ಕಂಡದ್ದು ಕಂಡಹಾಗೆ

ಮನಸ್ಸಿಗೆ ನಾಟುವ ಪ್ರತೀಕಗಳನ್ನು ಬಯಸುವವರಿಗೆ
ಅರ್ಧ ಓದಿ ಬೋರಲು ಹಾಕಿದ ಪುಸ್ತಕ,
ಮೇಜಿನ ಮೇಲೆ ತೆಗೆದಿಟ್ಟ ಟೆಲಿಫೋನು,
ಬಟವಾಡೆಯಾಗದೆ ಬಂದ ಪತ್ರ-ಏನೂ
ಅನಿಸುವುದಿಲ್ಲ.

ಬೃಹತ್ತಾದ ಪ್ರತಿಮೆಗಳನ್ನು ಹುಡುಕಿಕೊಂಡು ಹೋದವರು
ರಸ್ತೆ ಚೌಕಗಳಲ್ಲಿ ಮೇಲೆ ನೋಡುತ್ತ ನಿಂತರು.
ಕೆಲವರು ಏನು ಧ್ಯಾನಿಸುತ್ತಾರೋ ಅದೇ
ಆಗಬಲ್ಲರು.

ಮಹಾದಾರ್ಶನಿಕರು ಮಹಾದರ್ಶನಗಳನ್ನು ಕೊಡುವರು.
ಕೆಲವು ದೃಷ್ಟಿಗೆ ಸಣ್ಣ ವಸ್ತುಗಳು ಬೀಳಲಾರವು.
ಉದಾಹರಣೆಗೆ: ಈ ಹಿಂದೆ ಹೇಳಿದ
ಅರ್ಧ ಓದಿ

ಬೋರಲು ಹಾಕಿದ ಪುಸ್ತಕ ಅಥವ ಹೊತ್ತಲ್ಲದ ಹೊತ್ತು
ಕಾಮಾಕ್ಷಮ್ಮನ ಹಿತ್ತಿಲಲ್ಲಿ ಆರಲು ಹಾಕಿದ ಕಾಚ-
ಸಣ್ಣ ಸಣ್ಣ ಕವಿಗಳು ಸಣ್ಣ ಸಣ್ಣ ಕವಿತೆಗಳನ್ನು
ಬರೆಯುತ್ತಾರೆ.
*****

ಕೀಲಿಕರಣ : ಕಿಶೋರ್‍ ಚಂದ್ರ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಖುಷಿಯಾಗಿ ಕೂರೋಣ ಅಂದ್ಕೊಂಡರೆ
Next post ಧಿಮಾಕು

ಸಣ್ಣ ಕತೆ

 • ಮರೀಚಿಕೆ

  -

  ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… ಮುಂದೆ ಓದಿ.. 

 • ನಿರಾಳ

  -

  ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… ಮುಂದೆ ಓದಿ.. 

 • ಸಂಶೋಧನೆ

  -

  ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… ಮುಂದೆ ಓದಿ.. 

 • ಆ ರಾತ್ರಿ

  -

  ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… ಮುಂದೆ ಓದಿ.. 

 • ಮಲ್ಲೇಶಿಯ ನಲ್ಲೆಯರು…

  -

  ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… ಮುಂದೆ ಓದಿ..