ಮದುವೆ ಬಸ್ಸು; ಕಾಫಿ ಹುಡುಗ

ಹದಿಹರೆಯದವರ ಮರೆತಜಗತ್ತು
ಮೊದಲೆರಡು ಸೀಟುಗಳಲಿ;
ಹಿಂದೆ ಅಲ್ಲಲ್ಲಿ ಇಣುಕಿ ಹಾಕಿದ
ಬಿಳಿಕೂದಲಿನ ಮಧ್ಯವಯಸ್ಕರ
ಆಲೋಚನಾ ಮಾತುಕತೆ;
ಇನ್ನೂ ಹಿಂದೆ ನೆರಿಗೆಹೊತ್ತ
ಕೋಲು ಹಿಡಿದವರ ಗಂಭೀರ ನಿದ್ದೆ;
ಬೋನಸ್‌ದಿನಕ್ಕೆ ಖುಷಿಪಟ್ಟು
ಮೊಮ್ಮಕ್ಕಳು ತಿನಿಸಿದ ಚಾಕಲೇಟ್
ಸೀಪುವ ೯೫ರ ಅಜ್ಜ.

ಗೆಳೆಯ ಗೆಳತಿಯರ ಹರಟೆ
ಮತ್ತೊಂದು ಬದಿಗೆ;
ಬಂಧು ಬಳಗದವರ ಚರ್ಚೆ
ಬಟ್ಟೆ ಬರೆ ಚಿನ್ನಾಭರಣಗಳ ದಾಖಲೆ,
ವೃದ್ಧರಿಗೆ ಬಿಸಿಕಾಫಿಯ ಆಸೆ
ಥರ್ಮಾಸ್ ತಂದ ಹುಡುಗನಿಗೆ
ಲಾಡೂ ಚೂಡಾಗಳ ಭಾರ.

ದಿನಕ್ಕೊಂದೊಂದಾದರೂ ಮದುವೆಬಸ್ಸು
ನಿಲ್ಲಬಾರದೆ? ನನ್ನೂರಲ್ಲಿ –
ಅವರಿಗೆ ಕಾಫಿ, ನನಗೆ ಲಾಡೂ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಳೆಗನ್ನಡದ ಆಸೆ
Next post ತುಂಟ

ಸಣ್ಣ ಕತೆ

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಎಪ್ರಿಲ್ ಒಂದು

    ಒಮ್ಮೆಲೇ ಅವನಿಗೆ ಮದುವೆಯಾಗಿಬಿಡಬೇಕೆಂಬ ವಿಚಾರ ಬಂತು. ಮದುವೆಯಾಗುವದೆಂದರೆ ಒಂದು ಸಹಜವಾದ ವಿಚಾರವೆಂದು ಕೆಲವರಿಗೆ ಅನಿಸಬಹುದು. ಆದರೆ ಅವನದು ಮಾತ್ರ ಹಾಗಿರಲಿಲ್ಲ. ಎಲ್ಲರೂ ಅವನಿಗೆ ‘ಆಜನ್ಮ ಬ್ರಹ್ಮಚಾರಿ’ ಎಂಬ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…