ಕೊನೆಯದಾಗಿ……..

ಪ್ರವಾಸ ಸಾಹಿತ್ಯದ ಓದಿನ ಮೂಲಕ ಈ ವರೆಗೆ ಜಗತ್ತಿನ ಅನೇಕ ದೇಶಗಳನ್ನು ಸುತ್ತಾಡಿ ಬಂದಂತಾಯ್ತು. ಪ್ರತಿಯೊಬ್ದ ಲೇಖಕರದ್ದು ವಿಭಿನ್ನ ದೃಷ್ಟಿಕೋನಗಳು. ಈ ಹಿನ್ನೆಲೆಯಲ್ಲಿ ಆಯಾ ದೇಶಗಳ ರಾಜಕೀಯ, ಸಾಮಾಜಿಕ, ಐತಿಹಾಸಿಕ, ಕಲೆ ಸಂಸ್ಕೃತಿಗಳ ಪರಿಚಯ ಮಾಡಿಕೊಂಡಂತಾಯ್ತು. ಭಾರತ ದೇಶದ ಉದ್ದಗಲ ಪ್ರವಾಸಿಸಿದ ಪ್ರವಾಸಿಗರ ಕಥನಗಳಲ್ಲಿ ನಮ್ಮ ಸಂಸ್ಕೃತಿಯ ಬಗೆಗಿನ ಹೆಚ್ಚಿನ ಪರಿಚಯ. ವಿವರಣೆಗಳಿದ್ದು ಅವುಗಳೆಲ್ಲದರ ಒಟ್ಟಾರೆಯಾದ ಚಿತ್ರಣ ನಮ್ಮ ಕಣ್ಣೆದುರಿಗೆ ಕಟ್ಟುವಂತಿವೆ. ಹಾಗೆಯೇ ವಿದೇಶ ಪ್ರವಾಸ ರಚಿಸಿದ ಹೆಚ್ಚಿನ ಲೇಖಕರು ಅಲ್ಲಿಯ ಸಮೃದ್ಧತೆಯ ಬಗೆಗೆ ಹೊಗಳಿದ್ದಾರೆ. ಸ್ವರ್ಗದ ಅನುಭವ ಪಡೆದೆವು ಎಂದೂ ಹೇಳಿಕೊಂಡಿದ್ದಾರೆ. ಆ ಸ್ವರ್ಗ ಅಲ್ಲಿಯ ವಿಜ್ಞಾನ  ತಂತ್ರಜ್ಞಾನದ ಪ್ರಗತಿಯಿಂದ ಪ್ರತಿಯೋರ್ವರನ್ನೂ ಮೂಕವಿಸ್ಮಿತರನ್ನಾಗಿ  ಮಾಡಿದೆ. ಅಷ್ಟೇ ಅಲ್ಲದೆ ಆ ಜನರ ಶಿಸ್ತು. ಸಮಯ  ವೃತ್ತಿಪರತೆ, ವಾರಾಂತ್ಯ ರಜಾದಿನಗಳನ್ನು ಸಂತೋಷವಾಗಿ ಕಳೆಯುವ ಪ್ರವೃತ್ತಿಯ ಬಗೆಗೆ ಮೆಚ್ಚಿ- ಕೊಂಡಿದ್ದಾರೆ. ಕೆಲವರು ನಮ್ಮ ದೇಶದ ರಾಜಕೀಯ, ಸಾಮಾಜಿಕ ಪರಿಸ್ಥಿತಿಗಳ ಬಗೆಗೆ ಅಲ್ಲಲ್ಲಿ ಚರ್ಚಿಸಿಕೊಳ್ಳುತ್ತ ಬಯ್ಪುಕೊಳ್ಳುತ್ತ ಬರೆದುಕೊಂಡು ಹೋದವರೂ ಇದ್ದಾರೆ. ಇರಲಿ. ಪ್ರವಾಸ ಸಾಹಿತ್ಯದ ಓದಿನಿಂದ ಒಟ್ಟಾರೆಯಾಗಿ ವಿಶ್ವದ ಅಧ್ಯಯನ ಮಾಡಲು ಸಹಾಯವಾಗುತ್ತದೆ.

