Month: June 2016

#ಕವಿತೆ

ಬೇಲಿ

0
Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)

ಈ ಹಸಿರು ಹುಲ್ಲು, ಈ ಹೂವು-ಹಣ್ಣು ಈ ಬಣ್ಣದ ಹಕ್ಕಿಗಳು ಈ ಗಂಧಗಾಳಿ ಈ ಗೂಢ ಶಾಂತಿ ಈ ತಂಪು ತೋಟದಲ್ಲಿ ಶ್ವೇತಾಂಬರಿಯ ಹಂಸಗಮನ ಆಚೀಚೆ ಹಾಲ ಹಸುಳೆಗಳ ಬೆಳದಿಂಗಳ ನಗು ಸೂರ್ಯನಿಲ್ಲಿ ಚಂದಿರ ಚಂದಿರನೋ ಹಾಲೈಸ್ಕ್ರೀಂ ಇವರೆಲ್ಲ ಬೇಲಿ ಬಿಗಿದಿದ್ದಾರೆ ಸುತ್ತಲೂ ಎಲುಬಿನ ತಡಿಕೆಗಳಿಂದ ಗಂಟು ಗಂಟಿನಲ್ಲಿ ಜಗ್ಗಿ ಹಗ್ಗ ಕಟ್ಟಿದ್ದಾರೆ ಮೂಡಲ ಮುಂಬಾಗಿಲು […]

#ಇತರೆ

ಗ್ರಂಥಾಲಯಗಳೋ ಗತಾಲಯಗಳೋ

0

‘ಐವತ್ತು ವರ್ಷಗಳ ಕಾಲ ರದ್ದಿ ಕಾಗದದ ಚೂರುಗಳನ್ನು ಸಂಗ್ರಹಿಸಿದಲ್ಲಿ ನೀವೊಂದು ಸಾರ್ವಜನಿಕ ಗ್ರಂಥಾಲಯ ಹೊಂದುತ್ತಿದ್ದಿರಿ’. ಇಂಗ್ಗೆಂಡ್‍ನ ರಾಜಕಾರಣಿ ಟೋನಿ ಬ್ಲೆರ್‌ರ ಈ ಮಾತು ನಮ್ಮಲ್ಲಿನ ಸಾರ್ವಜನಿಕ ಗ್ರಂಥಾಲಯಗಳಿಗೆ ಚೆನ್ನಾಗಿ ಹೊಂದುತ್ತದೆ. ಹಾಗೆ ನೋಡಿದರೆ ನಮ್ಮ ಗ್ರಂಧಾಲಯಗಳು ರದ್ದಿ ಕಾಗದದ ಚೂರುಗಳ ಸಂಗ್ರಹಗಳಷ್ಟೇ; ಅಲ್ಲ ಧೂಳು, ಕ್ರಿಮಿಕೀಟಗಳಿಗೆ ಆವಾಸಸ್ಥಾನವೂ ಹೌದು. ಅಲ್ಲಿನ ಪುಸ್ತಕಗಳು ಹಾಗೂ ಅವುಗಳೊಳಗಿನ ವಿಷಯದಲ್ಲಿ […]

#ಹನಿಗವನ

ಒಂದೇ ಪರಿಣಾಮ

0

ಮನೆಗೇಟಿಗೆ ಫಲಕ ‘ನಾಯಿಗಳಿವೆ’ ಎಚ್ಚರಿಕೆ! ಎದೆಯಲಿ ತಾಳಿ, ಹಣೆಯಲಿ ತಿಲಕ ‘ಗಂಡನಿದ್ದಾನೆ’ ಎಚ್ಚರಿಕೆ! *****

#ಹನಿಗವನ

ಕೇರ್‌ಲೆಸ್

0
ಲತಾ ಗುತ್ತಿ
Latest posts by ಲತಾ ಗುತ್ತಿ (see all)

ಏನೇ ಆಗಲಿ ಎಲುಬಿಲ್ಲದ ನಾಲಿಗೆ ಮಾಡಿ ತಪ್ಪುಮಾಡಿದೆ ಶಿವಾ ಅದಕೇನು ನೋವು, ಸುಸ್ತಾ? ಬೇಕು ಬೇಡದ್ದೆಲ್ಲಾ ನಿನಗೂ ಮಾಡುತ್ತದೆ ಶಿವಾ! *****

