ಕಂಡು ಕೇಳಿಹೆನೆಂಬ ದುಂದುಗ ಬಿಟ್ಟು,
ನೋಡಿ ನುಡಿವೆನೆಂಬ ನೋಟವ ನಿಲಿಸಿ,
ಮಾಡಿ ಕೂಡಿಹೆನೆಂಬ ಮನ ನಿಂದು,
ತನುವ ಮರೆದು, ತಾ ನಿಜ ಸುಖಿಯಾದಲ್ಲದೆ,
ಘನವ ಕಾಣಬಾರದೆಂದರು
ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ.
*****