– ಗೋವಿನ ಹಾಡು ಗೀತೆಯನ್ನು ಆಧರಿಸಿ ರಚಿಸಿದ ಗೀತರೂಪಕ. ಇದನ್ನು ಆಡಿಸುವಾಗ ಪಾತ್ರಗಳ ಜೊತೆಯಲ್ಲಿ ಹಾಡುವ ಮೇಳಗಳನ್ನೂ ಬಳಸಬಹುದು. ಕಾಳಿಂಗ ಎಂಬ ಗೊಲ್ಲ ಮನುಜ ಗಿನುಜರಾ ಕಥೆಯಲ್ಲ – ಇದು ದೇವದಾನವರ ಸ್ತುತಿಯಲ್ಲ, ಆಡಿದ ಮಾತಿಗೆ ಜೀವವ ...

ಅಯ್ಯ, ಕಿಚ್ಚಿನೊಳಗೆಬೆಂದ ಕಾಯಕ್ಕೆ ಅಚ್ಚುಗ ಉಂಟೆ? ತಾನುತಾನಾದ ಬಳಿಕ ಮೂವ ಹಂಗುಂಟೆ? ಮನವು ಮಹದಲ್ಲಿ ನಿಂದ ಬಳಿಕ ಮರವೆಯುಂಟೇ? ತನುವ ಮರೆದಂಗೆ, ಇನ್ನಿದಿರೆಂಬುದುಂಟೆ? ಬೆಳಗ ಕಂಡವಂಗೆ ಕತ್ತಲೆಯ ಹಂಗುಂಟೆ? ಇವೆಲ್ಲವನು ಹಿಂಗಿಸಿ, ಈ ಮಹದಲ್ಲಿ ಬೆರ...

ಅಮ್ಮಾ! ನಿನ್ನ ಕಥೆಯ ಕೀರ್ತಿಸುತ ನಿಂತವರು ಬಹಳ, ನಿನ್ನ ಮೈಯಂದವ ಅಂದಗೆಡುವಷ್ಟು ಹಾಡಿ ಹೊಗಳಿದವರು ಬಹಳ, ಕಲ್ಪನೆಯ ಕುಂಚದಲಿ ಬಣ್ಣಿಸಿದವರು ಬಹಳ ನಿನ್ನ ಗುಡಿಯ ಸಾಲು ಸಾಲಭಂಜಿಕೆಗಳ, ಮದನಿಕೆಗಳ ಕುಸುರಿಗೆಲಸಗಳ ನೋಡಿ ಮರುಳಾಗಿ ಬಾಯ್ತೆರೆದು ಅಲ್ಲೇ...

ಪ್ರಿಯ ಸಖಿ, ಅವರ ಕಾರು ಭರ್ರನೆ ಓಡುತ್ತಿದೆ. ರಸ್ತೆ ಮಧ್ಯದಲ್ಲಿ ಸೌದೆ ಹೊರೆ ಕಟ್ಟು ಬಿಚ್ಚಿಕೊಂಡು ಚೆಲ್ಲಾಪಿಲ್ಲಿಯಾಗಿಬಿಟ್ಟಿದೆ. ಇದನ್ನು ಕಂಡ ಅವರು ಗಕ್ಕನೆ ನಿಲ್ಲಿಸುತ್ತಾರೆ. ಕಾರಿನಿಂದಿಳಿದ ಅವರು ಆ ಮುದುಕನಿಗೆ ಸೌದೆಯನ್ನು ಆಯ್ದು ಹೊರೆ ಕಟ...

ಹದಿಹರೆಯದವರ ಮರೆತಜಗತ್ತು ಮೊದಲೆರಡು ಸೀಟುಗಳಲಿ; ಹಿಂದೆ ಅಲ್ಲಲ್ಲಿ ಇಣುಕಿ ಹಾಕಿದ ಬಿಳಿಕೂದಲಿನ ಮಧ್ಯವಯಸ್ಕರ ಆಲೋಚನಾ ಮಾತುಕತೆ; ಇನ್ನೂ ಹಿಂದೆ ನೆರಿಗೆಹೊತ್ತ ಕೋಲು ಹಿಡಿದವರ ಗಂಭೀರ ನಿದ್ದೆ; ಬೋನಸ್‌ದಿನಕ್ಕೆ ಖುಷಿಪಟ್ಟು ಮೊಮ್ಮಕ್ಕಳು ತಿನಿಸಿದ ...

ಹಳೆಗನ್ನಡದ ಆಸೆ ಕರೆಯಿತು ನನ್ನ ಶತಮಾನಗಳ ಕೆಳಗೆ, ಸೆಳೆಯಿತು ನಾನರಿಯದ ಪರಂಪರೆಗೆ, ಭಾಷೆಗೆ, ಭಾಷೆ ಹತ್ತಿರವಾಯಿತು ಎನಿಸಿದ ಬಗೆಗೆ. ಉದಾಹರಣೆಗೆ: ಆ ಸೂತ ಆ ರಾಣಿಯ ಹಾರ ಕಿತ್ತುಕೊಂಡ ರೀತಿಯಷ್ಟೆ ಅಲ್ಲ, ಅದರ ಹರಳುಗಳು ನೆಲದಲ್ಲಿ ಚೆಲ್ಲಿದ ರೀತಿ. ...

ರಾತ್ರಿಯೆಲ್ಲಾ ಕಷ್ಟಪಟ್ಟು ಪ್ರೀತಿಯಿಂದ ಕಟ್ಟಿಕೊಂಡ ಕನಸ ಸೌಧಗಳನ್ನೆಲ್ಲ ಅಕ್ರಮ ಕಾನೂನುಬಾಹಿರವೆಂದು ಹಾಡಹಗಲೇ ಒಡೆದು ನೆಲಸಮ ಮಾಡುವ ಬಿ.ಡಿ.ಎ. ಬುಲ್ಡೋಜರ್‍ ಈ ಸೂರ್ಯ. *****...

ಅನು ಎದ್ದ ಸಮಯವೇ ಸರಿ ಇರ್ಲಿಲ್ಲ ಅನ್ನಿಸುತ್ತೆ. ಆಫೀಸಿಗೆ ಲೇಟಾಗಿಬಿಟ್ಟತ್ತು. ಅವಸರವಾಗಿ ಗಾಡಿ ಸ್ಟಾರ್ಟ್ ಮಾಡಿ ನಾಲ್ಕು ಹೆಜ್ಜೆ ಮುಂದಿಟ್ಟಿರಲಿಲ್ಲ. ‘ಟಪ್” ಅಂತ ಟೈರ್ ಪಂಕ್ಚರ್. ‘ಥೂ’ ಎಂದು ಕೈನಿಯನ್ನು ಒದ್ದು ಹಿಂದಕ್ಕೆ ತಂದು ನಿಲ್ಲ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...