#ಕವಿತೆ

ರೆನೆಯನ್ನು ಕಂಡಮೇಲೆ

0
ಕಾಸರಗೋಡಿನ ಕಾರಡ್ಕ ಎಂಬಲ್ಲಿ ೧೯೪೦ ರಲ್ಲಿ ಜನನ. ಕಾಸರಗೋಡು, ತಿರುವನಂತಪುರ, ಹೈದರಾಬಾದುಗಳಲ್ಲಿ ವಿದ್ಯಾಭ್ಯಾಸ. ಇಂಗ್ಲೀಷ್ ಸಾಹಿತ್ಯದಲ್ಲಿ ಎಂ. ಎ.; ಭಾಷಾಶಾಸ್ತ್ರದಲ್ಲಿ ಪಿಎಚ್.ಡಿ. ಕೇರಳದ ಹಲವೆಡೆ ಇಂಗ್ಲೀಷ್ ಅಧ್ಯಾಪಕರಾಗಿ ವೃತ್ತಿಜೀವನ ಆರಂಭ; ಆನಂತರ ಹೈದರಾಬಾದಿನ ಉನ್ನತ ಶಿಕ್ಷಣ ಸಂಸ್ಥೆ ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಇಂಗ್ಲಿಷ್ ಎಂಡ್ ಫಾರಿನ್ ಲಾಂಗ್ವೇಜಸ್‌ನಲ್ಲಿ ಪ್ರಾಧ್ಯಾಪಕ.೨೦೦೨ರಲ್ಲಿ ನಿವೃತ್ತಿ.ಅಮೇಲೆ ಅಮೆರಿಕ, ಯೆಮೆನ್ ದೇಶಗಳಲ್ಲಿ ಅಧ್ಯಾಪನ. ಸದ್ಯ ಹೈದರಾಬಾದಿನಲ್ಲಿ ವಾಸ್ತವ್ಯ. ‘ಮುಖಾಮುಖಿ’ ಕವನಸಂಕಲನಕ್ಕೆ ಕೇರಳದ ಕುಮಾರನ್ ಆಶಾನ್ ಅವಾರ್ಡ್ ಮತ್ತು ಕಾಂತಾವರದ ವರ್ಧಮಾನ ಪ್ರಶಸ್ತಿ; ‘ಅವಧ’ ಕವನ ಸಂಕಲನಕ್ಕೆ ಮತ್ತು ‘ಸಮ್ಮುಖ’ ಲೇಖನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ‘ಅಕ್ಷಯ ಕಾವ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೧೫ರ ಸಾಲಿನ ಪ್ರಶಸ್ತಿ ಲಭಿಸಿದೆ. ಅಲ್ಲದೆ, ಪುತ್ತೂರು ಕರ್ನಾಟಕ ಸಂಘದ ನಿರಂಜನ ಪ್ರಶಸ್ತಿ, ಮತ್ತು ಶಿವಮೊಗ್ಗ ಕರ್ನಾಟಕ ಸಂಘದ ಹಾ.ಮಾ.ನಾ. ಪ್ರಶಸ್ತಿಗಳೂ ದೊರಕಿವೆ.ಕರ್ನಾಟಕ ಸಹಿತ್ಯ ಅಕಾಡೆಮಿಯ ಗೌರವ ಸಾಹಿತ್ಯ ಪ್ರಶಸ್ತಿಗೂ ಇವರು ಪಾತ್ರರಾಗಿದ್ದಾರೆ. ತಿರುಮಲೇಶ್ ಇಂಗ್ಲೀಷ್‌ನಲ್ಲೂ ಹಲವಾರು ಲೇಖನಗಳನ್ನು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ.
*****
ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)

ರೆನೆಯನ್ನು ಕಂಡಮೇಲೆ ನನ್ನ ಜೀವನದ ದೃಷ್ಟಿಕೋನವೇ ಬದಲಾಯಿತು-ಎನ್ನುವುದು ಹೇಗೆ?  ಯಾವುದೂ ಅಷ್ಟು ಬೇಗನೆ ಬದಲಾಗುವುದಿಲ್ಲ.  ಉದಾಹರಣೆಗೆ ಅಬೀಡ್ಸಿನಲ್ಲಿ ಸಂಜೆಯಾಗುವುದು ನಮೆಗೆ ಗೊತ್ತಾಗುವುದೆ ಇಲ್ಲ. ಅಂಗಡಿಯವರು ಒಬ್ಬೊಬ್ಬರಾಗಿ ಬೆಳಕು ಹಾಕುವ ನಿಮಿಷ ನಾವು ಗಮನಿಸುವುದೆ ಇಲ್ಲ.  ಬೇಕೆಂದಾಗ ಸಮಯವನ್ನು ಸ್ಥಗಿತಗೊಳಿಸಬಲ್ಲೆವಾದ್ದರಿಂದಲೆ ನಾವು ವಾಹನಗಳ ದಟ್ಟಣೆಯಲ್ಲೂ ಬೀದಿ ದಾಟಬಲ್ಲೆವು-ಎಲ್ಲವನ್ನೂ ಬಿಟ್ಟು ಒಂದು ರೆಸ್ಟುರಾ ಹೊಕ್ಕು ನಮ್ಮಷ್ಟಕ್ಕೆ ಇರಬಲ್ಲೆವು.  ಬುದ್ಧನು […]

#ಕವಿತೆ

ನಮ್ಮ ಜಗತ್ತಿನ ಕಣ್ಮಣಿ

0
ಶ್ರೀನಿವಾಸ ಕೆ ಎಚ್
Latest posts by ಶ್ರೀನಿವಾಸ ಕೆ ಎಚ್ (see all)

