಎನ್ನಂಗದ ಹವಣ ಹೊರಗೆ
ಪರಿಪೂರ್ಣವಾಗಿದ್ದಿತ್ತು ಕಾಣಾ
ಅಪ್ಪಣಪ್ರಿಯ ಚನ್ನಬಸವಣ್ಣಾ
ನಿಮ್ಮ ಪಾದ ಕರುಣದಿಂದ.
*****