ಶುಚಿರ್ಭೂತನಾಗಿ ಗುಡಿಯ ಕಿವುಡು ದೇವರಿಗೆ ಕೇಳಿಸಲೆಂದು ಗಂಟೆ ಬಡಿದು ಕಲ್ಲಿಗೆ ತೆಂಗಿನ ಕಾಯಿ ಒಡೆದು ಭಕ್ತಿಯ ಮಹಾಪೂರ ಹರಿಸುವುದು ಬೇಡ ಕತ್ತಲ ಕರ್ಮಗಳಿಗಾಗಿ ಬೆಳಕಿನಲಿ ಪ್ರಾಯಶ್ಚಿತ್ತ ಮಾಡಿಕೊಳ್ಳುವುದೂ ಬೇಡ ಸುಮ್ಮನೇ ಇರುವುದಕ್ಕೆ ಬಾರದೆ ಬರಿದೆ...

ಜುಲೈ ೩೦, ೨೦೦೦. ಭೀಮನ ಆಮಾವಾಸ್ಯೆಯ ಆ ಕರಾಳ ರಾತ್ರಿಯ ನಂತರದಲ್ಲಿ ಕರ್ನಾಟಕ ರಾಜ್ಯದಲ್ಲಿ ನಡೆದ ಘಟನೆಗಳನ್ನು ನೋಡಿ: ‘ಸಂಕಷ್ಟದಿಂದ ಪಾರು ಮಾಡೋ ಮಾದೇಶ’ ಎಂದು ಅಂದಿನ ಮುಖ್ಯಮಂತ್ರಿ ಸಪತ್ನೀಕರಾಗಿ ಮಲೆ ಮಹದೇಶ್ವರನ ಮೊರೆ ಹೊಕ್ಕರು. ನಾಡಿಗೆ ಕವಿದ...

ಮನಸ್ಸಿಗೆ ನಾಟುವ ಪ್ರತೀಕಗಳನ್ನು ಬಯಸುವವರಿಗೆ ಅರ್ಧ ಓದಿ ಬೋರಲು ಹಾಕಿದ ಪುಸ್ತಕ, ಮೇಜಿನ ಮೇಲೆ ತೆಗೆದಿಟ್ಟ ಟೆಲಿಫೋನು, ಬಟವಾಡೆಯಾಗದೆ ಬಂದ ಪತ್ರ-ಏನೂ ಅನಿಸುವುದಿಲ್ಲ. ಬೃಹತ್ತಾದ ಪ್ರತಿಮೆಗಳನ್ನು ಹುಡುಕಿಕೊಂಡು ಹೋದವರು ರಸ್ತೆ ಚೌಕಗಳಲ್ಲಿ ಮೇಲೆ...

ತಿಂಗಳ ಬೆಳಕಿನ ಸಂಜೆ ಮನೆಯಂಗಳದ ಹೂದೋಟದಲ್ಲಿ ಕುರ್ಚಿ ಹಾಕ್ಕೊಂಡು ಖುಷಿಯಾಗಿ ಕೂರಬೇಕು ಅಂದ್ಕೊಂಡರೆ ಶಶಿ, ನೋಡಪ್ಪಾ, ಸಂತೆ ನೆರೆಯೋದಕ್ಕೆ ಮುಂಚೆ ಗಂಟು ಕಳ್ಳರು.  ಬರೀ ದೆವ್ವನಂತ ಸೊಳ್ಳೆ, ನೊರಜುಲ, ಕಚ್ಚಿದರೆ ಬ್ರಹ್ಮಾಂಡ ಉರಿ ತುರಿಕೆಯ ಸಣ್ಣ ಸ...

ಒಬ್ಬ ಹೆಣ್ಣು ಮಗಳು ನೀರು ಹಾಕಿಕೊಂಡಳು. ಆಕೆಗೆ ಬಯಕೆ ಕಾಡಹತ್ತಿದವು. ಆಕೆಯ ಜೀವ ನೀರಲ ಹಣ್ಣು ಬಯಸಿತು. ಗಂಡನು ನೀರಲ ಹಣ್ಣು ತರಲಿಕ್ಕೆ ಹೋದನು. ನೀರಲಗಿಡವನ್ನೇರಿ ಆತನು ಗಿಡ ಕಡೆಯ ತೊಡಗಿದನು. ಎರಡು ಹಣ್ಣು ಕಡಿದನು. ಗಿಡದಲ್ಲಿ ನಾಗೇಂದ್ರನು ಕಾಣ...

ನೆಲ: ನಿನ್ ಬೇರನ್ನ ಹೊಟೇಲಿಟ್ಟು ಕಾಪಾಡ್ತೀನಿ ನಾನು, ಆದ್ರೂ ನನ್ಮೇಲ್ ಒಣಗಿದ ಹೂವು ಎಲೆ ಚೆಲ್ತೀ ನೀನು! ಮರ: ಬಿಸಿಲಲ್ಲಿ ನೀ ಕಾಯದ ಹಾಗೆ ಬೇಯದ ಹಾಗೆ ದಿನವೂ ತಂಪಾಗಿರೋ ನೆರಳನ್ನೂ ಸಹ ಚೆಲ್ತೀನಲ್ಲ ನಾನು? ಮೋಡ: ಮಳೆಗಾಲ್ದಲ್ಲಿ ನೀರನ್ ಸುರಿಸಿ ಒ...

ಒಮ್ಮೆ ಇಬ್ಬರು ಸ್ನೇಹಿತರು ಮಾತನಾಡುತ್ತಾ ‘ಸರ್ಪಕ್ಕೂ ಪುಡಾರಿಗೂ ಒಂದಕ್ಕೊಂದರಲ್ಲಿ ವ್ಯತ್ಯಾಸವೇನು?’ ಎಂದು ಪ್ರಶ್ನೆಹಾಕಿಕೊಂಡರು. ಒಬ್ಬ ಹೇಳಿದ- “ಸರ್ಪವೂ ಕ್ರೂರ, ಪುಡಾರಿಯೂ ಕ್ರೂರ. ಆದರೆ ಸರ್ಪಕ್ಕೆ ಅದು ನಮ್ಮನ್ನು ಘಾಸಿಗೊಳಿಸದಂತೆ ಎಚ...

ಕತ್ತಲೆ ಬೆಳಗೆಂಬುದಿಲ್ಲ ನಿತ್ಯನಾದಂಗೆ. ಚಿತ್ತಪರಚಿತ್ತವೆಂಬುದಿಲ್ಲ ವಸ್ತುವಿನ ನೆಲೆಯ ಕಂಡವಂಗೆ. ನಿತ್ಯ ಅನಿತ್ಯವೆಂಬುದಿಲ್ಲ ಕರ್ತುತಾನಾದವಂಗೆ. ಈ ಮೂರರ ಗೊತ್ತುವಿಡಿದು ನಿಶ್ಚಿಂತನಾಗಿ ನಿರ್ವಯಲನಾದ ಶರಣರ ಪಾದಕ್ಕೆ ಶರಣೆಂದು ಸುಖಿಯಾದೆನಯ್ಯ ಅಪ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....