ಶುಚಿರ್ಭೂತನಾಗಿ
ಗುಡಿಯ ಕಿವುಡು ದೇವರಿಗೆ
ಕೇಳಿಸಲೆಂದು ಗಂಟೆ ಬಡಿದು
ಕಲ್ಲಿಗೆ ತೆಂಗಿನ ಕಾಯಿ ಒಡೆದು
ಭಕ್ತಿಯ ಮಹಾಪೂರ
ಹರಿಸುವುದು ಬೇಡ
ಕತ್ತಲ ಕರ್ಮಗಳಿಗಾಗಿ
ಬೆಳಕಿನಲಿ ಪ್ರಾಯಶ್ಚಿತ್ತ
ಮಾಡಿಕೊಳ್ಳುವುದೂ ಬೇಡ

ಸುಮ್ಮನೇ ಇರುವುದಕ್ಕೆ ಬಾರದೆ ಬರಿದೆ
ಸುಮ್ಮನೆ ಎಂದರೆ ಸುಮ್ಮನೆ
ಗಾಳಿ ಬೀಸುವಂತೆ
ನೀರು ಹರಿಯುವಂತೆ
ಬೆಂಕಿ ಉರಿಯುವಂತೆ
ನೆಲವು ಬೆಳೆಸುವಂತೆ

ನೀನ್ಯಾಕೋ ನಿನ್ನ ಹಂಗ್ಯಾಕೊ
ನನ್ನ ಕೆಲಸದಿ ಮೈಮನ
ಮುಳುಗಿರೆ ಸಾಕೂ
ಎಂದು ಆ ದೇವರಿಗೆ ಸವಾಲು ಹಾಕು
*****

Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)