ಈಶ್ವರನ ತಲೆ ಮೇಲೆ ಕೂತಿದ್ದೇನೆಂದು ಬೀಗಿ ಈ ನಶ್ವರ ಜಗತ್ತಿನ ನಮ್ಮನ್ನು ಕಡಮೆಯೆಂದೆಣಿಸಿ ಕಡೆಗಣಿಸಬೇಡ ತಿಳಿದುಕೊ, ಬೃಹದೀಶ್ವರನ ಜಟೆಯ ಮೇಲೆ ಎಷ್ಟಾದರೂ ನೀನೊಂದು ಸಣ್ಣ ಮಣಿ. ನಮಗೋ ನೀನೆ ನಮ್ಮ ಜಗತ್ತಿನ ಕಣ್ಮಣಿ. *****

#ಸಣ್ಣ ಕಥೆ

ಇರುವದೆಲ್ಲವ ಬಿಟ್ಟು

0
Latest posts by ವೀಣಾ ಮಡಪ್ಪಾಡಿ (see all)

ಅವನು ಯೋಚಿಸುತ್ತಾ ಕೂತಿದ್ದ. ಮನೆ ಗುಡಿಸದೇ ಎಷ್ಟೋ ದಿವಸಗಳಾಗಿದ್ದವು. ಈ ಗೋಡೆಯೆಲ್ಲ ಯಾಕೆ ಹೀಗೆ ನಿಂತಿದೆ? ಇದು ತನ್ನ ಮೇಲೆ ಕುಸಿದು ಬೀಳಬಾರದೆ? ರಾತ್ರೆ ತನಗೆ ನಿದ್ದೆ ಬಂದಾಗ ಅಲ್ಲೇ ಹೃದಯ ಸ್ತಂಭನವಾಗಿ ತಾನು ಸತ್ತು ಹೋಗಬಾರದೆ ಎಂದು ಅವನಿಗೆ ಆಗಾಗ ಅನಿಸುತ್ತಿತ್ತು. ಅವನ ಕೂದಲುಗಳು ಗರಿಗೆದರಿ ಹಾರುತ್ತಿದ್ದವು. ಕಣ್ಣುಗಳಲ್ಲಿ ಜೀವಂತಿಕೆ ಇರಲಿಲ್ಲ. ಒಮ್ಮೊಮ್ಮೆ ಶೂನ್ಯದತ್ತ […]

#ಕವಿತೆ

ಅಮ್ಮ ತಬ್ಕೊಂಡ್ ಕೊಡೋ ಮುತ್ತು

0

ಅಮ್ಮ ತಬ್ಕೊಂಡ್ ಕೊಡೋ ಮುತ್ತು ಜಾಮೂನಪ್ಪ ಜಾಮೂನು, ಮಿಸ್ಸು ಹೇಳೋ ಕಥೆಗಳ ಮುಂದೆ ತುಂಬಾ ಸಪ್ಪೆ ಬೆಲ್ಲಾನೂ! ಬುದ್ಧಿ ಮಾತನ್ ಒದ್ದು ಹೇಳೋದ್ ಅಪ್ಪ ಅಲ್ದೆ ಯಾರು? ಆಗಿದ್ಹಂಗಿರುತ್ತೆ ಒಂದೊಂದ್ ಮಾತೂ ಹಾಗಲಕಾಯಿ ಚೂರು! ಮಕ್ಳು ಅಂದ್ರೆ ಅಜ್ಜೀಗ್ ಮುದ್ದು ಲಬೊ ಲಬೊ ಹೊಡ್ಕೋತೀವಿ, ಥೂ ಮುಂಡೇವೇ ತೊಲಗ್ರೊ ಮೊದಲು ಅಂತ ಬೈಸ್ಕೋತೀವಿ ಅಪ್ಪ ಇದ್ರೆ […]

#ನಗೆ ಹನಿ

ನಗೆ ಡಂಗುರ – ೧೮೭

0
ಪಟ್ಟಾಭಿ ಎ ಕೆ
Latest posts by ಪಟ್ಟಾಭಿ ಎ ಕೆ (see all)

ಬೀಚಿಯವರು ಹೇಳಿದ ಜೋಕು: “ದೇಶಭಕ್ತನಿಗೆ ನಿಮ್ಮ ‘ಕೈಕೊಡಬೇಡಿ ಏಕೆಂದರೆ ನಿಮ್ಮ ಕೈಯಲ್ಲಿರುವ ಉಂಗುರ ಕಸಿದು ಬಿಡುತ್ತಾನೆಂದು ಖಂಡಿತಾ ಅಲ್ಲ, ಬೆರಳನ್ನೇ ಕಸಿದು ಬಿಟ್ಟಾನು ಎಂದು.!” ***

#ವಚನ

ಲಿಂಗಮ್ಮನ ವಚನಗಳು – ೬೭

0

ಕಂಡು ಕೇಳಿಹೆನೆಂಬ ದುಂದುಗ ಬಿಟ್ಟು, ನೋಡಿ ನುಡಿವೆನೆಂಬ ನೋಟವ ನಿಲಿಸಿ, ಮಾಡಿ ಕೂಡಿಹೆನೆಂಬ ಮನ ನಿಂದು, ತನುವ ಮರೆದು, ತಾ ನಿಜ ಸುಖಿಯಾದಲ್ಲದೆ, ಘನವ ಕಾಣಬಾರದೆಂದರು ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ. *****