ಇತ್ತೀಚಿಗೆ ಪ್ರವಾಸಕ್ಕೆ ಹೋರಡುವುದು ತೀರಾ ಸಲೀಸಾಗಿಬಿಟ್ಟಿದೆ. ಪ್ರವಾಸೋದ್ಯಮ ಇಲಾಖೆಯವರು ಜಗತ್ತಿನಾದ್ಯಂತ ಶಾಖೆಗಳನ್ನು ತೆಗೆದು ಪ್ರವಾಸಿಗರಿಗೆ ಸಾಕಷ್ಟು ಅನುಕೂಲತೆಗಳನ್ನು ಒದಗಿಸಿಕೊಡುತ್ತಿದ್ದಾರೆ. ಇಂದು ಅಮೆರಿಕೆಗೆ ಹೋಗಬೇಕೆನ್ನುವುದು ಬಹಳ ಸಹಜವಾಗಿಯೇ ನಮ್ಮ ನೆರೆಹೊರೆಯ ಊರಿಗೆ ಹೋದಂತೆಯೇ ಅಗುತ್ತಿದೆ. ಕೈ ತುಂಬಾ ಹಣ ಇರಬೇಕದ್ದೇ. ಪ್ರವಾಸಿ ಏಜೆಂಟರು ನಿಮ್ಮ ಮನೆಗೇ ಟಿಕೆಟ್ ತಂದು ಕೊಡುತ್ತಾರೆ.

ಪ್ರವಾಸ ಕೇವಲ ಮೋಜುಮಜವಾಗಿ ಮಾಡಿಕೊಂಡು ಬರಬಾರದಷ್ಟೆ. ಅವಕಾಶಗಳನ್ನು ಬಳಸಿಕೊಂಡು ಆಯಾ ದೇಶಗಳ ರೀತಿ ನೀತಿಗಳನ್ನು ಪರಿಚಯಿಸಿಕೊಳ್ಳುತ್ತ ಜ್ಞಾನಾಭಿವೃದ್ಧಿ ಮಾಡಿಕೊಂಡು ಬರಬೇಕಾದುದು ಅತೀ ಮಹತ್ವ.

ಆದರೆ ಕಂಡದ್ದನ್ನೆಲ್ದಾ ದಾಖಲಿಸಬೇಕೆನ್ನುವ ಹುಚ್ಚು ಹಿಡಿದು ಬಿಟ್ಟರೆ ಅದು ಆ ಪ್ರದೇಶದ, ದೇಶದ ಕೈಪಿಡಿಯಾಗು- ತ್ತದೆಯೇ ಹೊರತು ಮೌಲ್ಯಯುತವಾದ ಸಾಹಿತ್ಯವಾಗುವುದಿಲ್ಲ.

ಪ್ರವಾಸ ಸಾಹಿತ್ಯ ತನ್ನ ಪ್ರಯಾಸದ 120 ಮೆಟ್ಟಿಲುಗಳನ್ನೇರಿ (ವರ್ಷಗಳು) ಶಿಖರ ತಲುಪಿದ ಸಂಭ್ರಮದಲ್ಲಿದೆ. ನಮ್ಮಲ್ಲಿ ಪ್ರವಾಸಿಗರು ಲವಲವಿಕೆಯಿಂದ ವಿಶ್ವದ ನಾನಾ ಕಡೆಗೆ ಹೆಜ್ಜೆ ಮೂಡಿಸಿ ಬಂದಿದ್ದಾರೆ. ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ಧಾರೆ. ಅವರೆಲ್ಲರಿಗೂ ಮತ್ತೊಮ್ಮೆ ವಂದನೆಗಳು.

****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಕ್ಷಗಾನ ಲಕ್ಷಣ ಮತ್ತು ಪ್ರಭೇದಗಳು
Next post ನಿನ್ನ ಬರುವು

ಸಣ್ಣ ಕತೆ

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…