ಸದಾನಂದ ಪರಮಾತ್ಮ ಬೋಧಮಯ

ಸದಾನಂದ ಪರಮಾತ್ಮ ಬೋಧಮಯ
ಇದೇ ಬ್ರಹ್ಮಜ್ಞಾನ ನೋಡಿಕೋ ಇದೇ ಬ್ರಹ್ಮಜ್ಞಾನ ||ಪ||

ನಿಧಾನದಲಿ ನಿಜ ಹೃದಯ ಕಮಲದಲಿ
ಸುಧಾಕಿರಣ ಗುರುಪದಾಬ್ಜ ಕಂಡರೆ
ಇದೇ ಬ್ರಹ್ಮಜ್ಞಾನ ನೋಡಿಕೋ ಇದೇ ಬ್ರಹ್ಮಜ್ಞಾನ ||೧||

ಯೋಗಿಯಾಗಿ ಸಂಭೋಗ ಮಾಡಿ
ರೋಗವಳಿದು ನಿಜರಾಗಿ ಮೆರೆದರೆ
ಇದೇ ಬ್ರಹ್ಮಜ್ಞಾನ ನೋಡಿಕೋ ಇದೇ ಬ್ರಹ್ಮಜ್ಞಾನ ||೨||

ವಸುಧಿಯೊಳಗೆ ಶಿಶುನಾಳಧೀಶನ
ಹೆಸರು ಹೊಗಳಿ ಐದಕ್ಷರ ನುಡಿದರೆ
ಇದೇ ಬ್ರಹ್ಮಜ್ಞಾನ ನೋಡಿಕೊ ಇದೇ ಬ್ರಹ್ಮಜ್ಞಾನ ||೩||

****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇದೇ ಮನಿ ಹೃದಯದೊಳಗೆ ನಲಿದಾಡುವ ಅತ್ಮನಿಗೆ
Next post ಅಣ್ಣ ನೋಡೋಣು ಬಾರೋ

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…