ರೆನೆಯನ್ನು ಕಂಡಮೇಲೆ ನನ್ನ ಜೀವನದ ದೃಷ್ಟಿಕೋನವೇ
ಬದಲಾಯಿತು-ಎನ್ನುವುದು ಹೇಗೆ?  ಯಾವುದೂ
ಅಷ್ಟು ಬೇಗನೆ ಬದಲಾಗುವುದಿಲ್ಲ.  ಉದಾಹರಣೆಗೆ
ಅಬೀಡ್ಸಿನಲ್ಲಿ ಸಂಜೆಯಾಗುವುದು ನಮೆಗೆ ಗೊತ್ತಾಗುವುದೆ ಇಲ್ಲ.
ಅಂಗಡಿಯವರು ಒಬ್ಬೊಬ್ಬರಾಗಿ ಬೆಳಕು ಹಾಕುವ ನಿಮಿಷ
ನಾವು ಗಮನಿಸುವುದೆ ಇಲ್ಲ.  ಬೇಕೆಂದಾಗ ಸಮಯವನ್ನು
ಸ್ಥಗಿತಗೊಳಿಸಬಲ್ಲೆವಾದ್ದರಿಂದಲೆ ನಾವು ವಾಹನಗಳ ದಟ್ಟಣೆಯಲ್ಲೂ
ಬೀದಿ ದಾಟಬಲ್ಲೆವು-ಎಲ್ಲವನ್ನೂ ಬಿಟ್ಟು ಒಂದು ರೆಸ್ಟುರಾ ಹೊಕ್ಕು
ನಮ್ಮಷ್ಟಕ್ಕೆ ಇರಬಲ್ಲೆವು.  ಬುದ್ಧನು ಕೂಡ ದಾಟಿದ್ದ
ಬುದ್ಧನಾಗುವುದಕ್ಕೆ ಹಲವು ಬೀದಿಗಳನ್ನು.
*****